ಬೆಂಗಳೂರು: ಆತ್ಮಸಾಕ್ಷಿಯೇ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷ(Congress Party)ದಲ್ಲಿ ಸತ್ಯಕ್ಕೆ ಬೆಲೆಯಿದೆಯೇ? ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ. ಮಂಗಳವಾರ ಟ್ವೀಟ್ ಮಾಡುವ ಮೂಲಕ ದಲಿತ ವಿರೋಧಿ ಬಿಜೆಪಿ ಎಂದು ಹೇಳಿದ್ದ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ.
#ದಲಿತವಿರೋಧಿಬಿಜೆಪಿ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ‘ಬೆಂಗಳೂರಿನ ಹೃದಯಬಾಗದಲ್ಲಿ ಒಬ್ಬ ಜನಪ್ರತಿನಿಧಿಗೆ ರಕ್ಷಣೆ ನೀಡದ್ದು ಬಿಜೆಪಿ ಸರ್ಕಾರ(BJP Govt.)ದ ಕಾನೂನು ಸುವ್ಯವಸ್ಥೆಯ ಅಧೋಗತಿಗೆ ಸಾಕ್ಷಿ, ಅಖಂಡ ಶ್ರೀನಿವಾಸಮೂರ್ತಿ ದಲಿತರೆಂಬ ಕಾರಣಕ್ಕೆ ಬಿಜೆಪಿ ರಕ್ಷಣೆ ನೀಡಲು ವಿಳಂಬ ಮಾಡಿ ತನ್ನ ದಲಿತ ವಿರೋಧಿ ನೀತಿಯ ತಾಲಿಬಾನ್ ಸಂಸ್ಕೃತಿಯನ್ನು ನಿರೂಪಿಸಿದೆ’ ಎಂದು ಆರೋಪಿಸಿತ್ತು.
ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಸತ್ಯ ಶೋಧನೆಗೆ ನೀವು ರಚಿಸಿದ ಸಮಿತಿ ಏನು ಮಾಡಿದೆ @INCKarnataka?
ಸತ್ಯ ಶೋಧನಾ ಸಮಿತಿಯಾದರೂ ಸತ್ಯ ಹೇಳಿದೆಯೇ? ಆತ್ಮಸಾಕ್ಷಿಯೇ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆಯಿದೆಯೇ?#DalitVirodhiCongres
— BJP Karnataka (@BJP4Karnataka) September 21, 2021
ಇದನ್ನೂ ಓದಿ: ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ
ಅಖಂಡ ಮನೆಗೆ ಬೆಂಕಿ ಇಟ್ಟವರು ನನ್ನ ಸಹೋದರರು, ನನ್ನ ಮೈಯಲ್ಲಿ ಹರಿಯುವುದು ಅವರದೇ ರಕ್ತ ಎಂದು ನಿಮ್ಮ ಭ್ರಷ್ಟಾಧ್ಯಕ್ಷರು ಹೇಳಿದ್ದು ನೆನಪಿದೆಯೇ @INCKarnataka?
ದಲಿತ ಶಾಸಕನ ಪರ ನಿಲ್ಲುವುದು ಬಿಟ್ಟು, ಅವರ ವಿರುದ್ಧವೇ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದೇಕೆ?#DalitVirodhiCongress ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?
— BJP Karnataka (@BJP4Karnataka) September 21, 2021
ಕಾಂಗ್ರೆಸ್ ನ ಈ ಆರೋಪಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಬಿಜೆಪಿ, ‘ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ(Akhanda Srinivas Murthy) ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಸತ್ಯ ಶೋಧನೆಗೆ ನೀವು ರಚಿಸಿದ ಸಮಿತಿ ಏನು ಮಾಡಿದೆ. ಸತ್ಯ ಶೋಧನಾ ಸಮಿತಿಯಾದರೂ ಸತ್ಯ ಹೇಳಿದೆಯೇ? ಆತ್ಮಸಾಕ್ಷಿಯೇ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆಯಿದೆಯೇ? ಎಂದು ಪ್ರಶ್ನಿಸಿದೆ.
‘ಅಖಂಡ ಮನೆಗೆ ಬೆಂಕಿ ಇಟ್ಟವರು ನನ್ನ ಸಹೋದರರು, ನನ್ನ ಮೈಯಲ್ಲಿ ಹರಿಯುವುದು ಅವರದೇ ರಕ್ತ ಎಂದು ನಿಮ್ಮ ಭ್ರಷ್ಟಾಧ್ಯಕ್ಷರು ಹೇಳಿದ್ದು ನೆನಪಿದೆಯೇ ಕಾಂಗ್ರೆಸ್? ದಲಿತ ಶಾಸಕ(Dalit MLA)ನ ಪರ ನಿಲ್ಲುವುದು ಬಿಟ್ಟು, ಅವರ ವಿರುದ್ಧವೇ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದೇಕೆ? #DalitVirodhiCongress ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?’ ಎಂದು ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ಬಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ!
ತಾನು ಕಳ್ಳ ಪರರ ನಂಬ ಎಂಬ ಗಾದೆ ಮಾತು ಕಾಂಗ್ರೆಸ್ ಪಕ್ಷಕ್ಕಾಗಿಯೇ ಮಾಡಿದ್ದು ಎಂಬುದು ಈಗ ಖಾತ್ರಿಯಾಯ್ತು.
ತಮ್ಮ ಮತ ಬ್ಯಾಂಕ್ ಬೇಸರಗೊಳ್ಳುತ್ತದೆ ಎಂಬ ಕಾರಣಕ್ಕೆ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಸಾಂತ್ವನ ಹೇಳುವುದಕ್ಕೂ ಅಂಜಿದ್ದು ನೀವಲ್ಲವೇ @INCKarnataka?#DalitVirodhiCongress pic.twitter.com/bGoWM5qMMX
— BJP Karnataka (@BJP4Karnataka) September 21, 2021
‘ತಾನು ಕಳ್ಳ ಪರರ ನಂಬ ಎಂಬ ಗಾದೆ ಮಾತು ಕಾಂಗ್ರೆಸ್ ಪಕ್ಷಕ್ಕಾಗಿಯೇ ಮಾಡಿದ್ದು ಎಂಬುದು ಈಗ ಖಾತ್ರಿಯಗಿದೆ. ತಮ್ಮ ಮತ ಬ್ಯಾಂಕ್ ಬೇಸರಗೊಳ್ಳುತ್ತದೆ ಎಂಬ ಕಾರಣಕ್ಕೆ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಸಾಂತ್ವನ ಹೇಳುವುದಕ್ಕೂ ಅಂಜಿದ್ದು ನೀವಲ್ಲವೇ ಕಾಂಗ್ರೆಸ್?’ ಎಂದು ಬಿಜೆಪಿ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.