ರಾಜ್ಯದಲ್ಲಿ ವಿನೂತನ ಕಾರ್ಯಕ್ರಮ ನಡೆಸಿ ಎಲ್ಲರ ಗಮನ ಸೆಳೆದ ಶೇಗುಣಸಿ ಮಠ

ಎಲ್ಲಿ ನೋಡಿದರೂ ಜನ ಸಾಗರ ಎಲ್ಲರೂ ಭಕ್ತಿಭಾವದಲ್ಲಿ ಮುಳುಗಿ ದೇವರ ನಾಮಸ್ಮರಣೆ ಸಲ್ಲಿಸುತ್ತಿದ್ದಾರೆ.  ಕಾರ್ಯಕ್ರಮವು ಪಟ್ಟಾಭಿಷೇಕಕ್ಕೆ ಮಾತ್ರ ಸಿಮೀತವಾಗದೆ ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶೇಗುಣಸಿ ಮಠವು ಆಕರ್ಷಣೆಯ ಕೇಂದ್ರ ಬಿಂದು ಆಗಿದೆ.

Written by - Zee Kannada News Desk | Last Updated : May 6, 2022, 01:28 PM IST
  • ಸುಕ್ಷೇತ್ರ ಶೇಗುಣಸಿಯ ಶ್ರೀ ವಿರಕ್ತಮಠವು ಬಸವಾದಿ ಪ್ರಮಥರ ಬಳಿವಿಡಿದು ಬಂದ ಅಪಾರ ಭಕ್ತಸಂಕುಲದ ಶ್ರದ್ಧಾಕೇಂದ್ರವಾಗಿದೆ.
  • ಎಲ್ಲಿ ನೋಡಿದರೂ ಜನ ಸಾಗರ ಎಲ್ಲರೂ ಭಕ್ತಿಭಾವದಲ್ಲಿ ಮುಳುಗಿ ದೇವರ ನಾಮಸ್ಮರಣೆ ಸಲ್ಲಿಸುತ್ತಿದ್ದಾರೆ.

    ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶೇಗುಣಸಿ ಮಠವು ಆಕರ್ಷಣೆಯ ಕೇಂದ್ರ ಬಿಂದು ಆಗಿದೆ.
ರಾಜ್ಯದಲ್ಲಿ ವಿನೂತನ ಕಾರ್ಯಕ್ರಮ ನಡೆಸಿ ಎಲ್ಲರ ಗಮನ ಸೆಳೆದ ಶೇಗುಣಸಿ ಮಠ title=
Innovative program in shegunasi matt

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮ ವಿರಕ್ತ ಮಠ ಅಂದ್ರೆ ಅದು ಉತ್ತರ ಕರ್ನಾಟಕದ  ಭಾವೈಕ್ಯತೆಗೆ ಹೆಸರುವಾಸಿಯಾದ ಪ್ರಸಿದ್ದ ಮಠ. ಈ ಮಠದಲ್ಲಿ 12ನೇ ಪೀಠಾಧಿಪತಿಯಾಗಿ ಡಾಕ್ಟರ್ ಮಹಾಂತ ದೇವರ ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದು ಗ್ರಾಮದಲ್ಲಿ  ಕಳೆದ ಒಂದು ತಿಂಗಳಿನಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ವಾಸ್ತವವಾಗಿ, ಎಲ್ಲಿ ನೋಡಿದರೂ ಜನ ಸಾಗರ ಎಲ್ಲರೂ ಭಕ್ತಿಭಾವದಲ್ಲಿ ಮುಳುಗಿ ದೇವರ ನಾಮಸ್ಮರಣೆ ಸಲ್ಲಿಸುತ್ತಿದ್ದಾರೆ.  ಕಾರ್ಯಕ್ರಮವು ಪಟ್ಟಾಭಿಷೇಕಕ್ಕೆ ಮಾತ್ರ ಸಿಮೀತವಾಗದೆ ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶೇಗುಣಸಿ ಮಠವು ಆಕರ್ಷಣೆಯ ಕೇಂದ್ರ ಬಿಂದು ಆಗಿದೆ.

ಇದನ್ನೂ ಓದಿ- ಹಣ ಪ್ರಾಪ್ತಿ ಜೊತೆಗೆ ಸೂರ್ಯ ದೋಷ ನಿವಾರಣೆಗೆ ಸಹಾಕಾರಿ ಈ ರುದ್ರಾಕ್ಷಿ

ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಶ್ರೀ ಶಂಕರಾನಂದ ಸ್ವಾಮೀಜಿಯವರ ಅಮೃತ ಮಹೋತ್ಸವ ಹಾಗೂ ಡಾಕ್ಟರ್ ಮಹಾಂತ ದೇವರ ಚರಪಟ್ಟಾಭಿಷೇಕ ನಿಮಿತ್ತವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಏಕಕಾಲಕ್ಕೆ ಹತ್ತು ಸಾವಿರ ಜನರಿಗೆ ರುದ್ರಾಕ್ಷಿ ದೀಕ್ಷೆ ಕಾರ್ಯಕ್ರಮ ನಡೆದು ರಾಜ್ಯದಲ್ಲಿ ಎಲ್ಲರ ಗಮನ ಸೆಳೆದಿದೆ. 

ಸುಕ್ಷೇತ್ರ ಶೇಗುಣಸಿಯ ಶ್ರೀ ವಿರಕ್ತಮಠವು ಬಸವಾದಿ ಪ್ರಮಥರ ಬಳಿವಿಡಿದು ಬಂದ ಅಪಾರ ಭಕ್ತಸಂಕುಲದ ಶ್ರದ್ಧಾಕೇಂದ್ರವಾಗಿದ್ದು, ಮಹಾತಪಸ್ವಿಗಳಾದ ಶ್ರೀ.ಮ.ನಿ.ಪ್ರ. ಲಿಂ, ಮುರುಘಂದ್ರ ಮಹಾಸ್ವಾಮಿಗಳವರು ಶ್ರೀ ವಿರಕ್ತಮಠದ 10ನೇ ಪೀಠಾಧಿಪತಿಗಳಾಗಿ ಶ್ರೀ ಮಠದ ಘನತೆ, ಗೌರವಗಳನ್ನು ವಿಸ್ತಾರೋನ್ನತವಾಗಿ ಹೆಚ್ಚಿಸಿದರು. ವಾಕ್‌ಸಿದ್ಧಿ ಪುರುಷರಾದ ಪೂಜ್ಯರು ನಂಬಿಬಂದ ಭಕ್ತರ ನೋವ ನಿವಾರಿಸಿದವರು. ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿಯಂತೆ ನಿರಂತರವಾಗಿ ಸಂಚರಿಸಿ ಲೋಕೋದ್ಧಾರಗೈದವರು. ತ್ರಿಕಾಲಜ್ಞಾನಿಗಳಾಗಿ ಭಕ್ತರ ಕಲ್ಯಾಣಕ್ಕಾಗಿಯೇ ಸರ್ವಸ್ವವನ್ನು ಸಮರ್ಪಿಸಿಕೊಂಡು ಪೂಜ್ಯರು ನಾಡಿನ ಪರಮಾರಾಧ್ಯ ಗುರುಗಳಾಗಿದ್ದರು. ಸದ್ಯ 11ನೇ ಮಠಾಧೀಶರಾದ ಶಂಕರಾನಂದ ಮಹಾಸ್ವಾಮಿಗಳ ಸುದೀರ್ಘವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಅಮೃತ ಮಹೋತ್ಸವ ಸಮಾರಂಭ ಜರುಗಿದ್ದು, ಸಮಾಜದಲ್ಲಿ ತಲ್ವಾರ್ ತ್ರಿಶೂಲ ದೀಕ್ಷೆ ನಡುವೆ ರುದ್ರಾಕ್ಷಿ ದೀಕ್ಷೆ ನಡೆದು ಅಂತರಂಗದ ಜ್ಞಾನಗ್ನಿ ದೀಕ್ಷೆ ಶ್ರೀ ಮಠ ವಿನೂತನವಾಗಿ ಕಾರ್ಯಕ್ರಮ ನಡೆದಿದೆ ಎಂದು ಬೈಲೂರು ಶ್ರೀ ಪರಮಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಹೇಳಿದರು.
 
ಇದನ್ನೂ ಓದಿ- R Ashok : 'ಪಿಎಸ್ಐ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು'

ಒಟ್ಟಾರೆ ಶೇಗುಣಸಿ ಗ್ರಾಮದ ಮಠದಲ್ಲಿ ನೂತನ ಚರಪಟ್ಟಾಭಿಷೇಕ ಕಾರ್ಯಕ್ರಮ ಸೀಮಿತವಾಗದೆ ಪ್ರತಿದಿನವು ಬಸವಪುರಾಣ, ಮಹಿಳಾ ಸಮಾವೇಶ, ಯುವಜನೋತ್ಸವ, ಸಾವಯುವ ಕೃಷಿ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮ, ರುದ್ರಾಕ್ಷಿ ದೀಕ್ಷೆ ಹೀಗೆ ಹಲವಾರು ವಿಭಿನ್ನ ಕಾರ್ಯಕ್ರಮಗಳು ಮಠದ ಶ್ರೀಗಳು ನಡೆಸಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆಮೂಲೆಯ ಮಠಾಧೀಶರು ಭಾಗಿಯಾಗಿ ಹಲವಾರು ರಾಜಕೀಯ ನಾಯಕರು ಉಪಸ್ಥಿತರಿದ್ದರಾಗಿ ಗುರುವಿನ ಆಶೀರ್ವಾದಕ್ಕೆ ಪಾತ್ರರಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News