ವಿಮಾ ಹಣ ವಿತರಿಸದ ವಿಮಾ ಕಂಪನಿಗೆ ಆಯೋಗದಲ್ಲಿ 15 ಲಕ್ಷ ರೂ.ಡಿಪಾಸಿಟ ಇಡಲು ಆದೇಶ

ನವಲಗುಂದ ತಾಲೂಕಿನ ಹಾಳ ಕುಸುಗಲ್ಲ ಗ್ರಾಮದ ಬಸವರಾಜ ಶಂಕರಪ್ಪಾ ಸವದಿ ಅನ್ನುವವರು ಕೆ.ಎ-25 ಎಎ-4536 ಗೂಡ್ಸ ವಾಹನಕ್ಕೆ ಮಾಲೀಕರಾಗಿದ್ದರು. ಅವರು ಆ ವಾಹನಕ್ಕೆ ಎದುದುದಾರ ಚೋಳಮಂಡಲ ವಿಮಾ ಕಂಪನಿಯಿಂದ ವಿಮೆ ಮಾಡಿಸಿದ್ದರು. 

Written by - Manjunath N | Last Updated : Nov 21, 2023, 12:01 AM IST
  • ದೂರುದಾರ ಮೃತನ ಮಗನಿದ್ದು, ಒಬ್ಬ ಸಹೋದರಿ ಹಾಗೂ ಇನ್ನೊಬ್ಬ ಹೆಂಡತಿಯ ಮಧ್ಯೆ ಮೃತನ ಅವಲಂಬಿತರಾರು ಎನ್ನುವ ಬಗ್ಗೆ ತಂಟೆ ತಕರಾರು ಇದೆ
  • ಅಂತಹ ಗಂಭೀರ ಸಂಗತಿಗಳನ್ನು ನಿರ್ಣಯಿಸುವ ಅಧಿಕಾರ ವ್ಯಾಪ್ತಿ ಗ್ರಾಹಕರ ಆಯೋಗಕ್ಕೆ ಬರುವುದಿಲ್ಲ
  • ಆ ಹಣ ಪಡೆಯಲು ತಾವೇ ಹಕ್ಕುದಾರರು ಅಂತಾ ಆದೇಶ ತರುವಂತೆ ಆಯೋಗ ಆ ಮೂವರಿಗೂ ನಿರ್ದೇಶನ ನೀಡಿದೆ
 ವಿಮಾ ಹಣ ವಿತರಿಸದ ವಿಮಾ ಕಂಪನಿಗೆ ಆಯೋಗದಲ್ಲಿ 15 ಲಕ್ಷ ರೂ.ಡಿಪಾಸಿಟ ಇಡಲು ಆದೇಶ title=
ಸಾಂದರ್ಭಿಕ ಚಿತ್ರ

ಧಾರವಾಡ: ನವಲಗುಂದ ತಾಲೂಕಿನ ಹಾಳ ಕುಸುಗಲ್ಲ ಗ್ರಾಮದ ಬಸವರಾಜ ಶಂಕರಪ್ಪಾ ಸವದಿ ಅನ್ನುವವರು ಕೆ.ಎ-25 ಎಎ-4536 ಗೂಡ್ಸ ವಾಹನಕ್ಕೆ ಮಾಲೀಕರಾಗಿದ್ದರು. ಅವರು ಆ ವಾಹನಕ್ಕೆ ಎದುದುದಾರ ಚೋಳಮಂಡಲ ವಿಮಾ ಕಂಪನಿಯಿಂದ ವಿಮೆ ಮಾಡಿಸಿದ್ದರು. ವಾಹನದ ಮಾಲೀಕ/ಚಾಲಕನಿಗೆ ರೂ.15,00,000/- ವೈಯಕ್ತಿಕ ಅಪಘಾತದ ವಿಮೆ ಒಳಗೊಂಡಿತ್ತು. ದಿ.21/03/2021 ರಂದು ಆ ವಾಹನ ಹುಬ್ಬಳ್ಳಿ/ವಿಜಯಪುರ ರಸ್ತೆ ಮೇಲೆ ಅಪಘಾತಕ್ಕೆ ಈಡಾಗಿತ್ತು. ಆಗ ವಾಹನದ ಮಾಲೀಕ/ ಚಾಲಕ ಬಸವರಾಜ ತೀವ್ರಗಾಯಗೊಂಡು ಮೃತರಾಗಿದ್ದರು. ತಂದೆಗೆ ಸಂಬಂಧಿಸಿದ ವಿಮಾ ಹಣ ರೂ.15 ಲಕ್ಷ ನೀಡುವಂತೆ ಅಲ್ಪವಯಿ ಮಗ ಸಿದ್ದಪ್ಪನ ಪರವಾಗಿ ಅವರ ತಾಯಿ ಪ್ರಸುತಿ ಎದುರುದಾರ ವಿಮಾ ಕಂಪನಿಗೆ ದಾಖಲೆಗಳ ಸಮೇತ ಕ್ಲೇಮ ಅರ್ಜಿ ಕೊಟ್ಟಿದ್ದರು.

ಮೃತ ಬಸವರಾಜನಿಗೆ ತಾನು ಹೆಂಡತಿಯಂತ ಇನ್ನೊಬ್ಬ ಮಾಲಾಶ್ರೀ ಎಂಬುವವರು ವಿಮಾ ಪರಿಹಾರ ತನಗೂ ಕೊಡುವಂತೆ ಆಕ್ಷೇಪಣೆ ಹಾಕಿದ್ದರು. ಮತ್ತೊಬ್ಬ ಬಸವ್ವ ಸವದಿ ಅನ್ನುವವರು ತಾನು ಮೃತ ಬಸವರಾಜನ ಅವೀವಾಹಿತ ಸಹೋದರಿ ಇದ್ದು ತನಗೂ ವಿಮಾ ಹಣ ಸೇರತಕ್ಕದೆಂದು ಆಕ್ಷೇಪಿಸಿದ್ದರು. ಈ ಎಲ್ಲ ಆಕ್ಷೇಪಗಳನ್ನು ಪರಿಗಣಿಸಿದ ವಿಮಾ ಕಂಪನಿ ಪರಿಹಾರ ಯಾರಿಗೆ ಕೊಡುವುದು ಅಂತ ಗೊತ್ತಾಗುತ್ತಿಲ್ಲ ಎಂದು ದೂರುದಾರ ಕ್ಲೇಮನ್ನು ತಿರಸ್ಕರಿಸಿದ್ದರು. ಅಂತಹ ವಿಮಾಕಂಪನಿಯ ನಡಾವಳಿಕೆ ಗ್ರಾಹಕರ ಹಿತರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ವಿಮಾಕಂಪನಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ದಿ.17/12/2020 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಅಧಿವೇಶನ ಪೂರ್ವಸಿದ್ಧತೆ ಸಭೆ: ಅನಧಿಕೃತ ಜಾಹೀರಾತು ಫಲಕ ತೆರವಿಗೆ ಕಟ್ಟುನಿಟ್ಟಿನ ಸೂಚನೆ

ಮೃತನ ಸಹೋದರಿ ಬಸವ್ವ ಮತ್ತು ಮೃತನ ಹೆಂಡತಿ ಅನ್ನುವ ಮಾಲಾಶ್ರೀರವರು ಮೃತನ ಸಾವಿನಿಂದ ಬರಬಹುದಾದ ಪರಿಹಾರದ ಹಣವನ್ನು ತಮಗೆ ಕೊಡುವಂತೆ ಕೋರಿ ಧಾರವಾಡ ಮತ್ತು ಬೆಳಗಾವಿಯ ಕೋರ್ಟುಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಮೃತ ವಿಮಾದಾರ ಹಾಗೂ ಎದುರುದಾರ ವಿಮಾಕಂಪನಿಯವರ ಮಧ್ಯೆ ಆಗಿರುವ ಒಪ್ಪಂದದಂತೆ ಅವರು ಸತ್ತ ಮೇಲೆ ವೈಯಕ್ತಿಕ ಅಪಘಾತ ವಿಮೆ ರೂ.15 ಲಕ್ಷ ಅವಲಂಬಿತರಿಗೆ ಕೊಡಬೇಕಾದುದು ಅವರ ಕರ್ತವ್ಯವಾಗಿದೆ ಅಂತ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ತೀರ್ಪು ನೀಡಿದ 1 ತಿಂಗಳೊಳಗಾಗಿ 15 ಲಕ್ಷ ಹಣವನ್ನು ಗ್ರಾಹಕರ ರಕ್ಷಣಾ ಆಯೋಗದಲ್ಲಿ ಡಿಪಾಸಿಟ ಮಾಡುವಂತೆ ಎದುರುದಾರ ವಿಮಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.

ಇದನ್ನೂ ಓದಿ: ಸುಳ್ಳುಸುದ್ದಿ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಗೃಹಸಚಿವ ಪರಮೇಶ್ವರ್ ಸೂಚನೆ

ದೂರುದಾರ ಮೃತನ ಮಗನಿದ್ದು, ಒಬ್ಬ ಸಹೋದರಿ ಹಾಗೂ ಇನ್ನೊಬ್ಬ ಹೆಂಡತಿಯ ಮಧ್ಯೆ ಮೃತನ ಅವಲಂಬಿತರಾರು ಎನ್ನುವ ಬಗ್ಗೆ ತಂಟೆ ತಕರಾರು ಇದೆ. ಅಂತಹ ಗಂಭೀರ ಸಂಗತಿಗಳನ್ನು ನಿರ್ಣಯಿಸುವ ಅಧಿಕಾರ ವ್ಯಾಪ್ತಿ ಗ್ರಾಹಕರ ಆಯೋಗಕ್ಕೆ ಬರುವುದಿಲ್ಲ. ಕಾರಣ ಅವರು ಸಂಬಂದಿಸಿದ ಸಿವಿಲ್ ಕೋರ್ಟು ಅಥವಾ ಅಧಿಕಾರಯುತ ಪ್ರಾಧಿಕಾರದ ಮುಂದೆ ಪ್ರಕರಣ ದಾಖಲಿಸಿ ಆ ಹಣ ಪಡೆಯಲು ತಾವೇ ಹಕ್ಕುದಾರರು ಅಂತಾ ಆದೇಶ ತರುವಂತೆ ಆಯೋಗ ಆ ಮೂವರಿಗೂ ನಿರ್ದೇಶನ ನೀಡಿದೆ. ಅಂತಹ ಆದೇಶ ತರುವವರೆಗೆ ವಿಮಾ ಕಂಪನಿ ಡಿಪಾಸಿಟ ಮಾಡಿದರೂ 15 ಲಕ್ಷ ಅನ್ನು ರಾಷ್ಟ್ರೀಕೃತ ಬ್ಯಾಂಕನಲ್ಲಿ ಕಾಯಂ ಠೇವಣಿ ಇಡುವಂತೆ ತೀರ್ಪಿನಲ್ಲಿ ಹೇಳಿದೆ. ಸಿವಿಲ್ ಕೋರ್ಟು ಅಥವಾ ಅಧಿಕಾರಯುತ ಪ್ರಾಧಿಕಾರದಿಂದ ಆದೇಶ ತಂದ ವ್ಯಕ್ತಿ ಅಥವಾ ವ್ಯಕ್ತಿಗಳು ಸದರಿ ಆದೇಶದಂತೆ ಬಡ್ಡಿ ಸಮೇತ ಡಿಪಾಸಿಟ ಹಣ ಪಡೆಯಲು ಅರ್ಹರಿದ್ದಾರೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-TInstagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News