ʼಶಕ್ತಿʼಯ ವ್ಯಯದ ಮೊತ್ತ ಬಿಡುಗಡೆ ಮಾಡಿದ ಸರ್ಕಾರ : ಯಾವ ಸಾರಿಗೆ ನಿಗಮಕ್ಕೆ ಎಷ್ಟು..?

ಕಳೆದ ಎರಡು ತಿಂಗಳಿಂದ ಎಲ್ಲಾ ಸಾರಿಗೆ ನಿಗಮಗಳಿಗೆ ಶೂನ್ಯ ಟಿಕೆಟ್ ನಿಂದ ಕೋಟಿ ಕೋಟಿ ವ್ಯಯ ಆಗಿತ್ತು. ‌ಹೀಗಾಗಿ ಸರ್ಕಾರ ಈ ಬಗ್ಗೆ ಹಣ ನೀಡೋದಾಗಿ ಭರವಸೆಯನ್ನ ಕೊಟ್ಟಿತ್ತು. ಆ ಭರವಸೆ ಆಧಾರಮೇಲೆ ಇದೀಗ 125.48 ಕೋಟಿ ಹಣ ಬಿಡುಗಡೆ ಮಾಡಿದೆ.

Written by - Krishna N K | Last Updated : Aug 2, 2023, 05:16 PM IST
  • ಎಲ್ಲಾ ಸಾರಿಗೆ ನಿಗಮಗಳಿಗೆ ಶೂನ್ಯ ಟಿಕೆಟ್ ನಿಂದ ಕೋಟಿ ಕೋಟಿ ವ್ಯಯ ಆಗಿತ್ತು. ‌
  • ಸರ್ಕಾರ ಈ ಬಗ್ಗೆ ಹಣ ನೀಡೋದಾಗಿ ಭರವಸೆಯನ್ನ ಕೊಟ್ಟಿತ್ತು.
  • ಆ ಭರವಸೆ ಆಧಾರಮೇಲೆ ಇದೀಗ 125.48 ಕೋಟಿ ಹಣ ಬಿಡುಗಡೆ ಮಾಡಿದೆ.
ʼಶಕ್ತಿʼಯ ವ್ಯಯದ ಮೊತ್ತ ಬಿಡುಗಡೆ ಮಾಡಿದ ಸರ್ಕಾರ : ಯಾವ ಸಾರಿಗೆ ನಿಗಮಕ್ಕೆ ಎಷ್ಟು..? title=

ಬೆಂಗಳೂರು : ಶಕ್ತಿಯೋಜನೆಯಿಂದ ಕಂಗಾಲಾಗಿದ್ದ ಸಾರಿಗೆ ನಿಗಮಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮೊದಲ ಕಂತಿನ ಆಧಾರದಲ್ಲಿ ಎಲ್ಲಾ ಸಾರಿಗೆ ನಿಗಮಗಳಿಗೆ "ಶಕ್ತಿ" ವ್ಯಯದ ಹಣವನ್ನ ಬಿಡುಗಡೆ ಮಾಡಿದೆ.

ಈ ಮೂಲಕ ಕಳೆದ ಎರಡು ತಿಂಗಳಿಂದ ಎಲ್ಲಾ ಸಾರಿಗೆ ನಿಗಮಗಳಿಗೆ ಶೂನ್ಯ ಟಿಕೆಟ್ ನಿಂದ ಕೋಟಿ ಕೋಟಿ ವ್ಯಯ ಆಗಿತ್ತು. ‌ಹೀಗಾಗಿ ಸರ್ಕಾರ ಈ ಬಗ್ಗೆ ಹಣ ನೀಡೋದಾಗಿ ಭರವಸೆಯನ್ನ ಕೊಟ್ಟಿತ್ತು. ಆ ಭರವಸೆ ಆಧಾರಮೇಲೆ ಇದೀಗ 125.48 ಕೋಟಿ ಹಣ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಫ್ರೀ ಗ್ಯಾರಂಟಿ ಯೋಜನೆಗಳಿಗೆ ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ಸಿಎಂ ತಿರುಗೇಟು!

ಶಕ್ತಿ ಯೋಜನೆಯ ಹಣ ಬಿಡುಗಡೆ ಮಾಡಿದ ಸರ್ಕಾರ ಆದೇಶ ಹೊರಡಿಸಿದ್ದಾರೆ. ಮೊದಲ ಕಂತಿನ ಹಣವನ್ನ ಬಿಡುಗಡೆ ಮಾಡಿದ್ದು, ಎಲ್ಲಾ ನಿಗಮಗಳಿಗೆ 125.48 ಕೋಟಿ ಹಣ ಸಲ್ಲಿಕೆ ಆಗಿದೆ. ಅಂದ್ರೆ ನಾಲ್ಕು ನಿಗಮಗಳಿಗೂ ಪ್ರತೇಕ ಹಣ ಬಿಡುಗಡೆ ಮಾಡಿದ್ದು, ಇಲ್ಲಿ ತನಕ ಒಟ್ಟು ನಾಲ್ಕು ನಿಗಮಗಳಲ್ಲಿ 29 ಕೋಟಿ 32 ಲಕ್ಷ 49 ಸಾವಿರದ 151ಮಹಿಳೆಯರ ಓಡಾಟ ನಡೆಸಿದ್ದು, ಒಟ್ಟು ನಾಲ್ಕು ನಿಗಮಗಳ ಶೂನ್ಯ ಟಿಕೆಟ್ ದರ 687 ಕೋಟಿ 49 ಲಕ್ಷದ 57 ಸಾವಿರದ 753 ರೂ ಆಗಿದೆ. ಇನ್ನುಳಿದ ಮೊತ್ತವನ್ನ ಮುಂದಿನ ಕಂತುಗಳಲ್ಲಿ ಬಿಡುಗಡೆ ಮಾಡೋದಾಗಿ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಯಾವ ನಿಗಮಗಳಿಗೆ ಎಷ್ಟು ಹಣ ಬಿಡುಗಡೆ

  • KSRTC - 47.15. ಕೋಟಿ
  • BMTC - 21.85. ಕೋಟಿ
  • NWRTC- 32.57. ಕೋಟಿ
  • KKRTC - 23.90. ಕೋಟಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News