'ಚುನಾವಣೆ ಶುದ್ಧೀಕರಣವಾದರೇ ಸಾಲದು, ಶೈಕ್ಷಣಿಕ, ಸಾಂಸ್ಕೃತಿಕ ರಂಗವೂ ಶುದ್ಧವಾಗಬೇಕು'

ಕೇವಲ ಚುನಾವಣೆ ಶುದ್ಧೀಕರಣವಾದರೇ ದೇಶ ಸುಧಾರಿಸುವುದಿಲ್ಲ. ಶೈಕ್ಷಣಿಕ,ಸಾಂಸ್ಕೃತಿಕ ರಂಗವೂ ಶುದ್ಧವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಭಿಪ್ರಾಯಪಟ್ಟಿದ್ದಾರೆ.

Written by - RACHAPPA SUTTUR | Last Updated : Mar 30, 2022, 07:15 PM IST
  • ನಮ್ಮ ಪ್ರಜಾಪ್ರಭುತ್ವ ಗಟ್ಟಿಯಾಗಿರುವುದರಿಂದಲೇ ಚುನಾವಣೆ ಸುಧಾರಣೆ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ.
  • ನಾವು ಹತಾಶರಾಗಬೇಕಿಲ್ಲ.ಹಾಗಂತ ಪರ್ಪೆಕ್ಟ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬೇಕಿಲ್ಲ.
'ಚುನಾವಣೆ ಶುದ್ಧೀಕರಣವಾದರೇ ಸಾಲದು, ಶೈಕ್ಷಣಿಕ, ಸಾಂಸ್ಕೃತಿಕ ರಂಗವೂ ಶುದ್ಧವಾಗಬೇಕು' title=
file photo

ಬೆಂಗಳೂರು: ಕೇವಲ ಚುನಾವಣೆ ಶುದ್ಧೀಕರಣವಾದರೇ ದೇಶ ಸುಧಾರಿಸುವುದಿಲ್ಲ. ಶೈಕ್ಷಣಿಕ,ಸಾಂಸ್ಕೃತಿಕ ರಂಗವೂ ಶುದ್ಧವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಭಿಪ್ರಾಯಪಟ್ಟಿದ್ದಾರೆ.

ನಾಗರೀಕ ಸಮಾಜವೂ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ.ಮೊದಲು ನಾಗರಿಕ ಸಮಾಜದ ಬಗ್ಗೆ ಭಯ ಇತ್ತು.ಈಗ  ಆ ಮಟ್ಟ ನಾಗರೀಕ ಸಮಾಜವೂ ಇಲ್ಲ ಎಂದು ಅವರು ಹೇಳಿದರು.ಚುನಾವಣಾ ಸುಧಾರಣೆ ಬಗ್ಗೆ ವಿಧಾನ ಸಭೆಯಲ್ಲಿಂದು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ನಮ್ಮ ದೇಶ ಹಲವು ರೀತಿಯ ಹಿನ್ನೆಲೆ ಮತ್ತು ಇತಿಹಾಸ ಹೊಂದಿದೆ. ತಮಿಳುನಾಡಿನಿಂದ ದೇಶವನ್ನು ನೋಡುವ ದೃಷ್ಠಿಕೋನ ಬೇರೆ ಇದೆ. ಈಶಾನ್ಯ ರಾಜ್ಯಗಳ ದೃಷ್ಠಿಕೋನ ಬೇರೆ ಇದೆ. ಆದರೂ,ಎಲ್ಲರೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಬಂದಿದ್ದೇವೆ.

ನಮ್ಮ ದೇಶದ ಜನರಲ್ಲಿ ಒಂದು ಅಂತರ್ಗತ ಶಕ್ತಿ ಇದೆ.ಬೇರೆ ಬೇರೆ ರಾಷ್ಟ್ರಗಳು ಒಂದೇ ರೀತಿಯ ವ್ಯವಸ್ಥೆ ಇದ್ದರೂ, ಪ್ರಜಾಪ್ರಭುತ್ವ ಬುಡಮೇಲಾಗಿದೆ.ನಮ್ಮ ದೇಶದಲ್ಲಿ ಅಧಿಕಾರ ಹಂಸ್ತಾಂತರ ಅತ್ಯಂತ ಶಾಂತಿಯುತವಾಗಿ ನಡೆಯುತ್ತದೆ. ಅಮೇರಿಕಾದಂತ ದೇಶದಲ್ಲಿ ಅಧಿಕಾರ ಹಸ್ತಾಂತರವಾಲು ಎಷ್ಟು ಕಷ್ಟವಾಯಿತು ಎನ್ನುವುದನ್ನು ನೋಡಿದ್ದೇವೆ.

ಇದನ್ನೂ ಓದಿ: N Mahes : 'ಈ ಹಿಂದೆ ಅರ್ಜುನನಾಗಿದ್ದ ಯಡಿಯೂರಪ್ಪ ಇನ್ಮುಂದೆ ಕೃಷ್ಣರಾಗ್ತಾರೆ'

ನಮ್ಮ ಪ್ರಜಾಪ್ರಭುತ್ವ ಗಟ್ಟಿಯಾಗಿರುವುದರಿಂದಲೇ ಚುನಾವಣೆ ಸುಧಾರಣೆ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ.ನಾವು ಹತಾಶರಾಗಬೇಕಿಲ್ಲ.ಹಾಗಂತ ಪರ್ಪೆಕ್ಟ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬೇಕಿಲ್ಲ. ಚುನಾವಣಾ ಅಕ್ರಮಗಳನ್ನು ತಡೆಯುವ ಪ್ರಯತ್ನ ನಡೆಸಬೇಕು ಎಂದು ಅವರು ಹೇಳಿದರು.

ಕೆಲವು ವ್ಯಕ್ತಿಗಳು ಅಧಿಕಾರಕ್ಕೆ ಬರುವಾಗ ಇರುವ ತತ್ವ ಸಿದ್ದಾಂತ, ಅಧಿಕಾರಕ್ಕೆ ಬಂದ ನಂತರ ಅಧಿಕಾರದಲ್ಲಿ ಉಳಿಯಲು ತಮ್ಮ ತತ್ವ ಸಿದ್ದಾಂತವನ್ನೇ ಬಲಿಕೊಟ್ಟಿರುವ ಉದಾಹರಣೆ ಇವೆ.ಮೊದಲು ಶಾಸಕರಿಗೆ ಬಸ್‍ನಲ್ಲಿ ಪ್ರಯಾಣಿಸಲು ಉಚಿತ ಪಾಸ್‍ ನೀಡಲಾಗುತ್ತಿತ್ತು.ಒಂದೇ ರೂಮಿಯಲ್ಲಿ ಇಬ್ಬರು ಶಾಸಕರು ಇರುತ್ತಿದ್ದರು. ಶಾಸಕರಿಗೆ ಅನಧಿಕೃತ ಸಂಬಳ ನೀಡುವ ವ್ಯವಸ್ಥೆ ಬಂತು.

ಸುಪ್ರೀಂ ಕೋರ್ಟ್‍ನ ಅನೇಕ ಆದೇಶಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ತೀರ್ಪುಗಳನ್ನು ನೀಡಿವೆ. ಈಗ ತಂತ್ರಜ್ಞಾನದಿಂದಾಗಿ ಯುವಕರಿಗೆ ಪ್ರತಿಯೊಂದು ಮಾಹಿತಿ ನೇರವಾಗಿಯೇ ಸಿಗುತ್ತದೆ.ಸರಿಯೋ ತಪ್ಪೊ ಜನರು ಎಲ್ಲದ ಬಗ್ಗೆ ಮಾತನಾಡುವಂತೆ ಇದೆ. ವ್ಯವಸ್ಥೆ ಬದಲಾಗುವ ವಿಶ್ವಾಸ ಇದೆ.

ಇದನ್ನೂ ಓದಿ: ಕಲ್ಲಡ್ಕದ ಭಯೋತ್ಪಾದಕ ಹೇಳಿದ ಹಾಗೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಆಗುತ್ತಿದೆ- ಬಿ ಕೆ ಹರಿಪ್ರಸಾದ್ ವಾಗ್ದಾಳಿ

ಪ್ರತಿಯೊಬ್ಬ ಮತದಾರನಿಗೂ ತನ್ನ ಮತ ಗೆಲ್ಲಬೇಕೆಂಬ ಹಂಬಲ ಇದ್ದೇ ಇರುತ್ತದೆ.ನಾವು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಆತಂಕದಿಂದ ಏನೇನೋ ಮಾಡುತ್ತೇವೆ.ನಮ್ಮದು ಪಕ್ಷ ಆಧಾರಿತ ಪ್ರಜಾಪ್ರಭುತ್ವ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾವೂ ಆಯ್ಕೆಯಾಗಬೇಕು.ಬಹಳ ಜನಪ್ರೀಯ ವ್ಯಕ್ತಿಯೂ ಜನರ ಆಯ್ಕೆಯಾಗುವುದಿಲ್ಲ. ಕೆಲವು ಸಾರಿ ಜನಪ್ರೀಯವಲ್ಲದ ವ್ಯಕ್ತಿಯ ಜನರ ಆಯ್ಕೆಯಾಗುತ್ತಾರೆ.

ಕೆಳ ಹಂತದ ಮತದಾರ ತನ್ನ ಆತ್ಮಸಾಕ್ಷಿಯನ್ನು ಉಳಿಸಿಕೊಂಡಿದ್ದಾನೆ.ಯುವಕರು ಹೊಸ ಹೊಸ ಆಲೋಚನೆ ಹೊಂದಿದ್ದಾರೆ.ವಿಶ್ವದಲ್ಲಿ ನಮ್ಮ ದೇಶ ಮುಂದೆ ಬರಬೇಕು ಎಂದು ಬಯಸುತ್ತಾರೆ.ಭ್ರಷ್ಟಾಚಾರ ಜನರನ್ನು ಭ್ರಷ್ಟರನ್ನಾಗಿ ಮಾಡುತ್ತಿದೆ.ಇದು ಅತಿಯಾದಾಗ ಇದನ್ನು ಬದಲಾಯಿಸುವ ಸಮಯ ಬಂದೇ ಬರುತ್ತದೆ.ಪ್ರಜಾಪ್ರಭುತ್ವ ಕೇವಲ ಜೀವಂತವಾಗಿದ್ದರೆ ಸಾಲದು ಅದು ಆರೋಗ್ಯಕರವಾಗಿರಬೇಕು ಎಂದು ಬೊಮ್ಮಾಯಿ ಹೇಳಿದರು.

ಕಾರ್ಪೊರೇಟ್‍ ಡೊನೆಷನ್‍ 1970 ರ ವರೆಗೆ ಇರಲಿಲ್ಲ. ಆದರೆ,ಪ್ರಭಾವ ಇತ್ತು.ಬೇರೆ ಬೇರೆ ರೀತಯಲ್ಲಿ ನಿಯಂತ್ರಿಸುವ ಕೆಲಸ ಆಗಿನಿಂದಲೂ ಇದ್ದೇ ಇದೆ. ಈಗ ಅದರ ವಿಸ್ತಾರ ದೊಡ್ಡದಾಗಿದೆ.ಇದೆಲ್ಲ ನ್ಯೂನ್ಯತೆಗಳ ನಡುವೆ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಮಾಡಬೇಕು.ಪವರ ಪೊಲಿಟಿಕ್ಸ್‍ನಲ್ಲಿ ಜನಪರ ಆಡಳಿತ ನೀಡಿದರೆ,ಜನರು ಒಳ್ಳೆಯದಕ್ಕೆ ಬೆಲೆ ಕೊಡುತ್ತಾರೆ ಎನ್ನುವ ವಿಶ್ವಾಸ ಇಟ್ಟುಕೊಂಡು. ಸ್ವಲ್ಪವಾದರೂ ಮುತ್ಸದ್ದಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News