Congress Protest : ನಿಮ್ಮ ನಾಟಕ ಚೆನ್ನಾಗಿದೆ..! ಕಾಂಗ್ರೆಸ್ ರಾಜಭವನ ಯಾತ್ರೆಗೆ ಬಿಜೆಪಿ ವ್ಯಂಗ್ಯ

ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸಾಥ್ ಕೊಟ್ಟಿದೆ. ರೈತರೊಂದಿಗೆ ರಾಜಭವನ ಚಲೋ ಯಾತ್ರೆ ಕೂಡಾ ನಡೆಸಿದೆ. ಇದರ ವಿರುದ್ದ ರಾಜ್ಯ ಬಿಜೆಪಿ ಕೆಂಡಾಮಂಡಲವಾಗಿದ್ದು, ಕಾಂಗ್ರೆಸ್ ವಿರುದ್ಧ ಪ್ರಖರ ಟ್ವೀಟ್ ದಾಳಿ ನಡೆಸಿದೆ. 

Written by - Ranjitha R K | Last Updated : Jan 20, 2021, 01:54 PM IST
  • ಕೃಷಿ ಕಾನೂನು ವಿಚಾರದಲ್ಲಿ ಕಾಂಗ್ರೆಸ್ಸಿನಿಂದ ರಾಜಭವನ ಚಲೋ ಪ್ರತಿಭಟನೆ
  • ಕಾಂಗ್ರೆಸ್ ಪ್ರತಿ ಭಟನೆಗೆ ಕೆರಳಿ ಕೆಂಡಾಮಂಡಲವಾದ ರಾಜ್ಯ ಬಿಜೆಪಿ
  • ಸರಣಿ ಟ್ವೀಟ್ ಗಳ ಮೂಲಕ ಕಾಂಗ್ರೆಸ್ ನಾಯಕರನ್ನು ಕುಕ್ಕಿದ ಬಿಜೆಪಿ
Congress Protest :  ನಿಮ್ಮ ನಾಟಕ ಚೆನ್ನಾಗಿದೆ..! ಕಾಂಗ್ರೆಸ್ ರಾಜಭವನ ಯಾತ್ರೆಗೆ ಬಿಜೆಪಿ ವ್ಯಂಗ್ಯ title=
ಸರಣಿ ಟ್ವೀಟ್ ಗಳ ಮೂಲಕ ಕಾಂಗ್ರೆಸ್ ನಾಯಕರನ್ನು ಕುಕ್ಕಿದ ಬಿಜೆಪಿ (filephoto)

ಬೆಂಗಳೂರು : ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸಾಥ್ ಕೊಟ್ಟಿದೆ. ರೈತರೊಂದಿಗೆ ರಾಜಭವನ ಚಲೋ ಯಾತ್ರೆ ಕೂಡಾ ನಡೆಸಿದೆ. ಇದರ ವಿರುದ್ದ ರಾಜ್ಯ ಬಿಜೆಪಿ ಕೆಂಡಾಮಂಡಲವಾಗಿದ್ದು, ಕಾಂಗ್ರೆಸ್ ವಿರುದ್ಧ ಪ್ರಖರ ಟ್ವೀಟ್ ದಾಳಿ ನಡೆಸಿದೆ. ಜೊತೆಗೆ ಪ್ರಶ್ನೆಗಳನ್ನೂ ಕೇಳಿದೆ. ಕಾಂಗ್ರೆಸ್ ನೀತಿಯ ಬಗ್ಗೆ ವ್ಯಂಗ್ಯ ಮಾಡಿದೆ. 

ಇವತ್ತು ಚಿನ್ನದ ತಟ್ಟೆಯಲ್ಲಿ ಊಟ ಮಾಡುವಿರಾ..?
ಅಂದು ಹಸಿರು ಶಾಲು ಹಾಕಿಕೊಂಡು ತಾವು ರೈತಪರ ಎಂದು ಬೊಗಳೆಬಿಟ್ಟ ಕಾಂಗ್ರೆಸ್ (Congress) ನಾಯಕರು,  ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದ್ದರು. ಇವತ್ತು ಚಿನ್ನದ ತಟ್ಟೆಯಲ್ಲಿ ಊಟ ಮಾಡುವಿರಾ !!? ಎಂದು ಬಿಜೆಪಿ (BJP) ವ್ಯಂಗ್ಯವಾಡಿದೆ. 

 

ಇದನ್ನೂ ಓದಿ :ಗಮನಿಸಿ.! ಇವತ್ತು ವಿಧಾನಸೌಧ, ಮೆಜೆಸ್ಟಿಕ್, ಸಿಟಿ ರೈಲ್ವೆ ಸ್ಡೇಷನ್, ಫ್ರೀಡಂಪಾರ್ಕ್ ಕಡೆ ಹೋಗಬೇಡಿ…!

ಇದು ಕಾಂಗ್ರೆಸ್ ಅಸ್ತಿತ್ವದ ಹೋರಾಟ, ರೈತಪರ ಹೋರಾಟ ಅಲ್ಲ:
ಸರಣಿ ಟ್ವಿಟ್ ಮುಂದುವರಿಸಿರುವ ಬಿಜೆಪಿ, ಧಾರವಾಡದ ನವಲಗುಂದ ತಾಲೂಕಿನ ಯಮನೂರು ರೈತರ (Farmers) ಮೇಲೆ ಯಮನಂತೆ ಎರಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಲು ಕಾಂಗ್ರೆಸ್  ಕುಮ್ಮಕ್ಕು ನೀಡಿತ್ತು.ಅದೇ ರೈತ ವಿರೋಧಿ ಕಾಂಗ್ರೆಸ್ ಇಂದು ಬೂಟಾಟಿಕೆ ಪ್ರದರ್ಶನ ಮಾಡುತ್ತಿದೆ. ರಾಜಭವನ ಚಲೋ ಎಂಬುದು ಕಾಂಗ್ರೆಸ್‌ ಅಸ್ತಿತ್ವದ ಹೋರಾಟವೇ ಹೊರತು ರೈತಪರ ಹೋರಾಟವಲ್ಲ ಎಂದು ಲೇವಡಿ ಮಾಡಿದೆ. 

 

ಪ್ರಧಾನಿ ಸಾಧನೆ ಏನು ಗೊತ್ತಾ..?:
ಅದೇ ಟ್ವೀಟ್ ನಲ್ಲಿ, ಪ್ರಧಾನಿ ರೈತರಿಗೆ ಏನೇನು ಮಾಡುತ್ತಿದ್ದಾರೆ ಎಂಬುದನ್ನು ಬಿಜೆಪಿ ವಿವರಿಸಿದೆ. ಪ್ರಧಾನಿ ನರೇಂದ್ರ ಮೋದಿ  ಸರ್ಕಾರ ರೈತರಿಗಾಗಿ ಶ್ರಮಿಸಿದಷ್ಟು ಯಾವ ಸರ್ಕಾರವೂ ಶ್ರಮಿಸಿಲ್ಲ. ಅನ್ನದಾತರಿಗೆ ಯೂರಿಯಾ ಸುಲಭವಾಗಿ ಲಭ್ಯವಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆಯ ಏರಿಕೆ. ಖರೀದಿ ವ್ಯವಸ್ಥೆ ಬಲಪಡಿಸಲಾಗಿದೆ.  ಕಾಂಗ್ರೆಸ್ ಊಹಿಸದ ರೀತಿಯಲ್ಲಿ ಮೋದಿ ಸರ್ಕಾರ ರೈತರಿಗೆ ಸ್ಪಂದಿಸುತ್ತಿದೆ ಎಂದು ಹೇಳಿದೆ. 

ಇದನ್ನೂ ಓದಿ : Suresh Angadi: ಶಾ ಭೇಟಿ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಬೈಎಲೆಕ್ಷನ್‌ ಟಿಕೆಟ್ ಇವರಿಗೆ ಫಿಕ್ಸ್..!?

"ನಾಟಕ ಮಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ?" :
ನಿಮ್ಮ ದುರಾಡಳಿತದಲ್ಲಿ ರೈತ ವಿಠಲ ಅರಭಾವಿ ಆತ್ಮಹತ್ಯೆಯ ಮಾಡಿಕೊಂಡಾಗ, ʼರೈತನ ಆತ್ಮಹತ್ಯೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ, ಚೆನ್ನಾಗಿ ಕುಡಿದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼ ಎಂದು ಹೇಳಿದ್ದಿರಿ. ಈಗ ರಾಜಭವನ (Rajabhavana) ಚಲೋ ಎಂಬ ನಾಟಕ ಮಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. 

 

"ಈಗ ರಾಜಭವನ ಚಲೋ ಎಂಬ ನಾಟಕ, ಚೆನ್ನಾಗಿದೆ"! :
2013-14 - 104, 2014-15 ರಲ್ಲಿ 128,  2015-16ರಲ್ಲಿ - 1483, 2016-17ರಲ್ಲಿ - 1185 ಮತ್ತು 2018-19ರಲ್ಲಿ -  3800 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಅವರ ಕಣ್ಣೀರು ಒರೆಸುವ ಬದಲು ಟಿಪ್ಪು ಜಯಂತಿ  (Tippu Jayanthi) ಆಚರಣೆಯಲ್ಲಿ ನಿರತರಾಗಿದ್ದಿರಿ. ಈಗ ರಾಜಭವನ ಚಲೋ ಎಂಬ ನಾಟಕ, ಚೆನ್ನಾಗಿದೆ! ಎಂದು ವ್ಯಂಗ್ಯವಾಡಿದೆ ಬಿಜೆಪಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News