ಕೊಪ್ಪಳ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಗ್ರಾಮೀಣ ಭಾಗದ ಆಸಕ್ತರಿಗೆ 10 ದಿನಗಳ ಉಚಿತ ಕುರಿ ಸಾಕಾಣಿಕೆ ತರಬೇತಿ (Sheep Farming) ಯನ್ನು ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ OnePlus Nord 2 5G...!
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
-ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 45 ವರ್ಷ ಒಳಗಿನವರಾಗಿರಬೇಕು.
-ಕನಿಷ್ಠ 8 ನೇ ತರಗತಿ ಪಾಸಾಗಿರಬೇಕು.
-ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು.
-ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು ಮತ್ತು ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.
ಇದನ್ನೂ ಓದಿ: ಕನ್ನಡಿಗ ಕೆ.ಎಲ್.ರಾಹುಲ್ ಪಾಕ್ ಗೆ ಅಪಾಯಕಾರಿಯಾಗಲಿದ್ದಾರೆ ಎಂದ ಮ್ಯಾಥ್ಯೂ ಹೇಡನ್
ಅರ್ಜಿಯನ್ನು ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ಈ ವಿಳಾಸಕ್ಕೆ ಮಾ.13 ರ ಒಳಗಾಗಿ ಸಲ್ಲಿಸಬೇಕು.ಮಾ.14 ರಂದು ಬೆಳಿಗ್ಗೆ 10.30 ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಹಾಗೂ ಮಾ.15 ರಿಂದ ತರಬೇತಿಗಳು ಪ್ರಾರಂಭವಾಗುತ್ತವೆ. ತರಬೇತಿಯಲ್ಲಿ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.08539-230138 ಸಂಪರ್ಕಿಸಬಹುದು ಎಂದು ಕೊಪ್ಪಳ ಎಸ್ಬಿಐ ಆರ್ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.