ಇಂದು ಮಾಜಿ ಪಿಎಂ ಡಾ. ಮನಮೋಹನ್ ಸಿಂಗ್ ಅವರಿಂದ ಕನ್ನಡ ಪುಸ್ತಕ ಬಿಡುಗಡೆ

ದೆಹಲಿಯ ಇಂಡಿಯಾ ಹೆಬಿಟೇಟ್ ಸೆಂಟರ್ ಗುಲ್ ಮೊಹರ್ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

Written by - Yashaswini V | Last Updated : Feb 22, 2020, 09:26 AM IST
ಇಂದು ಮಾಜಿ ಪಿಎಂ ಡಾ. ಮನಮೋಹನ್ ಸಿಂಗ್ ಅವರಿಂದ ಕನ್ನಡ ಪುಸ್ತಕ ಬಿಡುಗಡೆ title=

ನವದೆಹಲಿ: ಬೆಂಗಳೂರಿನ ಶೇಷಾದ್ರಿ ಪುರಂ ಮತ್ತು ಸುರಾನಾ ಕಾಲೇಜುಗಳ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ಇ‌. ರಾಧಾಕೃಷ್ಣ ಅವರು ಅನುವಾದ ಮಾಡಿರುವ 'ಯಾರು ಭಾರತ ಮಾತೆ? ಎಂಬ ಕನ್ನಡ ಪುಸ್ತಕವನ್ನು ದೇಶಕಂಡ ಶ್ರೇಷ್ಟ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಇಂದು ಬಿಡುಗಡೆ ಮಾಡಲಿದ್ದಾರೆ.

ದೆಹಲಿಯ ಇಂಡಿಯಾ ಹೆಬಿಟೇಟ್ ಸೆಂಟರ್ ಗುಲ್ ಮೊಹರ್ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ರಾಜ್ಯಸಭಾ‌ ಸದಸ್ಯ ಜೈರಾಂ ರಮೇಶ್ ಕೂಡ ಉಪಸ್ಥಿತರಿರಲಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸ್ಪೀಕರ್ ಕೆ.ಆರ್.‌ ರಮೇಶ್ ಕುಮಾರ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಕೃಣ್ಣಭಟ್, ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ್ ಮತ್ತಿತರು ಭಾಗವಹಿಸಲಿದ್ದಾರೆ.

ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು ವಿವಿಧ ಸಂದರ್ಭಗಳಲ್ಲಿ ಬರೆದಿರುವ ಲೇಖನಗಳನ್ನು ಆದರಿಸಿ ಜೆಎನ್ ಯು ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಪಕ ಪುರುಷೋತ್ತಮ ಅಗರ್ವಾಲ್ ರಚಿಸಿರುವ 'ವೂ ಈಸ್ ಭಾರತ್ ಮಾತಾ?' ಕೃತಿಯನ್ನು ಪ್ರೊ. ಕೆ.ಇ. ರಾಧಾಕೃಷ್ಣ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

Trending News