ದಾವಣಗೆರೆ ಲೋಕೋಪಯೋಗಿ ಇಲಾಖೆ: ಹೇಳಿದಷ್ಟು ಹಣ ಕೊಡುವಂತೆ ಗುತ್ತಿಗೆದಾರರಿಗೆ ಇಂಜಿನಿಯರ್‌ಗಳ ಅವಾಜ್!

ಅಸಿಸ್ಟೆಂಟ್ ಇಂಜಿನಿಯರ್ ವೀರಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ವಿಜಯಕುಮಾರ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ನರೇಂದ್ರಬಾಬು ಸೇರಿ ಲಂಚ ವಸೂಲಿ ಮಾಡಿದ್ದಾರೆ. ಹೇಳಿದಷ್ಟು ಹಣ ಕೊಡುವಂತೆ ಗುತ್ತಿಗೆದಾರರಿಗೆ ಇಂಜಿನಿಯರ್‍ಗಳು ಅವಾಜ್ ಹಾಕಿದ್ದಾರೆ.

Written by - Zee Kannada News Desk | Last Updated : Feb 7, 2023, 04:00 PM IST
  • ದಾವಣಗೆರೆ ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳ ತಾಂಡವ ಹೆಚ್ಚಾಗಿದೆ
  • ಸಹಾಯಕ ಕಾರ್ಯಪಾಲಕ ಅಭಿಯಂತರನಿಂದ ಕಚೇರಿಯಲ್ಲಿಯೇ ರಾಜಾರೋಷವಾಗಿ ಡೀಲಿಂಗ್
  • ಹೇಳಿದಷ್ಟು ಹಣ ಕೊಡುವಂತೆ ಗುತ್ತಿಗೆದಾರರಿಗೆ ಇಂಜಿನಿಯರ್‍ಗಳಿಂದ ಅವಾಜ್
ದಾವಣಗೆರೆ ಲೋಕೋಪಯೋಗಿ ಇಲಾಖೆ: ಹೇಳಿದಷ್ಟು ಹಣ ಕೊಡುವಂತೆ ಗುತ್ತಿಗೆದಾರರಿಗೆ ಇಂಜಿನಿಯರ್‌ಗಳ ಅವಾಜ್! title=
ಕಚೇರಿಯಲ್ಲಿಯೇ ರಾಜಾರೋಷವಾಗಿ ಡೀಲಿಂಗ್!

ದಾವಣಗೆರೆ: ದಾವಣಗೆರೆ ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳ ತಾಂಡವ ಹೆಚ್ಚಾಗಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರನಿಂದ ಕಚೇರಿಯಲ್ಲಿಯೇ ರಾಜಾರೋಷವಾಗಿ ಡೀಲಿಂಗ್ ನಡೆದಿರುವುದು ಬೆಳಕಿಗೆ ಬಂದಿದೆ.

ಅಸಿಸ್ಟೆಂಟ್ ಇಂಜಿನಿಯರ್ ವೀರಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ವಿಜಯಕುಮಾರ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ನರೇಂದ್ರಬಾಬು ಸೇರಿ ಲಂಚ ವಸೂಲಿ ಮಾಡಿದ್ದಾರೆ. ಹೇಳಿದಷ್ಟು ಹಣ ಕೊಡುವಂತೆ ಗುತ್ತಿಗೆದಾರರಿಗೆ ಇಂಜಿನಿಯರ್‍ಗಳು ಅವಾಜ್ ಹಾಕಿದ್ದಾರೆ.

ಇದನ್ನೂ ಓದಿ: “ಬಿಜೆಪಿ ಸರಕಾರ ನುಡಿದಂತೆ ನಡೆಯಿತಾ ಅಂತ ನೀವು ಶ್ರೀರಾಮುಲು ಅಣ್ಣ ಸಿಎಂ ಬೊಮ್ಮಾಯಿ ಅವರನ್ನ ಕೇಳಬೇಕು”

ಲಂಚದ ಹಣ ಕಡಿಮೆ ಕೊಡಲು ಬಂದರೆ ಎಇಇ ನರೇಂದ್ರಬಾಬು ದುಡ್ಡು ಬಿಸಾಕಿದ್ದು, ಹೇಳಿದಷ್ಟು ಹಣ ಕೊಡುವಂತೆ ಅವಾಜ್ ಹಾಕಿದ್ದಾರೆ. ನಾನು ಈ ಪೋಸ್ಟ್‍ಗೆ ಕಷ್ಟಪಟ್ಟು 25 ಲಕ್ಷ ರೂ. ಕೊಟ್ಟು ಬಂದಿದ್ದೀನಿ, ಎಲ್ಲವೂ ನಮಗೆ ಗೊತ್ತು. ಯಾವುದಕ್ಕೂ ಕಡಿಮೆಯಾಗಲ್ಲ ಹೇಳಿದಷ್ಟು ಕೊಡಲೇಬೇಕು ಎಂದು ಕಾಮಗಾರಿ ಹಣ ಬಿಡುಗಡೆ ವಿಚಾರವಾಗಿ ದಾವಣಗೆರೆ ಲೋಕೋಪಯೋಗಿ ಇಲಾಖೆ ಎಇಇ ಖಡಕ್ ಆಗಿ ಹೇಳಿದ್ದಾರೆ.

ಕಾಮಗಾರಿಗೆ ಗುತ್ತಿಗೆದಾರನಿಂದ ಪಿಡಬ್ಲ್ಯೂಡಿ ಅಧಿಕಾರಿಗಳು 25 ಸಾವಿರ ರೂ. ಲಂಚ ಪಡೆದಿದ್ದಾರೆ. ಭ್ರಷ್ಟ ಅಧಿಕಾರಿಗಳ ರಹಸ್ಯವನ್ನು ದಾವಣಗೆರೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ ಬಯಲು ಮಾಡಿದ್ದಾರೆ. ಅಧಿಕಾರಿಗಳ ಭ್ರಷ್ಟಾಚಾರ ದಂಧೆಯನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಭ್ರಷ್ಟ ಪಿಡಬ್ಲ್ಯೂ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಮಣಿ ಸರ್ಕಾರ ಮುಂದಾಗಿದ್ದಾರೆ.

ಇದನ್ನೂ ಓದಿ: ಎಟಿಎಂಗೆ ಹಣ ತುಂಬಿಸಬೇಕಿದ್ದ ಒಂದು ಕೋಟಿ ಹಣದ ಜೊತೆ ವ್ಯಕ್ತಿ ಪರಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News