ಆರ್‌ಎಸ್‌ಎಸ್​ನಿಂದ ಬೆಳೆದು ಬಂದವನು ನಾನು ಎಂದು ನೆನೆದ ಬಿ.ಎಸ್. ಯಡಿಯೂರಪ್ಪ

ಇಂದು ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್​ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ.

Yashaswini V Yashaswini V | Updated: Jul 24, 2019 , 12:38 PM IST
ಆರ್‌ಎಸ್‌ಎಸ್​ನಿಂದ ಬೆಳೆದು ಬಂದವನು ನಾನು ಎಂದು ನೆನೆದ ಬಿ.ಎಸ್. ಯಡಿಯೂರಪ್ಪ
File Image

ಬೆಂಗಳೂರು: ಆರ್‌ಎಸ್‌ಎಸ್​ನಿಂದ ಬೆಳೆದು ಬಂದವನು. ಅವರ ಆಶೀರ್ವಾದದಿಂದ ಇಂದು ನಾನು ಈ ಹಂತಕ್ಕೆ ಬೆಳೆದಿದ್ದೇನೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೆನೆದಿದ್ದಾರೆ.

ಇಂದು ಬೆಳಿಗ್ಗೆ ನಗರದ  ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್​ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಬಿ.ಎಸ್. ಯಡಿಯೂರಪ್ಪ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆರ್‌ಎಸ್‌ಎಸ್​ನಿಂದ ಬೆಳೆದು ಬಂದವನು. ಅವರ ಆಶೀರ್ವಾದದಿಂದ ಇಂದು ನಾನು ಈ ಹಂತಕ್ಕೆ ಬೆಳೆದಿದ್ದೇನೆ. ನಾನು ಯಾವುದೇ ಹೆಜ್ಜೆ ಮುಂದಿಡುವಾಗ ಅವರ ಸಲಹೆ ಅಗತ್ಯವಾಗಿರುತ್ತದೆ. ಪ್ರತಿ ಹಂತದಲ್ಲೂ ಆರ್‌ಎಸ್‌ಎಸ್ ಸಲಹೆ, ಮಾರ್ಗದರ್ಶನ ಪಡೆಯುವುದು ನಮ್ಮ ಸಂಪ್ರದಾಯ ಎಂದು ತಿಳಿಸಿದರು.

ಸರ್ಕಾರ ರಚನೆ, ಪದಗ್ರಹಣದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್‌ವೈ, ಹೈಕಮಾಂಡ್ ಆದೇಶಕ್ಕಾಗಿ ಕಾಯುತ್ತಿದ್ದೇನೆ. ದೆಹಲಿಯಿಂದ ಪಕ್ಷದ ವರಿಷ್ಟರ ಆದೇಶ ಬರುತ್ತಿದ್ದಂತೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದು, ಸಮಾಲೋಚನೆ ನಡೆಸಿ ಬಳಿಕ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ಹೇಳಿದರು.