PUC Exam 2022 : ಭವಿಷ್ಯದ ದೃಷ್ಟಿಯಿಂದ ಹಿಜಾಬ್ ಕಳಚಿಟ್ಟು ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು

ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಮೇ 18ರವರೆಗೆ ನಡೆಯಲಿದೆ. ಈ ಬಾರೀ ಒಟ್ಟು 6,84,255 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದರು. ರಾಜ್ಯದ ಒಟ್ಟು 1,076 ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು.

Written by - Manjunath Hosahalli | Last Updated : Apr 22, 2022, 07:20 PM IST
  • 6,84,255 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ 1076 ಕೇಂದ್ರಗಳಲ್ಲಿ ಪರೀಕ್ಷೆ
  • ಪ್ರಶ್ನೆಪತ್ರಿಕೆ ಬಲು ಸುಲಭ ವಿದ್ಯಾರ್ಥಿಗಳು ಸಂತಸ
  • ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರದವರೆಗೆ ಹಿಜಾಬ್ ಧರಿಸಿ ಬಂದಿದ್ದವರು, ಭವಿಷ್ಯವೇ ಮುಖ್ಯ
PUC Exam 2022 : ಭವಿಷ್ಯದ ದೃಷ್ಟಿಯಿಂದ ಹಿಜಾಬ್ ಕಳಚಿಟ್ಟು ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು title=

ಬೆಂಗಳೂರು : ಹಿಜಾಬ್ ಗೊಂದಲದ ನಡುವೆ ಮೊದಲ ದಿನದ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರದವರೆಗೆ ಹಿಜಾಬ್ ಧರಿಸಿ ಬಂದಿದ್ದವರು, ಭವಿಷ್ಯವೇ ಮುಖ್ಯ ಅಂತ ಹಿಜಾಬ್ ನ ಬದಿಗಿಟ್ಟು ಪರೀಕ್ಷೆಗೆ ಹಾಜರಾದರು.

6,84,255 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ 1076  ಕೇಂದ್ರಗಳಲ್ಲಿ ಪರೀಕ್ಷೆ

SSLC ಪರೀಕ್ಷೆ ಬಳಿಕ ಶಿಕ್ಷಣ ಇಲಾಖೆಗೆ ದ್ವಿತೀಯ ಪಿಯುಸಿ ಪರೀಕ್ಷೆಯದ್ದೇ ಟೆನ್ಷನ್ ಹೆಚ್ಚಾಗಿತ್ತು. ಯಾಕಂದ್ರೆ ಸಮವಸ್ತ್ರ ಕಿಡಿ ಶುರುವಾಗಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ. ಹೀಗಾಗಿ ಪರೀಕ್ಷಾ ಕೇಂದ್ರದ ಬಳಿ ಖಾಕಿ ಕಟ್ಟೆಚ್ಚರ ವಹಿಸಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪರೀಕ್ಷಾ ಕೇಂದ್ರದ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. 200 ಮೀಟರ್ ನಿಷೇಧಾಜ್ಞೆ ಮತ್ತು ಪರೀಕ್ಷಾ ಕೇಂದ್ರದ ಬಳಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.

ಇದನ್ನೂ ಓದಿ : Siddaramaiah : 'ಪಿಎಸ್ಐ ನೇಮಕಾತಿ ಅಕ್ರಮ : ಇದು ಜಾಮೀನು ರಹಿತ ಅಫೆನ್ಸ್'

ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಮೇ 18ರವರೆಗೆ ನಡೆಯಲಿದೆ. ಈ ಬಾರೀ ಒಟ್ಟು 6,84,255 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದರು. ರಾಜ್ಯದ ಒಟ್ಟು 1,076 ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇಂದು ಮೊದಲ ದಿನದ ಪರೀಕ್ಷೆಗೆ ಕಲಾ ವಿಭಾಗದಿಂದ2,28,167 ವಾಣಿಜ್ಯ ವಿಭಾಗದಿಂದ 2,45,519  ಹಾಗೂ ವಿಜ್ಞಾನ ವಿಭಾಗದಿಂದ 2,10,569 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಿದ್ದರು. ಒಂದು ವೇಳೆ ಹಿಜಾಬ್ ಆಗಿರಬಹುದು ಅಥವಾ ಇತರೆ ಯಾವುದೇ ಕಾರಣದಿಂದ ಮುಖ್ಯ ಪರೀಕ್ಷೆಗೆ ಗೈರಾದರೆ ಪೂರಕ ಪರೀಕ್ಷೆ ನಡೆಸುವುದಾಗಿ ಪಿಯು ಮಂಡಳಿ ತಿಳಿಸಿದ್ದಾರೆ.

ಬೆಂಗಳೂರಿನ ಹಲವು ಪರೀಕ್ಷಾ ಕೇಂದ್ರಗಳ ಬಳಿ ಹಿಜಾಬ್ ಧರಿಸಿಕೊಂಡು ಬಂದ ದೃಶ್ಯಗಳು ಸಾಮಾನ್ಯವಾಗಿತ್ತು. ಆದ್ರೆ, ಇವು ಕೇವಲ ಪರೀಕ್ಷಾ ಕೇಂದ್ರಕ್ಕೆ ಮಾತ್ರ ಸೀಮಿತವಾಗಿತ್ತು. ಪರೀಕ್ಷಾ ಕೊಠಡಿಯೊಳಗೆ ಹೋಗುವ ಮುನ್ನ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ಕಳಚಿಟ್ಟು ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಯೇ ಮುಖ್ಯ ಅಂತ ನಿರ್ಧರಿಸಿದ ವಿದ್ಯಾರ್ಥಿನಿಯರು ಇಂದು ಎಕ್ಸಾಂಗೆ ಹಾಜರಾಗಿದ್ದರು. ಬೆಂಗಳೂರಿನಲ್ಲಿ ಯಾವುದೇ ರೀತಿಯ ಗಲಾಟೆ, ಸಂಘರ್ಷಗಳು ಮೊದಲ ಪರೀಕ್ಷೆಯಲ್ಲಿ ಕಾಣದ ಹಿನ್ನೆಲೆ ಪದವಿ ಪೂಋವ ಶಿಕ್ಷಣ ಇಲಾಖೆ ನಿಟ್ಟುಸಿರು ಬಿಟ್ಟಿದೆ. 

ಪ್ರಶ್ನೆಪತ್ರಿಕೆ ಬಲು ಸುಲಭ ವಿದ್ಯಾರ್ಥಿಗಳು ಸಂತಸ

ಮೊದಲ ದಿನದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಬಲು ಸುಲಭವಾಗಿತ್ತು ಎಂದಿದ್ದಾರೆ. ಕಳೆದ ವರ್ಷ ಪ್ರಥಮ ಪಿಯುಸಿ ಪರೀಕ್ಷೆ ಇಲ್ಲದೇ ಪಾಸ್ ಮಾಡಿದ್ರು. ಆದ್ರೆ ಈ ಬಾರಿ ಸಿಲಬಸ್ ಕಾಲೇಜಿನಲ್ಲಿ ಕಂಪ್ಲೀಟ್ ಮಾಡಿದ ಕಾರಣ ಸಂಪೂರ್ಣವಾಗಿ ಪರೀಕ್ಷೆಗೆ ಸಜ್ಜಾಗಿದ್ದೆವು ಎಂದು ವಿದ್ಯಾ ತಿಳಿಸಿದರು. ಜೊತೆಗೆ ಇವತ್ತಿನ ಪ್ರಶ್ನೆ ಪತ್ರಿಕೆ ನೋಡಿದ ಕೂಡಲೇ ತುಂಬ ಸುಲಭವಾಗಿದೆ ಅಂತ ಅನಿಸಿತು. ಮುಂದೆ ಎಲ್ಲಾ ಪ್ರಶ್ನೆ ಪತ್ರಿಕೆಯೂ ಹೀಗೆ ಸುಲಭವಿದ್ರೆ ಚನ್ನಾಗಿರುತ್ತೆ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ರು.

ಇದನ್ನೂ ಓದಿ : Hubballi violence : ಹುಬ್ಬಳ್ಳಿ ಗಲಭೆ, ತಪ್ಪೊಪ್ಪಿಕೊಂಡು, ಸ್ಪೋಟಕ ಸತ್ಯ ಬಾಯಿಬಿಟ್ಟ ವಸೀಂ ಪಠಾಣ್!

ಒಟ್ನಲ್ಲಿ SSLC ಪರೀಕ್ಷೆಯಂತೆಯೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪಿಯು ಪರೀಕ್ಷೆಗೆ ಹಿಜಾಬ್ ಸಮಸ್ಯೆಯಾಯ್ತು. ಬೆಂಗಳೂರಿನಲ್ಲಿ ಕೇವಲ ಪರೀಕ್ಷಾ ಕೇಂದ್ರದವರೆಗೆ ಮಾತ್ರ ಹಿಜಾಬ್ ಸೀಮಿತವಾಗಿದ್ದು, ಕೊಠಡಿಯೊಳಗೆ ಪ್ರವೇಶಿಸುವಾಗ ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾರೆ. ಧರ್ಮಕ್ಕಿಂತ ಭವಿಷ್ಯ ಹಾಗೂ ಪರೀಕ್ಷೆಯೇ ಮುಖ್ಯ ಅಂತ ತೋರಿಸಿದ್ದಾರೆ. ಆದ್ರೆ, ಬಾಕಿ ಉಳಿದ ಪರೀಕ್ಷೆಗೆ ಹೇಗೆ ನಡೆಯಲಿವೆ ಅನ್ನೊ ಟೆನ್ಷನ್ ಮಾತ್ರ ಶಿಕ್ಷಣ ಇಲಾಖೆಯನ್ನ ಕಾಡ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News