"ಕರ್ನಾಟಕ ಮಾದರಿ ಈಗ ಇಡೀ ದೇಶದ ರಾಜಕಾರಣದ ದಿಕ್ಕನ್ನೇ ಬದಲಾಯಿಸಲಿದೆ"

ಕರ್ನಾಟಕ ಮಾದರಿ ಈಗ ಇಡೀ ದೇಶದ ರಾಜಕಾರಣದ ದಿಕ್ಕನ್ನೇ ಬದಲಾಯಿಸಲಿದೆ. ಎಲ್ಲಾ ಗ್ಯಾರಂಟಿ ಯೋಜನೆಗಳು ನಮ್ಮ ಕಾಂಗ್ರೆಸ್ ಸರ್ಕಾರದ್ದಲ್ಲ ಬದಲಾಗಿ ನಿಮ್ಮ ಯೋಜನೆಗಳು ಇವು, ನಿಮಗಾಗಿ ಮಾಡಿದ ಯೋಜನೆಗಳು ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಅವರು ಮೈಸೂರಿನಲ್ಲಿ ನಡೆದ ಗೃಹಲಕ್ಷ್ಮೀ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

Written by - Manjunath N | Last Updated : Aug 30, 2023, 04:49 PM IST
  • ಕರ್ನಾಟಕ ಸರ್ಕಾರ ಯಶಸ್ವಿ 100 ದಿನಗಳನ್ನು ಸಾಕಷ್ಟು ಕೊಡುಗೆಗಳನ್ನು ನೀಡಿದಿ ಇದಕ್ಕೆ ನಿಮಗೆಲ್ಲಾ ಕೃತಜ್ಞತೆ ಸಲ್ಲಿಸುತ್ತೇನೆ
  • ಮೋದಿ ಸರ್ಕಾರ ಕೇವಲ ಬಂಡವಾಳಶಾಹಿಗಳ, ಕೋಟ್ಯಾಧಿಪತಿಗಳ ಪರವಾಗಿ ಕೆಲಸ ಮಾಡುತ್ತಿದೆ
  • ಮೋದಿಯವರ ಇಬ್ಬರು - ಮೂರು ಜನ ಗೆಳೆಯರಿಗೆ ಮಾತ್ರ ಸರ್ಕಾರ ಲಾಭ ಮಾಡಿಕೊಡುತ್ತಿದೆ
 "ಕರ್ನಾಟಕ ಮಾದರಿ ಈಗ ಇಡೀ ದೇಶದ ರಾಜಕಾರಣದ ದಿಕ್ಕನ್ನೇ ಬದಲಾಯಿಸಲಿದೆ" title=

ಮೈಸೂರು: ಕರ್ನಾಟಕ ಮಾದರಿ ಈಗ ಇಡೀ ದೇಶದ ರಾಜಕಾರಣದ ದಿಕ್ಕನ್ನೇ ಬದಲಾಯಿಸಲಿದೆ. ಎಲ್ಲಾ ಗ್ಯಾರಂಟಿ ಯೋಜನೆಗಳು ನಮ್ಮ ಕಾಂಗ್ರೆಸ್ ಸರ್ಕಾರದ್ದಲ್ಲ ಬದಲಾಗಿ ನಿಮ್ಮ ಯೋಜನೆಗಳು ಇವು, ನಿಮಗಾಗಿ ಮಾಡಿದ ಯೋಜನೆಗಳು ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಅವರು ಮೈಸೂರಿನಲ್ಲಿ ನಡೆದ ಗೃಹಲಕ್ಷ್ಮೀ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಇದನ್ನೂ ಓದಿ : ಡಿಎ ಹೆಚ್ಚಳಕ್ಕೂ ಹೊಸ ಫಾರ್ಮುಲಾ! ಸರ್ಕಾರಿ ಉದ್ಯೋಗಿಗಳಿಗೆ ಬಂಪರ್ ಸುದ್ದಿ!

ವಿಧಾನಸಭಾ ಚುನಾವಣೆಗು ಮುಂಚಿತವಾಗಿ ನಾವು ನಿಮಗೆ 5 ಗ್ಯಾರಂಟಿಗಳ ಭರವಸೆ ನೀಡಿದ್ದೆವು. ನಮಗೆ ಭರವಸೆ ಇತ್ತು ನಾವು ನುಡಿದಂತೆ ನಡೆಯುತ್ತೇವೆ ಎಂದು ಅದರಂತೆ ನಡೆದುಕೊಂಡಿದ್ದೇವೆ. ರಕ್ಷಾ ಬಂಧನದ ದಿನ ಮಹಿಳೆಯರಿಗೆ, ಅಕ್ಕ- ತಂಗಿಯರಿಗೆ ಮರೆಯಲಾರದ ಕೊಡುಗೆ ‌ನೀಡಿದ್ದೇವೆ ಎಂದು ಹೇಳಿದರು.

ಇಂದು ಬಟನ್ ಒತ್ತುವುದರ ಮೂಲಕ ಎಲ್ಲಾ ತಾಯಂದಿರ- ಹೆಣ್ಣು ಮಕ್ಕಳ ಖಾತೆಗೆ 2 ಸಾವಿರ ಹಣ ಬಂದಿದೆ. ಇದು ಕೇವಲ ಈ ತಿಂಗಳು ಮಾತ್ರವಲ್ಲ ನಮ್ಮ ಸರ್ಕಾರ ಇರುವ ತನಕವೂ ಬರುತ್ತದೆ. ಒಂದು ಯೋಜನೆಯನ್ನು ಬಿಟ್ಟು ಮಿಕ್ಕ ನಾಲ್ಕು ಗ್ಯಾರಂಟಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಇರುವಂತಹ ಯೋಜನೆಗಳು ಇವು. ಎಂತಹ ದೊಡ್ಡ ಮರವಿದ್ದರು ಅದಕ್ಕೆ ಬೇರುಗಳು ಗಟ್ಟಿಯಾಗಿರಬೇಕು. ಆಗ ಎಂತಹ ಚಂಡಮಾರುತ ಬಂದರೂ ಗಟ್ಟಿಯಾಗಿ ಅದನ್ನು ಎದುರಿಸಬಹುದು. ಅದಕ್ಕೆ ಈ ದೇಶದ ಬುನಾದಿ ಹೆಣ್ಣು ಮಕ್ಕಳು. ಆದ ಕಾರಣ ಅವರನ್ನು ನಾವು ಆರ್ಥಿಕವಾಗಿ ಗಟ್ಟಿಮಾಡುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಗ್ಯಾಸ್ ಸಿಲಿಂಡರ್, ಆಹಾರ ಧಾನ್ಯಗಳು ಸೇರಿದಂತೆ ನೂರಾರು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಬಿಸಿ ನೇರವಾಗಿ ತಟ್ಟುತ್ತದೆ. ಭಾರತ್ ಜೋಡೊ ಮಾಡುವಾಗ ಸಾವಿರಾರು ಜನ ಮಹಿಳೆಯರ ಜೊತೆ ಮಾತನಾಡುವ ಅವಕಾಶ ನನ್ನದಾಯಿತು. ಆಗ ಹೆಚ್ಚಿನ ಜನ ಹೇಳಿದ್ದು ಬೆಲೆ ಏರಿಕೆಯಿಂದ ನಾವು ತತ್ತಿರಿಸಿ ಹೋಗಿದ್ದೇವೆ, ಏನಾದರೂ ಸಹಾಯ ಮಾಡಿ ಎಂದು ಕೇಳಿದ್ದರು ಎಂದು ಹೇಳಿದರು.

ಇದನ್ನೂ ಓದಿ : ಗ್ಯಾಸ್‌ ಸಿಲಿಂಡರ್ ದರ ಇಳಿಕೆ : ಜಿಲ್ಲಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ನನಗೆ ಆಗ ಹೊಳೆಯಿತು ಕರ್ನಾಟಕದ ಹೆಣ್ಣು ಮಕ್ಕಳೇ ನಮಗೆ ಭದ್ರವಾದ ಅಡಿಪಾಯದು. ಅವರು ಕೊಟ್ಟ ಮಾತನ್ನು ಮರೆಯಲಿಲ್ಲ ಬದಲಾಗಿ ಈಗ ಗ್ಯಾರಂಟಿಗಳ ಪರವಾಗಿ ನಿಂತು ಗೆಲ್ಲಿಸಿದ್ದಾರೆ.  ಮರದ ಬೇರು ಕಣ್ಣಿಗೆ ಕಾಣುವುದಿಲ್ಲ ಆದರಂತೆ ನಮ್ಮ ಮಹಿಳೆಯರ ಶ್ರಮ ಯಾರಿಗೂ ಕಾಣುವುದಿಲ್ಲ‌. ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದ್ದಕ್ಕೆ ನಮ್ಮ ಮಹಿಳೆಯರ ಪಾತ್ರವೇ ಪ್ರಧಾನ ಎಂದರು.

ಕರ್ನಾಟಕ ಸರ್ಕಾರ ಯಶಸ್ವಿ 100 ದಿನಗಳನ್ನು ಸಾಕಷ್ಟು ಕೊಡುಗೆಗಳನ್ನು ನೀಡಿದಿ ಇದಕ್ಕೆ ನಿಮಗೆಲ್ಲಾ ಕೃತಜ್ಞತೆ ಸಲ್ಲಿಸುತ್ತೇನೆ. ಮೋದಿ ಸರ್ಕಾರ ಕೇವಲ ಬಂಡವಾಳಶಾಹಿಗಳ, ಕೋಟ್ಯಾಧಿಪತಿಗಳ ಪರವಾಗಿ ಕೆಲಸ ಮಾಡುತ್ತಿದೆ. ಮೋದಿಯವರ ಇಬ್ಬರು - ಮೂರು ಜನ ಗೆಳೆಯರಿಗೆ ಮಾತ್ರ ಸರ್ಕಾರ ಲಾಭ ಮಾಡಿಕೊಡುತ್ತಿದೆ. ನಾವು ಎಂದಿಗೂ ಬಡವರಪರ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.

ನಮ್ಮ ಗ್ಯಾರಂಟಿ ಯೋಜನೆಗಳನ್ನು ಕೇಂದ್ರ ಸರ್ಕಾರ ಲೇವಡಿ ಮಾಡಿತು, ಆದರೆ ಈಗ ನಕಲು‌ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿಗಳು ಮಾತನಾಡುತ್ತಾ "ಕಾಂಗ್ರೆಸ್ ಪಕ್ಷ ಸುಳ್ಳು ಹೇಳುತ್ತಿದೆ ಎಂದರು, ಆದರೆ ನಿಜ ಇಂದು ನಿಮ್ಮ ಮುಂದೆ ಕಾಣುತ್ತಿದೆ. ಭಾರತ ದೇಶದ ಅತಿದೊಡ್ಡ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ  ಆಗುವ ಯೋಜನೆ ಇದಾಗಿದ್ದು, 1.9 ಕೋಟಿ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ.

ಶಕ್ತಿ ಯೋಜನೆ ಮೂಲಕ ಇಡೀ ಕರ್ನಾಟಕ ಪ್ರವಾಸ ಮಾಡುತ್ತಿದ್ದಾರೆ, ಅನ್ನ ಭಾಗ್ಯದ ಮೂಲಕ ಮೂರು ಹೊತ್ತು ಊಟ ಮಾಡುತ್ತಿದ್ದಾರೆ, ಉಚಿತ ವಿದ್ಯುತ್‌ನಿಂದ ಉಳಿದ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿದ್ದಾರೆ. ಇವುಗಳು ಕ್ರಾಂತಿಕಾರಕ ಬದಲಾವಣೆಗಳು ಎಂದು ವಿವರಿಸಿದರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News