ಹುಬ್ಬಳ್ಳಿ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ಹುಬ್ಬಳ್ಳಿ-ಧಾರವಾಡದ ರೈತರೊಂದಿಗೆ ಸಂವಾದ ನಡೆಸಿದರು ಮತ್ತು ಈ ಕೊರೋನಾ ಕಾಲದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕಷ್ಟಗಳನ್ನು ಕೇಳಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತಂದಿದ ಮಾತನಾಡಿದ ಡಿಕೆ ಶಿವಕುಮಾರ್(DK Shivakumar), ಈ ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ರೈತರು ಪ್ರತಿ ಸಣ್ಣ ವಿಷಯಕ್ಕೂ ಹೆಣಗಾಡುತ್ತಿದ್ದಾರೆ. ತಾವು ಬೆಳೆದ ತರಕಾರಿ, ಹಣ್ಣುಗಳು ಮತ್ತು ಇತರ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬೆಳಿಗ್ಗೆ 6-8 ಗಂಟೆಯ ನಡುವೆ ಕೇವಲ ಎರಡು ಗಂಟೆಗಳ ಸಮಯ ಇರುವುದರಿಂದ ಕೊಳೆಯುತ್ತಿವೆ ಎಂದರು.
ಇದನ್ನೂ ಓದಿ : Farmers Crop Loans : ರೈತರಿಗೊಂದು ಸಿಹಿ ಸುದ್ದಿ : ರೈತರ ಬೆಳೆ ಸಾಲಕ್ಕಾಗಿ ₹ 20,810 ಕೋಟಿ ಮೀಸಲು!
ಕರ್ನಾಟಕದ ಮೆಣಸಿನಕಾಯಿ(Red Chilli) ದೇಶದ ಅತ್ಯುತ್ತಮವಾದದ್ದು. ಆದರೆ ನಮ್ಮ ರೈತರು ಅದನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ಕೃಷಿ ಉತ್ಪನ್ನಗಳನ್ನು ರಾಜ್ಯದಾದ್ಯಂತ ಖರೀದಿಸುವ ಮೂಲಕ ರೈತರಿಗೆ ಸಹಾಯ ಮಾಡಿದರು ಮತ್ತು ಅವರಿಗೆ ಆರ್ಥಿಕವಾಗಿ ಸಹಕರಿಸಿದರು ಎಂದು ಹೇಳಿದ್ದಾರೆ.
Our Anganwadi & ASHA workers in Keri Oni Unkal are at the helm of the battle against Covid-19, braving all odds to do their duty & they deserve better facilities from Govt.
I interacted with them about their line of work& distributed sarees as token of my respect.#CongressCares pic.twitter.com/56CyEWuxvl
— DK Shivakumar (@DKShivakumar) May 31, 2021
ಇದನ್ನೂ ಓದಿ : Lockdown Extended : ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆ!
ಸರ್ಕಾರವು ಮದ್ಯ ಮಾರಾಟ(Liquor Sales)ಗಾರರಿಗೆ ಸಂಜೆಯವರೆಗೆ ಅನುಮತಿ ನೀಡುತ್ತಿದೆ. ಆದ್ರೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿಗೆ ಸಮಯವನ್ನು ನೀಡುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ : Laxman Savadi : 'ಟೂರಿಸ್ಟ್ ವಾಹನ ಮಾಲೀಕ'ರಿಗೆ ಗುಡ್ ನ್ಯೂಸ್..!
ನಗರದ ಕೇರಿ ಒನಿ ಉಂಕಲ್‌ನಲ್ಲಿರುವ ಆಶಾ ಕಾರ್ಯಕರ್ತರನ್ನು(Asha Workers) ಭೇಟಿಯಾದರು. ಅವರಿಗೆ ಅನುಕೂಲ ಮಾಡಿಕೊಟ್ಟರು.ಇದಲ್ಲದೆ ಅವರು ಮನೆಯಿಲ್ಲದವರು, ಸ್ಥಳಾಂತರಗೊಂಡ ಕಲಾವಿದರು, ಚಾಲಕರು, ದೇವಾಲಯದ ಸಿಬ್ಬಂದಿ ಮತ್ತು ಸಣ್ಣ ಸಮಯದ ಆಹಾರ ಸೇವಕರೊಂದಿಗೆ ಸಂವಹನ ನಡೆಸಿದರು. ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಲಾಕ್‌ಡೌನ್ ಬಗ್ಗೆ ಅವರ ಕಳವಳವನ್ನು ಕೇಳಿದರು ಮತ್ತು ಪಡಿತರ ಕಿಟ್‌ಗಳನ್ನು ವಿತರಿಸಿದರು, ಸಾಧ್ಯವಿರುವ ಎಲ್ಲ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : Heavy Rainfall in Karnataka : ಜೂ. 3ಕ್ಕೆ ಮುಂಗಾರು ಪ್ರವೇಶ; ನಾಳೆಯಿಂದ ರಾಜ್ಯದಲ್ಲಿ ಭಾರೀ ಮಳೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ