ಬೆಂಗಳೂರು: 75ನೇ ವರ್ಷದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ರಾಷ್ಟ್ರಪೀತ ಮಹಾತ್ಮ ಗಾಂಧೀಜಿಯವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಪಮಾನ ಮಾಡಿದ್ದಾರೆಂದು ಕಿಡಿಕಾರಿದೆ.
ಭಾನುವಾರ ನಡೆದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಫೋಟೋಗೆ ನಮಿಸುವ ಆರಗ ಜ್ಞಾನೇಂದ್ರ ಬಳಿಕ ಆ ಫೋಟೋವನ್ನೇ ಆಸರೆ ಮಾಡಿಕೊಂಡು ತಮ್ಮ ಶೂವನ್ನು ಧರಿಸುತ್ತಾರೆ. ಈ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಗೃಹಸಚಿವರಿಗೆ ಬೂಟು ಹಾಕಿಕೊಳ್ಳಲು ಗಾಂಧಿ ಆಸರೆಯೇ?’ ಎಂದು ಪ್ರಶ್ನಿಸಿದೆ.
ಗೃಹಸಚಿವರಿಗೆ ಬೂಟು ಹಾಕಿಕೊಳ್ಳಲು ಗಾಂಧಿ ಆಸರೆಯೇ?
ಮಹಾತ್ಮ ಗಾಂಧಿಯವರಿಗೆ ಈ ರೀತಿಯಲ್ಲಿ ಅವಮಾನಿಸುವ ನಿರ್ದೇಶನ ನಾಗಪುರದಿಂದ ಬಂದಿತ್ತೇ @JnanendraAraga ಅವರೇ?
ಕಾನೂನು ಸುವ್ಯವಸ್ಥೆ ನಿರ್ವಹಿಸುವುದನ್ನೂ ತಿಳಿಯದ, ಮಹನೀಯರಿಗೆ ಗೌರವಿಸುವುದನ್ನೂ ಅರಿಯದ ಸಚಿವರು ದೇಶಭಕ್ತಿಯ ಬಗ್ಗೆ ಭಾಷಣ ಬಿಗಿಯುವುದು ಹಾಸ್ಯಾಸ್ಪದ.#NakliDeshBhakts pic.twitter.com/xZgdmDr3DV
— Karnataka Congress (@INCKarnataka) August 16, 2022
ಇದನ್ನೂ ಓದಿ: ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ: ದುಷ್ಟ ಶಕ್ತಿಗಳ ಮಟ್ಟ ಹಾಕಲಾಗಿದೆ ಎಂದ ಬಿಜೆಪಿ
‘ಗೃಹ ಸಚಿವರಿಗೆ ಬೂಟು ಹಾಕಿಕೊಳ್ಳಲು ಗಾಂಧಿ ಆಸರೆಯೇ? ಮಹಾತ್ಮ ಗಾಂಧಿಯವರಿಗೆ ಈ ರೀತಿಯಲ್ಲಿ ಅವಮಾನಿಸುವ ನಿರ್ದೇಶನ ನಾಗಪುರದಿಂದ ಬಂದಿತ್ತೇ ಆರಗ ಜ್ಞಾನೇಂದ್ರ ಅವರೇ? ಕಾನೂನು ಸುವ್ಯವಸ್ಥೆ ನಿರ್ವಹಿಸುವುದನ್ನೂ ತಿಳಿಯದ, ಮಹನೀಯರಿಗೆ ಗೌರವಿಸುವುದನ್ನೂ ಅರಿಯದ ಸಚಿವರು ದೇಶಭಕ್ತಿಯ ಬಗ್ಗೆ ಭಾಷಣ ಬಿಗಿಯುವುದು ಹಾಸ್ಯಾಸ್ಪದ’ವೆಂದು ಕಾಂಗ್ರೆಸ್ ಟೀಕಿಸಿದೆ.
ಕೈಲಾಡುವ ಗೊಂಬೆಯಂತೆ ‘ಮ್ಯಾನೇಜ್’!
ತಳ್ಳಿಕೊಂಡು ಹೋಗ್ತಿರುವ
ಬಿಜೆಪಿ ಸರ್ಕಾರದಲ್ಲಿ MMSಗಳು ಹೊರಬರುತ್ತಲೇ ಇರುತ್ತವೆ!ಬಿಜೆಪಿ ನಾಯಕರ ಅಶ್ಲೀಲ ಚಿತ್ರಗಳ MMSಗಳು ಒಂದೆಡೆಯಾದರೆ, #BJPvsBJP ಕಿತ್ತಾಟದಲ್ಲಿರುವ MMS ಮತ್ತೊಂದೆಡೆ!
Mಮುನಿರತ್ನ, Mಮಾಧುಸ್ವಾಮಿ, Sಸೋಮಶೇಖರ್!
ಈ ಕಿತ್ತಾಟ ನಿಲ್ಲಿಸಲಾಗದೆ ಕೈಲಾಡುವ ಗೊಂಬೆಯಂತೆ 'ಮ್ಯಾನೇಜ್' ಮಾಡುತ್ತಿದ್ದಾರೆ ಸಿಎಂ!
— Karnataka Congress (@INCKarnataka) August 16, 2022
ತಳ್ಳಿಕೊಂಡು ಹೋಗ್ತಿರುವ ಬಿಜೆಪಿ ಸರ್ಕಾರದಲ್ಲಿ MMSಗಳು ಹೊರಬರುತ್ತಲೇ ಇರುತ್ತವೆ! ಬಿಜೆಪಿ ನಾಯಕರ ಅಶ್ಲೀಲ ಚಿತ್ರಗಳ MMSಗಳು ಒಂದೆಡೆಯಾದರೆ, #BJPvsBJP ಕಿತ್ತಾಟದಲ್ಲಿರುವ MMS ಮತ್ತೊಂದೆಡೆ! Mಮುನಿರತ್ನ, Mಮಾಧುಸ್ವಾಮಿ, Sಸೋಮಶೇಖರ್! ಈ ಕಿತ್ತಾಟ ನಿಲ್ಲಿಸಲಾಗದೆ ಕೈಲಾಡುವ ಗೊಂಬೆಯಂತೆ ಸಿಎಂ ಬಸವರಾಜ್ ಬೊಮ್ಮಾಯಿ 'ಮ್ಯಾನೇಜ್' ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಕುಟುಕಿದೆ.
ಇದನ್ನೂ ಓದಿ: ಸಾಕ್ಷ್ಯಾಧಾರ ಇದ್ದರೆ PFI, SDPI ಸಂಘಟನೆಗಳನ್ನು ನಿಷೇಧಿಸಲಿ: ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.