ಬೆಂಗಳೂರು: ಹಗರಣಗಳನ್ನು ಮುಚ್ಚಿಹಾಕುವುದೇ ಸಿಎಂ ಆಗಿ ಬಸವರಾಜ್ ಬೊಮ್ಮಾಯಿಯವರ ಕೆಲಸವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ‘ಕೈ’ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘ಮತದಾರರ ಮಾಹಿತಿ ಕಳುವಿನ ಚಿಲುಮೆ ಹಗರಣ ಮುಚ್ಚಿ ಹೋಯ್ತು, ವಂಚಕ ಸ್ಯಾಂಟ್ರೋ ರವಿಯ ಪ್ರಕರಣ ಬಿಲ ಸೇರಿತು, ಬಿಟ್ ಕಾಯಿನ್ ಹಗರಣದ ತನಿಖೆಯ ಉಸಿರು ಕಟ್ಟಿತು, 40% ಕಮಿಷನ್ ಲೂಟಿಯ ತನಿಖೆಯೇ ಆಗಲಿಲ್ಲ ಮತ್ತು ವಿಧಾನಸೌಧದಲ್ಲಿ 10 ಲಕ್ಷ ರೂ. ಹಣ ಸಿಕ್ಕ ಪ್ರಕರಣವೂ ಮುಚ್ಚಿ ಹೋಯ್ತು’ ಎಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: ಸೇವಾ ನ್ಯೂನ್ಯತೆ ಎಸಗಿದ ಜಿ.ಟಿ.ಎಲ್. ಟಾವರ್ ಕಂಪನಿಗೆ ರೂ.4,81,875 ರೂ.ಗಳ ದಂಡ
‘ರೌಡಿ ಮೋರ್ಚಾ ಕಟ್ಟಿಕೊಂಡಿರುವ ಬಿಜೆಪಿ ನಾಯಕರು ಮಾಫಿಯಾ ಡಾನ್ಗಳಂತೆ ವರ್ತಿಸುತ್ತಾ, ಚುನಾವಣೆಯನ್ನು ಮಾಫಿಯಾದಂತೆ ನಡೆಸಲು ಮುಂದಾಗಿದ್ದಾರೆ. ಯಲಹಂಕ ಶಾಸಕ ವಿಶ್ವನಾಥ್ ಕಾಂಗ್ರೆಸ್ ನಾಯಕರಿಗೆ ಜೀವ ಬೆದರಿಕೆ ಹಾಕುವ ಮೂಲಕ "ರೌಡಿ ರಾಜಕೀಯ" ಮಾಡ್ತಿದಾರೆ. ಕಾಂಗ್ರೆಸ್ ಎಂದಿಗೂ ಬಿಜೆಪಿ ರೌಡಿಗಳ ಬೆದರಿಕೆಗಳಿಗೆ ಮಣಿಯುವುದಿಲ್ಲ’ವೆಂದು ಎಚ್ಚರಿಕೆ ನೀಡಿದೆ.
◆ಮತದಾರರ ಮಾಹಿತಿ ಕಳುವಿನ ಚಿಲುಮೆ ಹಗರಣ ಮುಚ್ಚಿ ಹೋಯ್ತು
◆ಸ್ಯಾಂಟ್ರೋ ರವಿಯ ಪ್ರಕರಣ ಬಿಲ ಸೇರಿತು
◆ಬಿಟ್ ಕಾಯಿನ್ ಹಗರಣದ ತನಿಖೆಯ ಉಸಿರು ಕಟ್ಟಿತು
◆40% ಕಮಿಷನ್ ಲೂಟಿಯ ತನಿಖೆಯೇ ಆಗಲಿಲ್ಲ
◆ವಿಧಾನಸೌಧದಲ್ಲಿ 10 ಲಕ್ಷ ಹಣ ಸಿಕ್ಕ ಪ್ರಕರಣವೂ ಮುಚ್ಚಿ ಹೋಯ್ತು
ಸಿಎಂ ಆಗಿ @BSBommai ಅವರ ಕೆಲಸ ಹಗರಣಗಳನ್ನು ಮುಚ್ಚಿಹಾಕುವುದೇ?
— Karnataka Congress (@INCKarnataka) February 11, 2023
‘ಭ್ರಷ್ಟ ಬಿಜೆಪಿ ಸರ್ಕಾರದಿಂದ ಬೇಸತ್ತ ಜನರಿಗೆ ಕಾಂಗ್ರೆಸ್ ಕೊಡುಗೆಯಾಗಿ ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರಂಟಿಗಳನ್ನು ನೀಡುತ್ತಿದ್ದು, ರಾಜ್ಯದ ಪ್ರತಿ ಮನೆಗೆ ಈ ಗ್ಯಾರಂಟಿಗಳನ್ನು ತಲುಪಿಸುವುದೇ ನಮ್ಮ ಉದ್ದೇಶ’ವೆಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಜನವರಿ ತಿಂಗಳಲ್ಲಿ 6,085 ಕೋಟಿ ರೂ. GST ಸಂಗ್ರಹ: ಸಿಎಂ ಬಸವರಾಜ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.