ಮುಸ್ಲಿಂ ಹಲಾಲ್ ವಿರುದ್ದ ಕಾಳಿ ಸ್ವಾಮಿ ಅಭಿಯಾನ, ಹಲಾಲ್ ಮಾಂಸ ಖರೀದಿಸದಂತೆ ಕರೆ

ಹಿಂದೂ ಧರ್ಮದಲ್ಲಿ ಅನೇಕ ಯತಿಗಳು ಇದ್ದಾರೆ. ಸಾತ್ವಿಕ, ರಾಜಸಿ, ತಾಮಸಿ ಗುಣಗಳಿರುವ ಯತಿಗಳಿದ್ದಾರೆ. ಹಲಾಲ್ ಮಾಡಿರುವ ಮಾಂಸ ಖರೀದಿಸಬೇಡಿ ಎಂದು ಯತಿಗಳು ಭಕ್ತರಿಗೆ ತಿಳಿಸಬೇಕು ಎಂದು  ಕಾಳಿ ಸ್ವಾಮೀಜಿ ಹೇಳಿದ್ದಾರೆ

Written by - Zee Kannada News Desk | Last Updated : Mar 29, 2022, 03:53 PM IST
  • ಹಲಾಲ್ ಮಾಂಸವನ್ನು ಖರೀದಿಸದಂತೆ ಕರೆ
  • ಹಿಂದವಿ ಮೀಟ್ ಮಾರ್ಟ್ ನ ಪ್ರಧಾನ ಘಟಕಕ್ಕೆ ಕಾಳಿ ಸ್ವಾಮೀಜಿ ಭೇಟಿ
  • ರಾಜ್ಯಾದ್ಯಂತ ಹಲಾಲ್ ಬಾಯ್ಕಾಟ್ ಅಭಿಯಾನ
 ಮುಸ್ಲಿಂ ಹಲಾಲ್ ವಿರುದ್ದ ಕಾಳಿ ಸ್ವಾಮಿ ಅಭಿಯಾನ, ಹಲಾಲ್ ಮಾಂಸ ಖರೀದಿಸದಂತೆ ಕರೆ  title=
ಹಲಾಲ್ ಮಾಂಸವನ್ನು ಖರೀದಿಸದಂತೆ ಕರೆ (file photo)

ಬೆಂಗಳೂರು : ಮುಸ್ಲಿಂರು ಮಾರಾಟ ಮಾಡುತ್ತಿರುವ  ಹಲಾಲ್ ಮಾಂಸವನ್ನು ಖರೀದಿ ಮಾಡದಂತೆ ಕಾಳಿ ಸ್ವಾಮೀಜಿ ಆಗ್ರಹಿಸಿದ್ದಾರೆ (Kali swamiji) .  ಈ ಬಗ್ಗೆ ಅವರು ಅಭಿಯಾನ ಆರಂಭಿಸಿದ್ದಾರೆ. 

ಇದಕ್ಕೂ ಮುನ್ನ ವಿದ್ಯಾಪೀಠ ಸರ್ಕಲ್ ನಲ್ಲಿ  ಪೇಜಾವರ ಶ್ರೀಗಳ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ  ಉಲ್ಲಾಳ ಗೇಟ್ ಬಳಿಯ ವಿಶ್ವೇಶ್ವರಯ್ಯ ಲೇಔಟ್ ಮಟನ್ ಸ್ಟಾಲ್  ಕಾಳಿ ಸ್ವಾಮೀ (Kali swamiji) ಭೇಟಿ ನೀಡಿದ್ದಾರೆ. 

ಇದನ್ನೂ ಓದಿ : #LeopardDogFight : ಚಿರತೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ

ಹಿಂದವಿ ಮೀಟ್ ಮಾರ್ಟ್ ನ ಪ್ರಧಾನ ಘಟಕಕ್ಕೆ ಕಾಳಿ ಸ್ವಾಮೀಜಿ ಭೇಟಿ :
ಹಿಂದೂ ಧರ್ಮದಲ್ಲಿ (Hindu) ಅನೇಕ ಯತಿಗಳು ಇದ್ದಾರೆ. ಸಾತ್ವಿಕ, ರಾಜಸಿ, ತಾಮಸಿ ಗುಣಗಳಿರುವ ಯತಿಗಳಿದ್ದಾರೆ. ಹಲಾಲ್ (Halal)ಮಾಡಿರುವ ಮಾಂಸ ಖರೀದಿಸಬೇಡಿ ಎಂದು ಯತಿಗಳು ಭಕ್ತರಿಗೆ ತಿಳಿಸಬೇಕು ಎಂದು  ಕಾಳಿ ಸ್ವಾಮೀಜಿ ಹೇಳಿದ್ದಾರೆ.  ಹಲಾಲ್ ಮಾಡುವುದು ಎಂದರೆ ಅದನ್ನು ಅಲ್ಲಾನಿಗೆ ಅರ್ಪಿಸಿದಂತೆ.. ಅದನ್ನು ತಂದು ನಾವು ಹಬ್ಬ ಹರಿದಿನಗಳನ್ನ ಮಾಡಬೇಕಾದ ಸ್ಥಿತಿ ಇದೆ ಎಂದವರು  ಹೇಳಿದ್ದಾರೆ. 

 

ಹಲಾಲ್ ಮಾಡದೇ ಇರುವುದು ಇಸ್ಲಾಂ (islam) ಪ್ರಕಾರ ಹರಾಮ್ ಅಂತೆ.. ಆದರೆ ಹಲಾಲ್ ಮಾಡಿರುವುದು ಹಿಂದೂಗಳಿಗೆ ಹರಾಮ್  ಎಂದು ಕಾಳಿ ಸ್ವಾಮೀಜಿ ಹೇಳಿದ್ದಾರೆ. ರಾಜ್ಯಾದ್ಯಂತ ಹಲಾಲ್ ಬಾಯ್ಕಾಟ್ (Halal Boycot )ಅಭಿಯಾನ ನಡೆಸುವುದಾಗಿ ಹೇಳಿದ್ದಾರೆ. 

ಇದನ್ನೂ ಓದಿ : ಮಾಸ್ಕ್ ದಂಡ ನಿಯಮಕ್ಕೆ ಬಹುತೇಕ ಫುಲ್ ಸ್ಟಾಪ್!

ಯಾವ ಹಿಂದೂಗಳು ಮಾಂಸದ ಅಂಗಡಿಗಳನ್ನು ತೆರೆಯಲು ಮುಂದಾಗುತ್ತಾರೆಯೋ  ಅವರಿಗೆ ಸಹಕಾರ ನೀಡುವುದಾಗಿ ಕಾಳಿ ಸ್ವಾಮೀಜಿ ಹೇಳಿದ್ದಾರೆ.  ಅಲ್ಲದೆ, ಮಾಂಸದ ಅಂಗಡಿ ತೆರೆಯುವ ಹಿಂದೂಗಳಿಗೆ ಹಿಂದವೀ ಮೀಟ್ ಮಾರ್ಟ್ ನಿಂದ ಉಚಿತ ತರಬೇತಿ ನೀಡುವುದಾಗಿಯೂ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News