ಬೆಂಗಳೂರು: ಪೆಟ್ರೋಲ್-ಡೀಸೆಲ್, ಅಡುಗೆ ಎಣ್ಣೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಹಣದುಬ್ಬರದ ಹೊಡೆತಕ್ಕೆ ನಲುಗಿಹೋಗಿರುವ ಜನರು ಜೀವನ ನಡೆಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆಯೇ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 50 ರೂ. ಹೆಚ್ಚಳವಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಲೆ ಏರಿಕೆ ವಿಚಾರವಾಗಿಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ‘ಕೈ’ ಪಕ್ಷ, ‘ಮತ್ತೊಮ್ಮೆ ಅಡುಗೆ ಅನಿಲದ ಬೆಲೆ ₹50 ಏರಿಕೆಯಾಗಿದೆ. ಈಗ ಸಾವಿರಕ್ಕೊಂದೇ ಸಿಲಿಂಡರ್! ಬಿಜೆಪಿ ಸರ್ಕಾರ ಜನರನ್ನು ಉಪವಾಸ ಮಲಗಿಸಲು ಪಣ ತೊಟ್ಟಿರುವುದು ಸ್ಪಷ್ಟ. ಮೋದಿಯವರ "ಅಚ್ಛೆ ದಿನ್" ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ, ಜನರ ಬದುಕನ್ನು ಮುಗಿಸುವುದರಲ್ಲಿ ಮಾತ್ರ!’ವೆಂದು ಟೀಕಿಸಿದೆ.
ಮತ್ತೊಮ್ಮೆ ಅಡುಗೆ ಅನಿಲದ ಬೆಲೆ ₹50 ಏರಿಕೆಯಾಗಿದೆ.
ಈಗ ಸಾವಿರಕ್ಕೊಂದೇ ಸಿಲಿಂಡರ್!ಬಿಜೆಪಿ ಸರ್ಕಾರ ಜನರನ್ನು ಉಪವಾಸ ಮಲಗಿಸಲು ಪಣ ತೊಟ್ಟಿರುವುದು ಸ್ಪಷ್ಟ.
ಮೋದಿಯವರ "ಅಚ್ಛೆ ದಿನ್" ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ, ಜನರ ಬದುಕನ್ನು ಮುಗಿಸುವುದರಲ್ಲಿ ಮಾತ್ರ!
— Karnataka Congress (@INCKarnataka) May 7, 2022
ಇದನ್ನೂ ಓದಿ: ಮೀಟರ್ ಡೆಪಾಸಿಟ್ ಮೊತ್ತವನ್ನ ಏರಿಸಿದ ಬೆಸ್ಕಾಂ: ಗ್ರಾಹಕರಿಂದ ತೀವ್ರ ವಿರೋಧ
ಬಿಜೆಪಿಗೆ ರಾಜಕೀಯವೆಂದರೆ 'ವ್ಯಾಪಾರ'!
‘ರಾಜಕಾರಣವೆಂದರೆ ನನಗೆ ವ್ಯವಹಾರವಿದ್ದಂತೆ ಎಂದು ಅಮಿತ್ ಶಾ ಹೇಳುತ್ತಾರೆ. ಸಿಎಂ ಹುದ್ದೆಗೆ 2,500 ಕೋಟಿ ಕೊಡಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳುತ್ತಾರೆ. ಯಾವುದೇ ಅಜೆಂಡಾವಿಲ್ಲದೆ ತಿಂಗಳಿಗೊಮ್ಮೆ ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿ ಭೇಟಿಗೆ ತೆರಳುತ್ತಾರೆ. PSI ನೇಮಕಾತಿ ಹಗರಣ, ಕೋವಿಡ್ ಹಗರಣ, ವರ್ಗಾವಣೆ ಅಕ್ರಮ, 40% ಕಮಿಷನ್ ಹಗರಣ ಇತ್ಯಾದಿಗಳು ಬಿಜೆಪಿಯ ಭ್ರಷ್ಟಾಚಾರದ ಕ್ರೋನಾಲಜಿ. ಬಿಜೆಪಿಗೆ ರಾಜಕೀಯವೆಂದರೆ 'ವ್ಯಾಪಾರ'!’ವೆಂದು ಕಾಂಗ್ರೆಸ್ ಮತ್ತೊಂದು ಟ್ವೀಟ್‍ನಲ್ಲಿ ಕುಟುಕಿದೆ.
ಬಿಜೆಪಿ ಶಾಸಕ ಯತ್ನಾಳ್ ಅವರ 2500 ಕೋಟಿಯ ಸಂಗತಿ ಅತ್ಯಂತ ಗಂಭೀರವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ಬೊಮ್ಮಾಯಿ ನಿರಾಕರಿಸಿದ್ದಾರೆ ಎಂದರೆ ಸತ್ಯ ಒಪ್ಪಲು ಭಯವಿರುವಂತಿದೆ.
ಸಿಎಂ ಹುದ್ದೆ ಮಾರಾಟದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು, ರಾಜ್ಯ & ಕೇಂದ್ರ ಬಿಜೆಪಿ ನಾಯಕರನ್ನ ವಿಚಾರಣೆಗೊಳಪಡಿಸಬೇಕು.
ಬೊಮ್ಮಾಯಿ ಅವರೇ, ತಾವು ಸಿದ್ದವೇ?— Karnataka Congress (@INCKarnataka) May 7, 2022
‘ಬೆಲೆ ಏರಿಕೆಯ ಬಿಸಿ ಬಿಜೆಪಿಯ ಸಿಎಂ ಆಕಾಂಕ್ಷಿಗಳಿಗೂ ತಟ್ಟಿದೆ! 2,500 ಕೋಟಿ ಅಂದ್ರೆ ಸುಮ್ಮನೇ ಮಾತೇ?! ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಸಿಎಂ ಹುದ್ದೆಗಾಗಿ 2,500 ಸಾವಿರ ಕೋಟಿ ಹೊಂದಿಸಲು PSI ಹುದ್ದೆಗಳ ಮಾರಾಟಕ್ಕೆ ಇಳಿದಿದ್ದರೇ? ಮೊನ್ನೆ ಕೇಂದ್ರ ಗೃಹಸಚಿವರು ಬಂದಿದ್ದು ಸಿಎಂ ಹುದ್ದೆ ವ್ಯವಹಾರಕ್ಕಾಗಿಯೇ’ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.
ಇದನ್ನೂ ಓದಿ: ‘ನಿಮ್ಮ ಕೈಗೆ ಹ್ಯೂಬ್ಲೊಟ್ ವಾಚ್ ಬಂದಿದ್ದು ಚಹಾ ಕುಡಿಸಿಯೋ ಅಥವಾ ಚಹಾ ಕುಡಿದೋ?’
ಬೆಲೆ ಏರಿಕೆಯ ಬಿಸಿ ಬಿಜೆಪಿಯ ಸಿಎಂ ಆಕಾಂಕ್ಷಿಗಳಿಗೂ ತಟ್ಟಿದೆ! 2500 ಕೋಟಿ ಅಂದ್ರೆ ಸುಮ್ಮನೇ ಮಾತೇ?!
ಸಚಿವ ಅಶ್ವಥ್ ನಾರಾಯಣ್ ಅವರು ಸಿಎಂ ಹುದ್ದೆಗಾಗಿ 2500 ಸಾವಿರ ಕೋಟಿ ಹೊಂದಿಸಲು PSI ಹುದ್ದೆಗಳ ಮಾರಾಟಕ್ಕೆ ಇಳಿದಿದ್ದರೇ?
ಮೊನ್ನೆ ಕೇಂದ್ರ ಗೃಹಸಚಿವರು ಬಂದಿದ್ದು ಸಿಎಂ ಹುದ್ದೆ ವ್ಯವಹಾರಕ್ಕಾಗಿಯೇ @BJP4Karnataka?
— Karnataka Congress (@INCKarnataka) May 7, 2022
‘ಬಿಜೆಪಿ ಶಾಸಕ ಯತ್ನಾಳ್ ಅವರ 2,500 ಕೋಟಿಯ ಸಂಗತಿ ಅತ್ಯಂತ ಗಂಭೀರವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ಬೊಮ್ಮಾಯಿ ನಿರಾಕರಿಸಿದ್ದಾರೆ ಎಂದರೆ ಸತ್ಯ ಒಪ್ಪಲು ಭಯವಿರುವಂತಿದೆ. ಸಿಎಂ ಹುದ್ದೆ ಮಾರಾಟದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು, ರಾಜ್ಯ & ಕೇಂದ್ರ ಬಿಜೆಪಿ ನಾಯಕರನ್ನು ವಿಚಾರಣೆಗೊಳಪಡಿಸಬೇಕು. ಬೊಮ್ಮಾಯಿ ಅವರೇ ತಾವು ಸಿದ್ಧವೇ’ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.