ತಾಲಿಬಾನಿಗಳಂತೆ ಬಿಜೆಪಿ ತಮ್ಮದೇ ಪ್ರತ್ಯೇಕ ಕಾನೂನುಗಳನ್ನು ಸೃಷ್ಟಿಸಿದೆಯೇ?: ಕಾಂಗ್ರೆಸ್

ಉತ್ತರಪ್ರದೇಶ ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

Written by - Zee Kannada News Desk | Last Updated : Oct 6, 2021, 03:45 PM IST
  • ಬಿಜೆಪಿಗೆ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು, ಸಂಸ್ಕೃತಿ, ಯಾವುದರಲ್ಲೂ ಗೌರವವಿಲ್ಲ
  • ಬಿಜೆಪಿ ತಾಲಿಬಾನಿಗಳಂತೆಯೇ ತಮ್ಮದೇ ಪ್ರತ್ಯೇಕ ಕಾನೂನುಗಳನ್ನು ಸೃಷ್ಟಿಸಿದೆಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್
  • ಭಾರತದಲ್ಲಿ ಪ್ರಜಾಪ್ರಭುತ್ವವಿತ್ತು, ಆದರೆ ಇಂದು ದೇಶದಲ್ಲಿ ಸರ್ವಾಧಿಕಾರವಿದೆ ಎಂದ ರಾಹುಲ್ ಗಾಂಧಿ
ತಾಲಿಬಾನಿಗಳಂತೆ ಬಿಜೆಪಿ ತಮ್ಮದೇ ಪ್ರತ್ಯೇಕ ಕಾನೂನುಗಳನ್ನು ಸೃಷ್ಟಿಸಿದೆಯೇ?: ಕಾಂಗ್ರೆಸ್ title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ

ಬೆಂಗಳೂರು: ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು, ಸಂಸ್ಕೃತಿ, ಯಾವುದರಲ್ಲೂ ಗೌರವವಿರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಾಲಿಬಾನಿಗಳಂತೆಯೇ ತಮ್ಮದೇ ಪ್ರತ್ಯೇಕ ಕಾನೂನುಗಳನ್ನು ಸೃಷ್ಟಿಸಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಉತ್ತರಪ್ರದೇಶ ಲಖೀಂಪುರ್ ಖೇರಿ ಹಿಂಸಾಚಾರ(Lakhimpur Kheri Violence)ಪ್ರಕರಣಕ್ಕೆ ಸಂಬಂಧಿಸಿದಂತೆ  ಬುಧವಾರ ಟ್ವಿಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. #IndiaDemandsJustice ಹ್ಯಾಶ್ ಟ್ಯಾಗ್ ಬಳಿಸಿರುವ ಕಾಂಗ್ರೆಸ್, ‘ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರಿಂದ ಹಿಡಿದು ಎಲ್ಲಾ ಕಾನೂನು ತಜ್ಞರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬಂಧನ ಕಾನೂನುಬಾಹಿರ ಎಂದಿದ್ದಾರೆ. ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು, ಸಂಸ್ಕೃತಿ, ಯಾವುದರಲ್ಲೂ ಗೌರವವಿರದ ಬಿಜೆಪಿ ತಾಲಿಬಾನಿಗಳಂತೆಯೇ ತಮ್ಮದೇ ಪ್ರತ್ಯೇಕ ಕಾನೂನುಗಳನ್ನು ಸೃಷ್ಟಿಸಿದೆಯೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ವಿಧಾನಸೌಧ 2ನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಿಡಿ..!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿಕೆಗಳನ್ನು ಕೂಡ ಕಾಂಗ್ರೆಸ್ ಟ್ವೀಟ್ ಮಾಡಿದೆ. ‘ನಾವು ಉತ್ತರ ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದು ನಿನ್ನೆಯಿಂದ ಹೇಳಲಾಗಿದೆ. ಛತ್ತೀಸ್‌ಗಢದ ಮುಖ್ಯಮಂತ್ರಿಗಳು ಹೋದಾಗ, ಅಲ್ಲಿ ಸೆ.144 ಜಾರಿ ಇರುವುದಾಗಿ ಹೇಳುತ್ತಾರೆ. ನಾನು ಒಬ್ಬನೇ ಇರುವುದರಿಂದ ಸೆ.144 ಹೇಗೆ ಅನ್ವಯವಾಗುತ್ತದೆಂದು ಪ್ರಶ್ನಿಸಿದರೆ ಅದಕ್ಕೆ ಸರ್ಕಾರದ ಬಳಿ ಉತ್ತರವಿರಲಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವವಿತ್ತು, ಆದರೆ ಇಂದು ದೇಶದಲ್ಲಿ ಸರ್ವಾಧಿಕಾರವಿದೆ. ಉತ್ತರ ಪ್ರದೇಶದಲ್ಲಿ ಯಾರು ಕೊಲೆ ಮಾಡುತ್ತಾರೋ, ಯಾರು ಅತ್ಯಾಚಾರ ಮಾಡುತ್ತಾರೋ ಅವರು ಜೈಲಿನಿಂದ ಹೊರಗೆ ಇರುತ್ತಾರೆ. ಯಾರು ಇದನ್ನು ಪ್ರಶ್ನಿಸುತ್ತಾರೋ ಅವರು ಜೈಲಿನಲ್ಲಿ ಇರುತ್ತಾರೆ’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಟ್ವೀಟ್ ಗೆ ಪ್ರತಿಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿರುವ ಬಿಜೆಪಿ(BJP), ‘ಕಾನೂನು ಸುವ್ಯವಸ್ಥೆ ಗೆ ಧಕ್ಕೆ ತರುವ ಏಕೈಕ ಉದ್ದೇಶವನ್ನು ಪ್ರಿಯಾಂಕಾ ಗಾಂಧಿ ಹೊಂದಿದ್ದರು. ಅವರ ಬಂಧನ ಮುಂಜಾಗ್ರತಾ ಕ್ರಮವಾಗಿತ್ತೇ ಹೊರತು ಬೇರೇನಿಲ್ಲ. ಭಾರತೀಯ ದಂಡ ಸಂಹಿತೆಯ ಈ ವಿಧಿಯನ್ನು ಕಾಂಗ್ರೆಸ್ ಯಥೇಚ್ಛವಾಗಿ ಬಳಸಿಕೊಂಡಿದೆ. ಆ ಘಟನೆಗಳನ್ನು ನೆನಪಿಸಬೇಕೇ ಕಾಂಗ್ರೆಸ್?’ ಎಂದು ಕುಟುಕಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಎಚ್‌ಡಿಕೆ ಹುಸಿ ಜ್ಯಾತ್ಯತೀತ ನಾಯಕರು: ನಟ ಚೇತನ್ ಅಹಿಂಸಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News