ಮಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಕ್ಷಣಗಣನೆ, ಪೊಲೀಸ್ ಸರ್ಪಗಾವಲು

PM Modi : ಲೋಕಸಭೆ ಚುನಾವಣೆಯ ನಿಮಿತ್ತ ಇಂದು ಸಂಜೆ ಏ.14ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದು ರೋಡ್ ಶೋ ನಲ್ಲಿ ಭಾಗವಹಿಸಲಿದ್ದಾರೆ. 

Written by - Zee Kannada News Desk | Last Updated : Apr 14, 2024, 06:12 PM IST
  • ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾತ್ರಿ 7:45 ಸುಮಾರಿಗೆ ಇಳಿಯಲಿದ್ದಾರೆ.
  • ಅಲ್ಲಿಂದ ಪ್ರಾರಂಭವಾದ ರೋಡ್ ಶೋ ರಾತ್ರಿ 9ರ ಸುಮಾರಿಗೆ ನವ ಭಾರತ್ ವೃತ್ತಿಯಲ್ಲಿ ಮುಕ್ತಾಯಗೊಳ್ಳಲಿದೆ.
  • ಕಾರ್ ಸ್ಟ್ರೀಟ್, ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳು ಮಣ್ಣಗುಡ್ಡೆ, ಉರ್ವ ಮಾರ್ಕೆಟ್ ಮೂಲಕ ಅಶೋಕ್ ನಗರ ಕೋಡಿಕಲ್ ಕ್ರಾಸ್ ಗೆ ಹೋಗುತ್ತವೆ.
ಮಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಕ್ಷಣಗಣನೆ, ಪೊಲೀಸ್ ಸರ್ಪಗಾವಲು title=

ಮಂಗಳೂರಿನಲ್ಲಿ ಏ.14ರಂದು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋನಲ್ಲಿ ಭಾಗವಹಿಸಲಿದ್ದು, ನಗರ ಪೊಲೀಸರು ಸರ್ಪಗಾವಲನ್ನು ಹೂಡಿದ್ದಾರೆ. 

ಇದನ್ನು ಓದಿ : Amarnatha: ಜೂನ್ 29ರಿಂದ ವಾರ್ಷಿಕ ಅಮರನಾಥ ಯಾತ್ರೆ ಆರಂಭ

ಪ್ರಧಾನಿ ಅವರ ರೋಡ್ ಶೋ ಹಿನ್ನಲೆಯಲ್ಲಿ ನಗರದಲ್ಲಿ ವಾಹನ ಸಂಚಾರವನ್ನು ನಿರ್ಭಂದಿಸಿ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ ನೀಡಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾತ್ರಿ 7:45 ಸುಮಾರಿಗೆ ಇಳಿಯಲಿದ್ದು, ಲೇಡಿಹಿಲ್ ಪ್ರದೇಶದಲ್ಲಿರುವ ಶ್ರೀನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. 

ಅಲ್ಲಿಂದ ಪ್ರಾರಂಭವಾದ ರೋಡ್ ಶೋ ರಾತ್ರಿ 9ರ ಸುಮಾರಿಗೆ ನವ ಭಾರತ್ ವೃತ್ತಿಯಲ್ಲಿ ಮುಕ್ತಾಯಗೊಳ್ಳಲಿದೆ.

ವಾಹನ ಮಾರ್ಗಗಳಲ್ಲಿ ಬದಲಾವಣೆ : 

  • ಉಡುಪಿಯಿಂದ ಮಂಗಳೂರಿಗೆ ಬರುವ ವಾಹನಗಳು ನಂತುರು ಜಂಕ್ಷನ್, ಸೆಂಟ್ ಆಗ್ನೆಸ್, ಕಂಕನಾಡಿ ಮೂಲಕ ಸ್ಟೇಟ್ ಬ್ಯಾಂಕ್ ಕಡೆಗೆ ಸಾಗಲಿದೆ.
  • ಸ್ಟೇಟ್ ಬ್ಯಾಂಕ್ ನಿಂದ ಉಡುಪಿಗೆ ಹೋಗುವ ವಾಹನಗಳು ಲೇಡಿ ಗೋಶ್ಚೆನ್ - ಕ್ಲಾಕ್ ಟವರ್- ರೈಲ್ವೆ ನಿಲ್ದಾಣ ಜಂಕ್ಷನ್, ನಂದಿಗುಡ್ಡರಸ್ತೆ ಕೋಟಿ ಚೆನ್ನಯ ಸರ್ಕಲ್ - ಕಂಕನಾಡಿ ಜಂಕ್ಷನ್ ಮೂಲಕ ಚಲಿಸುತ್ತವೆ. 
  • ಪಂಪವೆಲ್ ನಿಂದ ಮಂಗಳೂರು ನಗರಕ್ಕೆ ತೆರಳುವ ವಾಹನಗಳು ಕಂಕನಾಡಿ ಜಂಕ್ಷನ್, ಮಿಲಾಗ್ರಿಸ್ ಜಂಕ್ಷನ್ ಮೂಲಕ ಸ್ಟೇಟ್ ಬ್ಯಾಂಕ್ ತೆರಳಲಿವೆ. 
  • ಕಾರ್ ಸ್ಟ್ರೀಟ್, ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳು ಮಣ್ಣಗುಡ್ಡೆ, ಉರ್ವ ಮಾರ್ಕೆಟ್ ಮೂಲಕ ಅಶೋಕ್ ನಗರ ಕೋಡಿಕಲ್ ಕ್ರಾಸ್ ಗೆ ಹೋಗುತ್ತವೆ. 
  • ಬಿಜೈ ಚರ್ಚ್ ನಿಂದ ಬರುವ ವಾಹನಗಳು ಕೆಎಸ್ಆರ್ಟಿಸಿ ಜಂಕ್ಷನ್ ಮೂಲಕ ಕೊಟ್ಟಾರ ಕ್ರಾಸ್ ಕುಂಟಿ ಕಾಲಕ್ಕೆ ತೆರಳುತ್ತವೆ.
  • ಕುಂಟಿ ಕಾಲನ ಕೊಟ್ಟಾರ ಕ್ರಾಸ್ ನಿಂದ ಬರುವ ವಾಹನಗಳು ಕೆಎಸ್ಆರ್ಟಿಸಿ ಜಂಕ್ಷನ್ ಮೂಲಕ ಬಿಜೈ ಚರ್ಚಿಗೆ ತೆರಳುತ್ತವೆ.

ಇದನ್ನು ಓದಿ : ಅಂಬೇಡ್ಕರ್ ಆಶಯದಂತೆ ಕಾಂಗ್ರೆಸ್ ನಿಂದ ಮಹಿಳೆಯರ ಸಬಲೀಕರಣ: ವೆಂಕಟರಮಣೇಗೌಡ

ಪಾರ್ಕಿಂಗ್ ವ್ಯವಸ್ಥೆ 

  • ಕರಾವಳಿ ಮೈದಾನ, ಲೇಡಿಹಿಲ್ ಶಾಲಾ ಮೈದಾನ,ಲೇಡಿಹಿಲ್ ಚರ್ಚ್ ಮೈದಾನ, ಉರ್ವ ಮಾರುಕಟ್ಟೆ, ಊರ್ವ ಸ್ಟೋರ್ ಮೈದಾನ, ಊರ್ವ ಕೆನರಾ ಶಾಲಾ ಮೈದಾನ,  ಕೆನರಾ ಕಾಲೇಜು ಮೈದಾನ, ಡೋಂಗರಕೆರೆ ಕೆನರಾ ಶಾಲಾ ಮೈದಾನ ಹೀಗೆ ಹಲವು ಕಡೆ ರೋಡ್ ಶೋ ಗೆ ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News