B.Sriramulu: ಸಿದ್ದುಗೆ ಭರ್ಜರಿ ತಿರುಗೇಟು ನೀಡಿದ ಸಚಿವ ಶ್ರೀರಾಮುಲು

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 'ಡಕೋಟಾ ಬಸ್' ಹೇಳಿಕೆಗೆ ತಿರುಗೇಟು ನೀಡಿದ-ಸಚಿವ ಬಿ. ಶ್ರೀರಾಮುಲು

Last Updated : Feb 7, 2021, 07:00 PM IST
  • ನಮ್ಮ ರಾಜ್ಯ ಸರ್ಕಾರ ಡಕೋಟಾ ಬಸ್ ಅಲ್ಲ. ಶರವೇಗದಲ್ಲಿ ಸಾಗುವ ಜೆಟ್ ವಿಮಾನದಂತೆ
  • ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 'ಡಕೋಟಾ ಬಸ್' ಹೇಳಿಕೆಗೆ ತಿರುಗೇಟು ನೀಡಿದ-ಸಚಿವ ಬಿ. ಶ್ರೀರಾಮುಲು
  • ಸರ್ಕಾರ 'ಟೇಕ್ ಆಫ್' ಅಲ್ಲ ಸಂಪೂರ್ಣ 'ಆಫ್ ಆಗಿ ಕೆಟ್ಟು ನಿಂತಿರುವ ಡಕೋಟ ಬಸ್ ನಂತಾಗಿದೆ ಎಂದು ಬಿಎಎಸ್‌ವೈ ಸರ್ಕಾರ ವಿರುದ್ಧ ಕಿಡಿಕಾರಿದ್ದರು.
B.Sriramulu: ಸಿದ್ದುಗೆ ಭರ್ಜರಿ ತಿರುಗೇಟು ನೀಡಿದ ಸಚಿವ ಶ್ರೀರಾಮುಲು title=

ರಾಯಚೂರು: ನಮ್ಮ ರಾಜ್ಯ ಸರ್ಕಾರ ಡಕೋಟಾ ಬಸ್ ಅಲ್ಲ. ಶರವೇಗದಲ್ಲಿ ಸಾಗುವ ಜೆಟ್ ವಿಮಾನದಂತೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

ಈ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರ 'ಡಕೋಟಾ ಬಸ್' ಹೇಳಿಕೆಗೆ ತಿರುಗೇಟು ನೀಡಿದರು. ಸರ್ಕಾರ 'ಟೇಕ್ ಆಫ್' ಅಲ್ಲ ಸಂಪೂರ್ಣ 'ಆಫ್ ಆಗಿ ಕೆಟ್ಟು ನಿಂತಿರುವ ಡಕೋಟ ಬಸ್ ನಂತಾಗಿದೆ ಎಂದು ಬಿಎಎಸ್‌ವೈ ಸರ್ಕಾರ ವಿರುದ್ಧ ಕಿಡಿಕಾರಿದ್ದರು.

JDS: 'ಪಕ್ಷ ಬಿಡುವ ಗಂಡು ನಾನಲ್ಲ, ಇಲ್ಲೇ ಇದ್ದೀನಿ, ಟಿಕೆಟ್​ ಕೇಳ್ತೀನಿ'

ಇನ್ನು ಈ ಬಗ್ಗೆ ಜಿಲ್ಲೆಯ ಮಸ್ಕಿ ಕ್ಷೇತ್ರದ ವಟಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವೇಗವಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa)ನವರೇ ನಮ್ಮ ಪೈಲಟ್. ಅವರ ಜತೆ ನಾವೆಲ್ಲ ಪ್ರಯಾಣಿಸುತ್ತಿದ್ದೇವೆ.

BJP: ಬಿಎಸ್ ವೈ  ಸಂಪುಟದ ಮತ್ತೋರ್ವ ಸಚಿವರಿಂದ ಖಾತೆ ಬಗ್ಗೆ ಅಸಮಾಧಾನ!

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ನಮ್ಮ ಆದ್ಯತೆ ಎಂದು ಹೇಳಿದರು. ಮಸ್ಕಿ ಕ್ಷೇತ್ರದ ಉಪಚುನಾವಣೆ ಬಳಿಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಎರಡು ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ. ಈ ಬಗ್ಗೆ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದು ಭರವಸೆ ನೀಡಿದರು.

Taluk Panchayat: ರಾಜ್ಯದಲ್ಲಿ ತಾಲೂಕು ಪಂಚಾಯತ್ ರದ್ಧತಿ : ಸಚಿವರಿಂದ ಸ್ಪಷ್ಟನೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News