ಬಾಡಿಗೆ ಕೊಡದ ಏರಸೆಲ್ ಹಾಗೂ ಜಿ.ಟಿ.ಎಲ್ ಕಂಪನಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ

ಹುಬ್ಬಳ್ಳಿಯ ಅಕ್ಷಯ ಕಾಲನಿಯ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ರವರು ಧಾರವಾಡದ ಹಳೆ ಹುಲ್ಲಿನ ಮಾರುಕಟ್ಟೆಯಲ್ಲಿರುವ ತಮ್ಮ ಮಾಲೀಕತ್ವದ 700 ಚ.ಅ. ಖುಲ್ಲಾ ಜಾಗೆಯನ್ನು ಪ್ರತಿ ತಿಂಗಳ ಬಾಡಿಗೆ ಕೊಡುವ ಕರಾರಿನ ಮೇಲೆ ಏರಸೆಲ್ ಕಂಪನಿಗೆ ಟಾವರ್ ಹಾಕಿಕೊಳ್ಳಲು ಕೊಟ್ಟಿದ್ದರು. 

Written by - Manjunath N | Last Updated : Dec 13, 2023, 07:06 PM IST
  • ಅತಿಥಿ ಉಪನ್ಯಾಸಕರ ಸಮಸ್ಯೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಾಗ ಉದ್ಭವಿಸಿದ್ದಲ್ಲ. ಸುಮಾರು 20 ವರ್ಷಗಳಿಂದ ಜೀವಂತವಾಗಿರುವ ಬೇಡಿಕೆ
  • ಈಗಾಗಲೇ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರೊಂದಿಗೆ ಮಾತನಾಡಿ, ಹೋರಾಟ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ವಿಫಲವಾಗಿದೆ
  • ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದು, ಪರಿಹಾರ ಕಂಡುಕೊಂಡಿದ್ದೇವೆ. ಅದಕ್ಕೆ ಕೊಂಚ ಕಾಲಾವಕಾಶದ ಅಗತ್ಯವಿದೆ
ಬಾಡಿಗೆ ಕೊಡದ ಏರಸೆಲ್ ಹಾಗೂ ಜಿ.ಟಿ.ಎಲ್ ಕಂಪನಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ title=

ಧಾರವಾಡ: ಹುಬ್ಬಳ್ಳಿಯ ಅಕ್ಷಯ ಕಾಲನಿಯ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ರವರು ಧಾರವಾಡದ ಹಳೆ ಹುಲ್ಲಿನ ಮಾರುಕಟ್ಟೆಯಲ್ಲಿರುವ ತಮ್ಮ ಮಾಲೀಕತ್ವದ 700 ಚ.ಅ. ಖುಲ್ಲಾ ಜಾಗೆಯನ್ನು ಪ್ರತಿ ತಿಂಗಳ ಬಾಡಿಗೆ ಕೊಡುವ ಕರಾರಿನ ಮೇಲೆ ಏರಸೆಲ್ ಕಂಪನಿಗೆ ಟಾವರ್ ಹಾಕಿಕೊಳ್ಳಲು ಕೊಟ್ಟಿದ್ದರು. ಜೂನ್-2009 ರಿಂದ ಜೂನ-2024 ರವರೆಗೆ ಕರಾರು ಅವಧಿ ಇತ್ತು. ಪ್ರತಿ ತಿಂಗಳು ಸರಿಯಾಗಿ ಬಾಡಿಗೆ ಕೊಡುವಂತೆ ಕರಾರು ಇತ್ತು. ನವಂಬರ್-2017ರವರೆಗೆ ಬಾಡಿಗೆ ಕೊಡುತ್ತಾ ಬಂದ ಏರಸೆಲ್ ಕಂಪನಿಯವರು ನಂತರದ ಅವಧಿಗೆ ಬಾಡಿಗೆ ಕೊಡವುದನ್ನು ನಿಲ್ಲಿಸಿದ್ದರು. ಈ ಮಧ್ಯದಲ್ಲಿ ಏರಸೆಲ್ ಕಂಪನಿ ಜಿ.ಟಿ.ಎಲ್. ಕಂಪನಿಯಲ್ಲಿ ಸೇರಿಕೊಂಡಿದೆ ಅಂತಾ ಹೇಳಿದ್ದರು. ದೂರುದಾರರು ಹಲವಾರು ಬಾರಿ ಬಾಡಿಗೆ ಕೊಡುವಂತೆ ಕೇಳಿಕೊಂಡರೂ ಎದುರುದಾರರ ಕಂಪನಿಯವರು ಅವರಿಗೆ ಬಾಡಿಗೆ ಕೊಟ್ಟಿರಲಿಲ್ಲ. ತಮಗೆ ಎದುರುದಾರರು ಮೋಸ ಮಾಡಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಬ್ಬರೂ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:20/04/2023 ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಸಾಂವಿಧಾನಿಕವೇ ಅಥವಾ ಕಾನೂನುಬಾಹಿರವೇ?

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ಉಭಯತರ ಮಧ್ಯ ಆಗಿರುವ ಬಾಡಿಗೆ ಕರಾರಿನ ಪ್ರಕಾರ ಪ್ರತಿ ತಿಂಗಳು ಎದುರುದಾರರು ದೂರುದಾರರಿಗೆ ಬಾಡಿಗೆ ಕೊಡಬೇಕಾಗಿದೆ. ಡಿಸೆಂಬರ್-2017 ರಿಂದ ದೂರು ದಾಖಲಾದ ಎಪ್ರಿಲ್-2023 ರವರೆಗೆ ಸುಮಾರು 6 ವರ್ಷದ ಬಾಡಿಗೆ ರೂ.7,92,798/- ಆಗುತ್ತದೆ. ಹಲವುಬಾರಿ ಕೇಳಿದರೂ ಎದುರುದಾರ ಏರಸೆಲ್ ಕಂಪನಿಯವರು ಬಾಡಿಗೆ ಕೊಡದೇ ದೂರುದಾರರಿಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಬಾಕಿ ಇರುವ ರೂ.7,92,798/- ಬಾಡಿಗೆ ಮತ್ತು ತೀರ್ಪು ನೀಡಿದ ದಿನಾಂಕದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಆದೇಶಿಸಿದೆ. ಬಾಡಿಗೆ ಕರಾರಿನ ಷರತ್ತನ್ನು ಏರಸೆಲ್ ಕಂಪನಿಯವರು ಉಲ್ಲಂಘಿಸಿರುವುದರಿಂದ ಟಾವರ್ ಹಾಕಿದ ಸಲಕರಣೆಗಳನ್ನು ಕಿತ್ತುಕೊಂಡು ಖುಲ್ಲಾ ಜಾಗೆಯ ಸ್ವಾಧೀನತೆಯನ್ನು ದೂರುದಾರರಿಗೆ ಕೊಡುವಂತೆ ಆಯೋಗ ಎದುರುದಾರರಿಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ.50,000/- ಪರಿಹಾರ ಮತ್ತು ರೂ.2,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರರಿಗೆ ಸೂಚಿಸಿದೆ.

ಬೇರೆ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿಕೊಂಡಿರುವ ಮಾದರಿಯನ್ನು ಅನುಸರಿಸಬೇಕು. ಈ ವಿಷಯದಲ್ಲಿ ಪ್ರತಿ ಸಲವೂ ಉಮಾದೇವಿ ಪ್ರಕರಣವನ್ನು ಮುಂದಿಟ್ಟುಕೊಂಡು ಅತಿಥಿ ಉಪನ್ಯಾಸಕರಿಗೆ ಆಗುವ ಅನ್ಯಾಯ ನಿಲ್ಲಬೇಕಾದರೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಯುಜಿಸಿ ನಿಗದಿಯಂತೆ ವೇತನ ಪರಿಷ್ಕರಣೆ ಮಾಡಿ, ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಬೇಕು ಎಂದು ಚಿದಾನಂದ ಅವರು ಸಲಹೆ ನೀಡಿದರು.

ಇದನ್ನೂ ಓದಿ: 2023 ರಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಟಾಪ್ 10 ಸಿನಿಮಾಗಳಿವು 

ಅತಿಥಿ ಉಪನ್ಯಾಸಕರ ಸಮಸ್ಯೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಾಗ ಉದ್ಭವಿಸಿದ್ದಲ್ಲ. ಸುಮಾರು 20 ವರ್ಷಗಳಿಂದ ಜೀವಂತವಾಗಿರುವ ಬೇಡಿಕೆ. ಈಗಾಗಲೇ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರೊಂದಿಗೆ ಮಾತನಾಡಿ, ಹೋರಾಟ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ವಿಫಲವಾಗಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದು, ಪರಿಹಾರ ಕಂಡುಕೊಂಡಿದ್ದೇವೆ. ಅದಕ್ಕೆ ಕೊಂಚ ಕಾಲಾವಕಾಶದ ಅಗತ್ಯವಿದೆ. ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಸಚಿವರು ಸದನದಲ್ಲಿ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News