ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹಾ ಸುಳ್ಳುಗಾರ. ದೇಶದಲ್ಲಿ ಹಿಟ್ ಅಂಡ್ ರನ್ ಹೇಳಿಕೆ ನೀಡುವ ಮುಖಂಡರಲ್ಲಿ ಕುಮಾರಸ್ವಾಮಿ ಮೊದಲಿಗರು. ಇದು ರಾಜ್ಯದ ದುರಂತ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ರಮೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ. ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಿಷ್ಟು...
ಕಳೆದ ಹತ್ತು ವರ್ಷಗಳಿಂದ ಕುಮಾರಸ್ವಾಮಿ ಅವರು ಕೇವಲ ಆರೋಪ ಮಾಡುತ್ತಿದ್ದಾರೆ ಹೊರತು ಒಂದು ಆರೋಪವನ್ನು ಸಾಬೀತು ಮಾಡಿಲ್ಲ. ವರ್ಗಾವಣೆ ಕುರಿತು ಒಂದು ಪೆನ್ ಡ್ರೈವ್ ತೋರಿಸಿದ್ದಾರೆ. ಚೆಸ್ಕಾಂ ಹಾಗೂ ಮೆಸ್ಕಾಂ ಹುದ್ದೆಗಳಿಗೆ ಹತ್ತು ಕೋಟಿ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಯುಸಿಸಿಗೆ ಮುಸ್ಲಿಂ ಬೋರ್ಡ್ ವಿರೋಧ : ಧಾರ್ಮಿಕ ಮೂಲಭೂತ ಹಕ್ಕು ಪ್ರಜಾಪ್ರಭುತ್ವದ ಭಾಗ - AIMPLB
ಚೆಸ್ಕಾಂ ಹಾಗೂ ಮೆಸ್ಕಾಂ ನಾಲ್ಕೈದು ಜಿಲ್ಲೆಗಳನ್ನು ಒಳಗೊಂಡಂತಹ ಕಂಪನಿಯಾಗಿದೆ. ಇದರಲ್ಲಿ 10 ಕೋಟಿ ಕೊಟ್ಟು ಹುದ್ದೆ ತರೀತಿಯಾಗುವ ಪರಿಸ್ಥಿತಿ ಇದೆಯಾ? ಅದು ಯಾವ ಹುದ್ದೆ? ಯಾರಿಗೆ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿ. ಆ ಬಗ್ಗೆ ದಾಖಲೆ ನೀಡಲಿ.ಒಂದು ದಿನಕ್ಕೆ 50 ಲಕ್ಷ ಸಂಪಾದನೆ ಆಗುವಂತಹ ಹುದ್ದೆ ಎಂದು ಹೇಳುತ್ತಾರೆ. ಅಂತಹ ಹುದ್ದೆ ಯಾವುದಾದರೂ ಇದೆಯಾ? ಇಡೀ ಮೆಸ್ಕಾಂ ಸಂಸ್ಥೆಯ ಒಂದು ದಿನಕ್ಕೆ 50 ಲಕ್ಷ ವಹಿವಾಟು ಆಗುವುದಿಲ್ಲ.
ಕುಮಾರಸ್ವಾಮಿಯವರ ಗುರಿ ಬೇರೆ ಇತ್ತು. ಅವರು ಬಹಳ ಕನಸು ಕಂಡಿದ್ದರು. 35 ರಿಂದ 40 ಸೀಟು ಗೆದ್ದು ಮೂರನೇ ಬಾರಿ ಮುಖ್ಯಮಂತ್ರಿ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ರಾಜ್ಯದ ಯಾವುದೇ ಭಾಗದ ಜನರು ನಿಮ್ಮನ್ನು ನಂಬುತ್ತಿಲ್ಲ.ಒಕ್ಕಲಿಗರ ಪಕ್ಷ ಎಂದು ಕರೆಸಿಕೊಂಡು ಮಂಡ್ಯದಲ್ಲಿ ಕೇವಲ ಒಂದೇ ಒಂದು ಕ್ಷೇತ್ರ ಮಾತ್ರ ಗೆದ್ದಿದ್ದಾರೆ. ಮೈಸೂರಿನಲ್ಲಿ ಜಿ ಟಿ ದೇವೇಗೌಡರು ಹಾಗೂ ಅವರ ಪುತ್ರನಿಗೆ ಟಿಕೆಟ್ ನೀಡದಿದ್ದರೆ ಮೈಸೂರಿನಲ್ಲಿ ಅವರ ಸಾಧನೆ ಶೂನ್ಯವಾಗುತ್ತಿತ್ತು.
ಕೇವಲ 19 ಸೀಟು ಪಡೆದಿರುವುದು ಹಾಗೂ ತಮ್ಮ ಮಗನ ಸೋಲಿನಿಂದ ತೀವ್ರ ಹತಾಶರಾಗಿದ್ದಾರೆ. ಹೀಗಾಗಿ ಬಿಜೆಪಿಯವರಿಂದ ಸುಪಾರಿ ಪಡೆದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ.ನನ್ನ ಬಳಿ ಬಿಜೆಪಿ ಹಾಗೂ ಕುಮಾರಸ್ವಾಮಿಯವರ ಕರ್ಮಕಾಂಡಗಳ ಕುರಿತು ಒಂದು ಪೆನ್ ಡ್ರೈವಿದೆ. ಕುಮಾರಸ್ವಾಮಿಯವರು ತಮ್ಮ ಪೆನ್ ಡ್ರೈವ್ ಮಾಹಿತಿ ಬಹಿರಂಗಪಡಿಸಿದ ಒಂದು ತಾಸಿನಲ್ಲಿ ನಾನು ಕೂಡ ಈ ಪೆನ್ ಡ್ರೈವ್ ಮಾಹಿತಿಯನ್ನು ಬಹಿರಂಗಪಡಿಸುತ್ತೇನೆ. ಇದು ಕುಮಾರಸ್ವಾಮಿ ಅವರಿಗೆ ನನ್ನ ಸವಾಲು.
ಕುಮಾರಸ್ವಾಮಿ ಅವರು 14 ತಿಂಗಳ ಕಾಲ ಪಂಚತಾರಾ ಹೋಟೆಲ್ ನಲ್ಲಿ ಇದ್ದುಕೊಂಡು ಮಾಡಿರುವ ಕರ್ಮಕಾಂಡಗಳ ಬಗ್ಗೆ ಈ ಪೆನ್ ಡ್ರೈವ್ ನಲ್ಲಿ ಮಾಹಿತಿ ಇದೆ.ಒಕ್ಕಲಿಗ ಸಮುದಾಯದಲ್ಲಿ ಡಿಕೆ ಶಿವಕುಮಾರ್ ಅವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಕುಮಾರಸ್ವಾಮಿಯವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರ ವಿರುದ್ಧ ಬಾಯಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: ಎರಡು ತಿಂಗಳ ಹಿಂಸಾಚಾರದ ನಂತರ ಮಣಿಪುರದಲ್ಲಿ ಸರ್ಕಾರಿ ಶಾಲೆಗಳು ಪುನರಾರಂಭ
ಈ ಆರೋಪಗಳ ಬಗ್ಗೆ ನಿಮ್ಮ ಬಳಿ ಏನಾದರೂ ದಾಖಲೆ ಇದೆಯಾ? ದಾಖಲೆ ಇದ್ದರೆ ಕೊಡಿ.ನೀವು ಮಾಡುವ ಆರೋಪ ನೀಡುವ ಹೇಳಿಕೆಗಳೆಲ್ಲವೂ ಸುಳ್ಳು ಎಂದು ಜನರಿಗೆ ಅರ್ಥವಾಗಿದೆ. ನಿಮ್ಮ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಮುಂದಿನ ಯಾವುದೇ ಚುನಾವಣೆಗಳನ್ನು ಗೆಲ್ಲುವುದಿಲ್ಲ.ಪಂಚರತ್ನ ಯೋಜನೆ ಎಂದು ಹೇಳಿ ರಾಜ್ಯದಂತ ಮಿಷನ್ 123 ಮಾಡಿದ್ದೀರಿ ಏನಾಯ್ತು ನಿಮ್ಮ ಪ್ರಯತ್ನ?
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಕಳೆದ ಮೂರು ದಿನಗಳಿಂದ ವಿಧಾನಸಭೆಯಲ್ಲಿ ಅವರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಡಿಶನ್ ನಡೆಸುತ್ತಿದ್ದಾರೆ.ಬಿಜೆಪಿ ಪಕ್ಷದ ನಾಯಕರು, ಗ್ಯಾರಂಟಿ ಯೋಜನೆಗಳ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಾ ವಿರೋಧ ಪಕ್ಷದ ನಾಯಕ ಸ್ಥಾನದ ರೇಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಬಿಜೆಪಿ ನಾಯಕರಿಗೆ ಇದೆ.
ಗ್ಯಾರಂಟಿ ಯೋಜನೆ ನೀಡುವುದು ನಮ್ಮ ಬದ್ಧತೆ. ಅಲ್ಲಿ ಮಧ್ಯಪ್ರದೇಶದಲ್ಲಿ ಮೋದಿಯವರು ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ನೀವು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಎಂದು ಹೋರಾಟ ಮಾಡುತ್ತಿದ್ದೀರಿ. ಈ ಬಗ್ಗೆ ಬಿಜೆಪಿ ಪಕ್ಷದ ಸ್ಪಷ್ಟ ನಿಲುವೇನು?
ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರು ಯೋಜನೆಗಳು ಜಾರಿಗೆ ಬಂದಿವೆ. ಶಕ್ತಿ ಯೋಜನೆ ಮೂಲಕ ಸಾರಿಗೆ ಸಂಸ್ಥೆಗಳ ಬಲ ಹೆಚ್ಚಿದೆ. ಯೋಚನೆ ಚಾರಿಗೂ ಮುನ್ನ ನಾಲ್ಕು ಸಾರಿಗೆ ಸಂಸ್ಥೆಗಳ ಪ್ರತಿನಿತ್ಯದ ಸರಾಸರಿ ₹ 24.48 ಕೋಟಿ ಹಣ ಸಂಗ್ರಹವಾಗುತ್ತಿತ್ತು. ಶಕ್ತಿ ಯೋಚನೆ ಜಾರಿ ನಂತರ ಪ್ರತಿನಿತ್ಯ ₹28.89 ಕೋಟಿ. ಅಂದರೆ ಪ್ರತಿನಿತ್ಯ ₹4.41 ಕೋಟಿ ಹೆಚ್ಚಿಗೆ ಸಂಗ್ರಹವಾಗುತ್ತಿದೆ.
ಕಳೆದ 25 ದಿನಗಳಲ್ಲಿ ಎಲ್ಲಾ ಸಾರಿಗೆ ಸಂಸ್ಥೆಯಿಂದ ₹722.25 ಕೋಟಿ. ಯೋಚನೆ ಜಾರಿಗೂ ಮುನ್ನ 25 ದಿನಗಳಲ್ಲಿ 612 ಕೋಟಿ ಮಾತ್ರ ಸಂಗ್ರಹವಾಗುತ್ತಿತ್ತು. ಇನ್ನು ಉಚಿತವಾಗಿ ನೀಡಿರುವ ಟಿಕೆಟ್ ಗಳಿಗೆ ಸರ್ಕಾರದಿಂದ ಪಾವತಿಸಬೇಕಾದ ಹಣ ₹310 ಕೋಟಿ. ಅದರಲ್ಲಿ ಸರ್ಕಾರ 190 ಕೋಟಿ ಪಾವತಿಸಲಿದೆ.ಶಕ್ತಿಯೋಜನೆ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಲಾಭದಾಯಕವಾಗಿದೆ.
ಮಹಿಳೆಯರ ಪ್ರಗತಿಗೆ ಉತ್ತಮ ಯೋಜನೆ ನೀಡಿದರೆ ಅದನ್ನು ನೀವು ಖಂಡಿಸುತ್ತೀರಿ. ಇನ್ನು ಅನ್ನ ಭಾಗ್ಯದಲ್ಲಿ ನೀಡಬೇಕಾಗಿ ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿದೆ.ಅವರಿಗೆ ಯೋಗ್ಯತೆ ಇದ್ದರೆ ಗೌತಮಿನಲ್ಲಿ ದಾಸ್ತಾನೆ ಇರುವ 8 ಲಕ್ಷ ಟನ್ ಅಕ್ಕಿಯಲ್ಲಿ 1.66 ಲಕ್ಷ ಅಕ್ಕಿಯನ್ನು ನೀಡಲಿ. ಅದಕ್ಕೆ ನೀಡಬೇಕಾದ ಮೊತ್ತವನ್ನು ನಾವು ನೀಡುತ್ತೇವೆ. ಎಥೆನಾಲ್ ಹಾಗೂ ಮಧ್ಯ ತಯಾರಿಸಲು ನೀವು ಅಕ್ಕಿ ಪೂರೈಸುತ್ತಿದ್ದೀರಿ ಆದರೆ ಬಡವರ ಹೊಟ್ಟೆ ತುಂಬಿಸಲು ಅಕ್ಕಿ ನೀಡಲು ನಿರಾಕರಿಸುತ್ತಿದ್ದೀರಿ.
ಇದನ್ನೂ ಓದಿ: ಯುಸಿಸಿಗೆ ಮುಸ್ಲಿಂ ಬೋರ್ಡ್ ವಿರೋಧ : ಧಾರ್ಮಿಕ ಮೂಲಭೂತ ಹಕ್ಕು ಪ್ರಜಾಪ್ರಭುತ್ವದ ಭಾಗ - AIMPLB
ಬಿಜೆಪಿಯಲ್ಲಿ ಮನೆಯೊಂದು 20 ಬಾಗಿಲು ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯವರು ರೇಣುಕಾಚಾರ್ಯ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಸಾಕು. ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಸೂರ್ಯನ ಯಾವತ್ತು ಇಷ್ಟು ಹೊತ್ತಿಗೆ ಯಾರಾದರೂ ಒಬ್ಬರು ರಾಜೀನಾಮೆ ನೀಡಬೇಕಿತ್ತು.
ರಾಜ್ಯದಲ್ಲಿ 7 ಲಕ್ಷ ಸರ್ಕಾರಿ ಸಿಬ್ಬಂದಿಗಳಿದ್ದು ಇದುವರೆಗೂ ಶೇಕಡ ಎರಡರಷ್ಟು ಕೂಡ ನಾವು ವರ್ಗಾವಣೆ ಮಾಡಿಲ್ಲ. ಯತಿನ್ ರವರ ಹೆಸರನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ಅವರ ಹಸ್ತಕ್ಷೇತ್ರ ಇರುವ ಯಾವುದಾದರು ಒಂದು ಉದಾರಣೆಯನ್ನು ನೀಡಿ.ನಾನು ಮೈಸೂರಿನಲ್ಲಿ ಎಂಟು ಜನರ ವರ್ಗಾವಣೆ ಮಾಡಿಸಿದ್ದು ಯಾರಾದರೂ ಒಬ್ಬರು ಬಳಿ ಅರ್ಧ ಲೋಟ ಪಡೆದಿದ್ದರೆ ಉದಾರಣೆ ನೀಡಿ.
ಬೆಂಗಳೂರು ಮೈಸೂರು ದಶಕ ಹೆದ್ದಾರಿಯಲ್ಲಿ ಕಳೆದ 9 ತಿಂಗಳಲ್ಲಿ 400 ಹೆಚ್ಚು ಅಪಘಾತಗಳು ಸಂಭವಿಸಿವೆ. ದೇಶ ಯಾವುದೇ ಹೆದ್ದಾರಿಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಅಪಘಾತಗಳು ಸಂಭವಿಸಿಲ್ಲ. ಇದುವರೆಗೂ 189 ಮಂದಿ ಅಪಘಾತದಲ್ಲಿ ಮತಪಟ್ಟಿದ್ದು, ಇದಕ್ಕೆ ಪ್ರಮುಖ ಕಾರಣ ಅವೈಜ್ಞಾನಿಕ ಫ್ಲೈ ಓವರ್ ನಿರ್ಮಾಣ.
ಬೆಂಗಳೂರಿನಿಂದ ಮೈಸೂರು ತಲುಪಲು ಒಂದು ಗಂಟೆ 10 ನಿಮಿಷ ಸಾಕು ಎಂದು ನೀವೇ ಹೇಳುತ್ತೀರಿ. ಆ ಮೂಲಕ ವಾಹನಸಾಗರ ನೂರರಿಂದ ನೂರ ಹತ್ತು ಕಿಲೋಮೀಟರ್ ವೇಗದಲ್ಲಿ ಸಾಗಲು ನೀವೇ ಉತ್ತೇಜನ ನೀಡುತ್ತೀರಿ. ಈಗ ನೀವೇ ವೇಗ ಕಡಿಮೆ ಮಾಡಬೇಕು ಎಂದು ಹೇಳುತ್ತಿದ್ದೀರಿ. ಜನ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಸಾಗುವುದಾದರೆ ಎಕ್ಸ್ಪ್ರೆಸ್ ಹೆದ್ದಾರಿ ಎಂಬ ಹೆಸರಿನಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದೇಕೆ?
ದೇಶದ 7 ಎಕ್ಸ್ಪ್ರೆಸ್ ಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರದ ಪ್ರಕಾರ ಪ್ರತಿ ಕಿ.ಮೀ ಗೆ ₹1.68 ಟೋಲ್ ಸಂಗ್ರಹಿಸಬೇಕು. ಆದರೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿ ಕಿಲೋ ಮೀಟರ್ ಗೆ ₹2.90 ಸಂಗ್ರಹಿಸಲಾಗುತ್ತಿದೆ.ಹೆದ್ದಾರಿಗೆ 9,900 ಕೋಟಿ ವೆಚ್ಚ ಮಾಡಲಾಗಿದೆ. ಈ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹಿಸಬೇಕು.
ಇತರ ಪ್ರಾಧಿಕಾರದ ಸಮೀಕ್ಷೆ ಪ್ರಕಾರ 2018ರಲ್ಲಿ ಪ್ರತಿನಿತ್ಯ 52,000 ವಾಹನಗಳು, 2023ರಲ್ಲಿ ಪ್ರತಿನಿತ್ಯ ಒಂದು ಲಕ್ಷ ವಾಹನಗಳು ಈ ಹೆದ್ದಾರಿ ಸಂಚಾರ ಮಾಡುತ್ತವೆ. ಈ ಒಂದು ಲಕ್ಷ ವಾಹನಗಳಿಗೆ ಸರಾಸರಿಯಲ್ಲಿ ₹400 ಎಂದು ಟೋಲ್ ಸಂಗ್ರಹಿಸಿದರು. ಪ್ರತಿನಿತ್ಯ 5.50ಕೋಟಿ ಟೋಲ್ ಸಂಗ್ರಹವಾಗುತ್ತದೆ. ಆದರೆ ಟೋಲ್ ಸಂಗ್ರಹಿಸಲು ಬೇರೆಯವರಿಗೆ ಟೆಂಡರ್ ನೀಡಿದ್ದು, ಈ ಟೆಂಡರ್ ಪಡೆದಿರುವ ಸಂಸ್ಥೆಯು ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೇವಲ 69 ಲಕ್ಷ ಮಾತ್ರ ನೀಡುತ್ತದೆ.
ಇದು ಹಗಲು ದರೋಡೆ ಇಲ್ಲದೆ ಮತ್ತೇನು? ಇದರಲ್ಲಿ ಪ್ರತಾಪ್ ಸಿಂಹ ಅವರಿಗೆ ಎಷ್ಟು ಹೋಗುತ್ತಿದೆ? ಇಲ್ಲಿ ಪ್ರತಾಪ್ ಸಿಂಹ ಸರ್ವಿಸ್ ಟ್ಯಾಕ್ಸ್ ಪಾವತಿಸಲಾಗುತ್ತಿದೆಯೇ?ಇನ್ನು ಈ ದಾರಿಯಲ್ಲಿ ಅಂಡರ್ ಪಾಸ್, ಓವರ್ ಪಾಸ್, ಸರ್ವಿಸ್ ರಸ್ತೆಗಳ ನಿರ್ಮಾಣ ಆಗಿಲ್ಲ. ಇದ್ದಾರೆ ವ್ಯಾಪಾರ ಮಾಡುತ್ತಿದ್ದ ಎರಡು ಲಕ್ಷ ಜನರ ಹೊಟ್ಟೆ ಮೇಲೆ ಒಡೆಯಲಾಗಿದೆ. ಅನಿತಾ ಭೂಮಿಯ ಬೆಲೆಯು ಕುಸಿದಿದೆ.
ಇದನ್ನೂ ಓದಿ: ನಾಳೆ ಸಿಎಂ ಸಿದ್ದರಾಮಯ್ಯರಿಂದ ದಾಖಲೆಯ 14ನೇ ಬಜೆಟ್ ಮಂಡನೆ
ಇದ್ದಾರೆ ಅಪಘಾತವಾದರೂ ಪೊಲೀಸರಿಗೆ ಮಾಹಿತಿ ನೀಡಲು ಎಕ್ಸಿನ್ ಪಾಯಿಂಟ್ ಗೆ ತೆರಳಬೇಕು. ತುರ್ತು ಸಂಪರ್ಕ ಸಾಧಿಸಲು ಸಾಧ್ಯವಿಲ್ಲ. ಹೆದ್ದಾರಿಯಲ್ಲಿ ಮಾಡಲಾಗಿದೆ.ಕಾವೇರಿ ನದಿಯ ನಾಲ್ಕು ಅಣೆಕಟ್ಟುಗಳ ಸಂಗ್ರಹಣ ಸಾಮರ್ಥ್ಯ 115 ಟಿಎಂಸಿಯಷ್ಟಿದೆ. ನೀರು ಪಡೆಯಬಹುದಾದ ಒಟ್ಟಾರೆ ನೀರಿನ ಪ್ರಮಾಣ ಏಳು ಟಿಎಂಸಿಯಷ್ಟಿದೆ. ಬೆಂಗಳೂರಿಗೆ ಒಂದು ತಿಂಗಳು ಕುಡಿಯುವ ನೀರು ಪೂರೈಸಲು ಮೂರು ಟಿಎಂಸಿ ನೀರು ಅಗತ್ಯವಿದೆ. ಇತರೆ ಜಿಲ್ಲೆಗಳಿಗೆ ಎರಡುವರೆ ಟಿಎಂಸಿ ನೀರು ಅಗತ್ಯವಿದೆ. ನೀರಾವರಿಗೆ 4 ಟಿಎಂಸಿ, ತಮಿಳುನಾಡಿಗೆ ಜುಲೈ ತಿಂಗಳಲ್ಲಿ ಮೂರು ಟಿಎಂಸಿ ನೀರು ಬಿಡಬೇಕಿದೆ.
ಈ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿಯಂತ್ರಣದಲ್ಲಿ ಈ ನಾಲ್ಕು ಅಣೆಕಟ್ಟುಗಳು ಇರುವುದರಿಂದ ಅವರಿಗೆ ಪತ್ರ ಬರೆಯಲಾಗಿದೆ.
ಕೇಂದ್ರ ಸರ್ಕಾರದ ನಡುವೆ ನೀರು ಹರಿದುಬಿಟ್ಟರೆ ಕೇವಲ 15 ದಿನಗಳಲ್ಲಿ ಸಂಪೂರ್ಣ ನೀರು ಅಂತ್ಯವಾಗಲಿತ್ತು ಬೆಂಗಳೂರಿಗೆ ನೀರಿನ ಸಮಸ್ಯೆ ಹೆಚ್ಚಾಗಲಿದೆ. ಈ ಪರಿಸ್ಥಿತಿ ನಿರ್ಮಾಣವಾದರೆ ಅದಕ್ಕೆ ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಾಗುವುದಿಲ್ಲ. ಹೀಗಾಗಿ ಅಣೆಕಟ್ಟು ತುಂಬುವವರೆಗೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಬಿಜೆಪಿ ನಾಯಕರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.