ಟೆಲಿಗ್ರಾಂ ಚಾನೆಲ್ ಮೂಲಕ ದೊರೆಯಲಿದೆ ನಿಮಗೆ ಕರ್ನಾಟಕ ಹೈಕೋರ್ಟ್ ಮಾಹಿತಿ..!

ಭಾರತದ ಸರ್ವೋಚ್ಛ ನ್ಯಾಯಾಲಯ ಸೇರಿದಂತೆ ರಾಜ್ಯ ಉಚ್ಛನ್ಯಾಯಾಲಯ, ವಿಭಾಗೀಯ ಪೀಠ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಜರುಗುವ ಕಾರ್ಯಕಲಾಪಗಳ ಕುರಿತು ಮಾಹಿತಿ ಪಡೆಯುವ ಹಾಗೂ ಅಗತ್ಯವಿದ್ದಲ್ಲಿ ಟೆಲಿಗ್ರಾಂ ಚಾನೆಲ್ ಮೂಲಕ ಕಲಾಪಗಳಲ್ಲಿ ಭಾಗವಹಿಸುವ ಅವಕಾಶವನ್ನು ನ್ಯಾಯವಾದಿಗಳಿಗೆ ಕಲ್ಪಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹೇಳಿದರು.

Written by - ZH Kannada Desk | Last Updated : Oct 23, 2021, 03:27 PM IST
  • ಭಾರತದ ಸರ್ವೋಚ್ಛ ನ್ಯಾಯಾಲಯ ಸೇರಿದಂತೆ ರಾಜ್ಯ ಉಚ್ಛನ್ಯಾಯಾಲಯ, ವಿಭಾಗೀಯ ಪೀಠ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಜರುಗುವ ಕಾರ್ಯಕಲಾಪಗಳ ಕುರಿತು ಮಾಹಿತಿ ಪಡೆಯುವ ಹಾಗೂ ಅಗತ್ಯವಿದ್ದಲ್ಲಿ ಟೆಲಿಗ್ರಾಂ ಚಾನೆಲ್ ಮೂಲಕ ಕಲಾಪಗಳಲ್ಲಿ ಭಾಗವಹಿಸುವ ಅವಕಾಶವನ್ನು ನ್ಯಾಯವಾದಿಗಳಿಗೆ ಕಲ್ಪಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹೇಳಿದರು.
ಟೆಲಿಗ್ರಾಂ ಚಾನೆಲ್ ಮೂಲಕ ದೊರೆಯಲಿದೆ ನಿಮಗೆ ಕರ್ನಾಟಕ ಹೈಕೋರ್ಟ್ ಮಾಹಿತಿ..!

ಧಾರವಾಡ : ಭಾರತದ ಸರ್ವೋಚ್ಛ ನ್ಯಾಯಾಲಯ ಸೇರಿದಂತೆ ರಾಜ್ಯ ಉಚ್ಛನ್ಯಾಯಾಲಯ, ವಿಭಾಗೀಯ ಪೀಠ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಜರುಗುವ ಕಾರ್ಯಕಲಾಪಗಳ ಕುರಿತು ಮಾಹಿತಿ ಪಡೆಯುವ ಹಾಗೂ ಅಗತ್ಯವಿದ್ದಲ್ಲಿ ಟೆಲಿಗ್ರಾಂ ಚಾನೆಲ್ ಮೂಲಕ ಕಲಾಪಗಳಲ್ಲಿ ಭಾಗವಹಿಸುವ ಅವಕಾಶವನ್ನು ನ್ಯಾಯವಾದಿಗಳಿಗೆ ಕಲ್ಪಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹೇಳಿದರು.

ಅವರು ಇತ್ತೀಚಿಗೆ ಧಾರವಾಡ ಹೈಕೋರ್ಟ್ ಪೀಠದ ವಕೀಲರ ಸಂಘವು ಹೈಕೋರ್ಟ್ (Karnataka High Court) ಲೋಕಾರ್ಪಣೆ ಮಾಡಿರುವ ಹೊಸ ವೆಬ್‍ಸೈಟ್, ತಂತ್ರಾಂಶಗಳು ಮತ್ತು ವಕೀಲರ ಡೈರೆಕ್ಟರಿಯಲ್ಲಿ ನೋಂದಣಿ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಟೆಲಿಗ್ರಾಂ ಚಾನಲ್ ಮೂಲಕ ಹೈಕೊರ್ಟ್‍ನ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಎಲ್ಲವೂ ಆನ್‍ಲೈನ್ ಆಗಿರುವುದರಿಂದ ಮಾಹಿತಿ ಪಡೆಯಲು ಇದು ಉಪಯೋಗವಾಗುತ್ತದೆ. ಇದು ಪ್ರಜಾಸತ್ತಾತ್ಮಕ ಕಾಲವಾಗಿರುವುದರಿಂದ ನ್ಯಾಯಾಂಗದ ಮಾಹಿತಿ ಬಯಸುವ ಪ್ರತಿಯೊಬ್ಬರಿಗೂ ಉಚಿತವಾಗಿ ಮತ್ತು ಬಯಸಿದ ಮಾಹಿತಿ ಸಿಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ ಬೆಂಗಳೂರಿನಲ್ಲಿ ಈಗಾಗಲೇ ಈ ತಂತ್ರಾಂಶವನ್ನು ಬಳಸಿ ನ್ಯಾಯವಾದಿಗಳು ಹೈಕೋರ್ಟ್ ಕಲಾಪದಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಧಾರವಾಡ ಹೈಕೋರ್ಟ್ ಪೀಠದಲ್ಲಿಯೂ ಈ ಸೌಲಭ್ಯವಿದ್ದು, ವಕೀಲಿ ವೃತ್ತಿ ಮಾಡುವ ಪ್ರತಿಯೊಬ್ಬ ನ್ಯಾಯವಾದಿಯು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಅವರು ಹೇಳಿದರು.

ಇದನ್ನೂ ಓದಿ : By-election: ಸಿಂದಗಿ, ಹಾನಗಲ್ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ

ನ್ಯಾಯಮೂರ್ತಿಗಳಾದ ಜುನೀಲ್ ದತ್ತ ಯಾದವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ನ್ಯಾಯಮೂರ್ತಿಗಳಾದ ಎನ್.ಎಸ್. ಸಂಜಯಗೌಡ, ಜ್ಯೋತಿ ಮೂಲಿಮನಿ, ಹೇಮಂತ ಚಂದನಗೌಡರ, ರವಿ ಹೊಸಮನಿ, ಶಿವಶಂಕರ ಅಮರನವರ, ಎಂ.ಜಿ. ಉಮಾ, ಜೆ.ಎಂ. ಖಾಜಿ ಉಪಸ್ಥಿತರಿದ್ದರು.ಹೈಕೊರ್ಟ್ ವಕೀಲರ ಸಂಘದ ಕಾರ್ಯದರ್ಶಿ ಸಾಧಿಕ ಗುಡವಾಲಾ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದರು.ನ್ಯಾಯವಾದಿ ನಿರ್ಮಲ ಬಾನೆ ಸ್ವಾಗತಿಸಿದರು. ರಾಜಶೇಖರ ಹಳ್ಳಿ ನಿರೂಪಿಸಿದರು. ದೀಪಿಕಾ ಎಂ. ಹೊಳ್ಳಣ್ಣವರ ವಂದಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

More Stories

Trending News