ಹೋಂ ಐಸೋಲೇಷನ್ ಅವಧಿಯಲ್ಲಿ ಕಡಿತ; covid ಸೋಂಕಿತರು ಹೆಚ್ಚಿನ ಪ್ರಮಾಣದ ಔಷಧಿಯನ್ನು ಬಳಸದಂತೆ ಸೂಚನೆ

ಹೋಂ ಐಸೋಲೇಷನ್ ಅವಧಿಯನ್ನು ಹತ್ತು ದಿನಗಳಿಂದ ಏಳು ದಿನಗಳಿಗೆ ಇಳಿಸಲಾಗಿದೆ. ಅದೇ ರೀತಿ, ಸೋಂಕಿತರು ಗುಣಮುಖರಾದ ಬಳಿಕ ಮತ್ತೆ ಕೋವಿಡ್ ಪರೀಕ್ಷೆ ಮಾಡಿಸಿ, ನೆಗಟಿವ್ ವರದಿ ಪಡೆಯುವ ಅಗತ್ಯತೆ ಇಲ್ಲ.

Written by - Zee Kannada News Desk | Last Updated : Jan 18, 2022, 01:31 PM IST
  • ಐಸೋಲೇಷನ್ ಅವಧಿಯಲ್ಲಿ ಮೂರು ದಿನ ಕಡಿತ
  • ಹತ್ತು ದಿನಗಳಿಂದ ಏಳು ದಿನಗಳಿಗೆ ಐಸೋಲೇಷನ್ ಅವಧಿ ಇಳಿಕೆ
  • ಹೆಚ್ಚಿನ ಪ್ರಮಾಣದ ಔಷಧಿ ಬಳಕೆ ಮಾಡದಂತೆ ಸೂಚನೆ
 ಹೋಂ ಐಸೋಲೇಷನ್ ಅವಧಿಯಲ್ಲಿ ಕಡಿತ; covid ಸೋಂಕಿತರು ಹೆಚ್ಚಿನ ಪ್ರಮಾಣದ ಔಷಧಿಯನ್ನು ಬಳಸದಂತೆ ಸೂಚನೆ  title=
ಐಸೋಲೇಷನ್ ಅವಧಿಯಲ್ಲಿ ಮೂರು ದಿನ ಕಡಿತ (file photo)

ಬೆಂಗಳೂರು : ಹೋಂ ಐಸೋಲೇಷನ್ (Home Isolation) ಅವಧಿಯಲ್ಲಿ ಮೂರು ದಿನಗಳನ್ನು ಕಡಿತ ಮಾಡಲಾಗಿದ್ದು ಹೆಚ್ಚಿನ ಪ್ರಮಾಣದ ಔಷಧಿಯನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ. ಬಿಬಿಎಂಪಿ (BBMP) ಆಯುಕ್ತ ಗೌರವ್ ಗುಪ್ತ ಈ ವಿಷಯವನ್ನು ತಿಳಿಸಿದ್ದಾರೆ.

ಬೆಂಗಳೂರಿನ ಅಪಾರ ಸಂಖ್ಯೆಯಲ್ಲಿ ಕೋವಿಡ್ (COVID) ಸೋಂಕಿತರು ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೋಂ ಐಸೋಲೇಷನ್ ಅವಧಿಯನ್ನು (Isolation Period) ಹತ್ತು ದಿನಗಳಿಂದ ಏಳು ದಿನಗಳಿಗೆ ಇಳಿಸಲಾಗಿದೆ. ಅದೇ ರೀತಿ, ಸೋಂಕಿತರು ಗುಣಮುಖರಾದ ಬಳಿಕ ಮತ್ತೆ ಕೋವಿಡ್ ಪರೀಕ್ಷೆ (COVID Test) ಮಾಡಿಸಿ, ನೆಗಟಿವ್ ವರದಿ ಪಡೆಯುವ ಅಗತ್ಯತೆ ಇಲ್ಲ. ಏಳು ದಿನಗಳ‌ ಬಳಿಕ ತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಗೌರವ್ ಗುಪ್ತ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ : 13 ಜನ ಯುವಕರ ತಂಡದಿಂದ ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ

ಹೆಚ್ಚಿನ ಪ್ರಮಾಣದ ಔಷಧಿ ಬಳಕೆ ಮಾಡದಂತೆ ಸೂಚನೆ:

ಇನ್ನು ಹೆಚ್ಚಿನ ಪ್ರಮಾಣದ ಔಷಧಿಯನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ. ಬದಲಾಗಿ ಸಾಮಾನ್ಯ ಪ್ರಮಾಣದ ಮಾತ್ರೆಗಳನ್ನು ನೀಡಲಾಗುವುದು. ಈ ಹಿಂದೆ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಮಾತ್ರೆ, ಔಷಧಿ ಬಳಕೆಯ ಕಾರಣದಿಂದಾಗಿ ಬ್ಲಾಕ್ ಫಂಗಸ್ (Black Fungus)ಪ್ರಕರಣ ಬೆಳಕಿಗೆ ಬಂದಿತ್ತು. ಹೀಗಾಗಿ ನಿಯಮಿತ ಔಷಧಿಗಳ ಬಳಕೆಗೆ ಪಾಲಿಕೆ ಸೂಚನೆ ನೀಡಿದೆ.

ಹೋಂ ಐಸೋಲೇಷನ್ ರೋಗಿಗಳ ಮೇಲೆ ನಿಗಾ:
ಸ್ಟಾಪ್ ಒನ್ ಸಂಸ್ಥೆ ಸಹಯೋಗದೊಂದಿಗೆ ಬಿಬಿಎಂಪಿ (BBMP) ಹೋಂ ಐಸೋಲೇಷನ್ ರೋಗಿಗಳ ಮೇಲೆ ನಿಗಾ ಇರಿಸಿದೆ. ಸೋಂಕಿತರ ಸಹಾಯಕ್ಕೆ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. 

ಇದನ್ನೂ ಓದಿ : Covid-19: ಜ. 25ರ ನಂತರ ಕೋವಿಡ್ ಸಂಖ್ಯೆಯಲ್ಲಿ ಇಳಿಮುಖ ಸಾಧ್ಯತೆ

Home isolation ಕಿಟ್ ನಲ್ಲಿ ಏನಿರಲಿದೆ?
ಮನೆಯಲ್ಲೇ ಚಿಕಿತ್ಸೆ ಪಡೆಯುವ ಕೋವಿಡ್ ಸೋಂಕಿತರಿಗೆ ಕಿಟ್ ನೀಡಲಾಗುತ್ತಿದೆ. ಇದರಲ್ಲಿ, ಐದು ದಿನಗಳಿಗೆ ಔಷಧಿಗಳನ್ನ ಸೇರಿದಂತೆ ಮಾಸ್ಕ್ (Mask) ಹಾಗೂ ಸ್ಯಾನಿಟೈಸರ್ ಗಳನ್ನ (Sanitizer) ನೀಡಲಾಗುತ್ತದೆ. ಹೋಂ ಐಸೋಲೇಷನ್ ರೋಗಿಗಳಿಗೆ ಪ್ರತ್ಯೇಕ ಕಿಟ್ ನಲ್ಲಿ 6 ಮೆಡಿಸನ್‌ಗಳನ್ನು ನೀಡಲಾಗುತ್ತದೆ. ಆರೋಗ್ಯ ಇಲಾಖೆಯಿಂದ ಕಿಟ್‌ಗಳ ತಯಾರಿ ಮಾಡಿದ್ದುತಜ್ಞರ ಸಲಹೆ ಮೇರೆಗೆ 6 ಮೆಡಿಸನ್ ಬಳಸಲು ನಿರ್ಧರಿಸಿದೆ.

ತಜ್ಞರು ಸೂಚಿಸಿರೋ ಆ 6 ಮೆಡಿಸನ್‌ಗಳು ಯಾವುದು..?
1. ಪ್ಯಾರಸಿಟಮಾಲ್ 500mg ಮಾತ್ರೆಗಳು 
2. ವಿಟಮಿನ್ ಸಿ 500mg ಮಾತ್ರೆಗಳು
3. ಝಿಂಕ್ ಸಲ್ಫೈಟ್ 50mg ಮಾತ್ರೆಗಳು
4. ಲೆವೋಟ್ರೈಸೈನ್ 10mg ಮಾತ್ರೆಗಳು
5. ಪಾಂಟಪ್ರೋಝೋಲ್ 40mg ಮಾತ್ರೆಗಳು 
6. ಆ್ಯಂಟಿ ಟುಸಿವ್ ಕಾಫ್ ಸಿರಪ್
7.ಮೆಡಿಸನ್‌‌ಗಳ ಜೊತೆ ಮೂರು ಲೇಯರ್ ಫೇಸ್ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News