ಅನ್ಯಾಯ ಮುಂದುವರಿದರೆ ಸ್ವತಂತ್ರ ಪಕ್ಷ ಕಟ್ಟಲೂ ಅತಿ ಹಿಂದುಳಿದವರು ಸಿದ್ಧ : ಪ್ರಣವಾನಂದ ಸ್ವಾಮೀಜಿ

ಸೆಪ್ಟೆಂಬರ್ 9ರ ಸಭೆ ಅತಿ ಹಿಂದುಳಿದ ವರ್ಗಗಳ‌ ಜನರು ಸಾಮಾಜಿಕ ನ್ಯಾಯ ಪಡೆಯಲು ಆರಂಭಿಸುವ ಹೋರಾಟದ ವಿಷಯದಲ್ಲಿ‌ ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ. ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳ ಜನರಿಗೆ ನ್ಯಾಯ‌ ದೊರಕುವವರೆಗೂ ಹೋರಾಟ ನಡೆಸುವ ನಿರ್ಣಯಕ್ಕೆ ಸಭೆ ವೇದಿಕೆಯಾಗಲಿದೆ.

Written by - Prashobh Devanahalli | Edited by - Krishna N K | Last Updated : Sep 7, 2023, 07:04 PM IST
  • ಸ್ವತಂತ್ರ ಪಕ್ಷ ಕಟ್ಟಿ, ರಾಜಕೀಯ ನಡೆಸುವುದಕ್ಕೂ ಅತಿ ಹಿಂದುಳಿದ ವರ್ಗಗಳು ಸಿದ್ಧ
  • ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿಕೆ
  • ಸಮಾನ ಮನಸ್ಕರ ಪೂರ್ವಭಾವಿ ಸಭೆಯ ಸಿದ್ಧತೆ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿ ಮಾತು
ಅನ್ಯಾಯ ಮುಂದುವರಿದರೆ ಸ್ವತಂತ್ರ ಪಕ್ಷ ಕಟ್ಟಲೂ ಅತಿ ಹಿಂದುಳಿದವರು ಸಿದ್ಧ : ಪ್ರಣವಾನಂದ ಸ್ವಾಮೀಜಿ title=

ಬೆಂಗಳೂರು : ರಾಜ್ಯದಲ್ಲಿ ಅತಿ ಹಿಂದುಳಿದ ವರ್ಗಗಳ (ಎಂಬಿಸಿ) ಜನರಿಗೆ ಆಗುತ್ತಿರುವ ಅನ್ಯಾಯ ಇನ್ನೂ ಮುಂದುವರಿದರೆ ಸ್ವತಂತ್ರ ಪಕ್ಷ ಕಟ್ಟಿ, ರಾಜಕೀಯ ನಡೆಸುವುದಕ್ಕೂ ಅತಿ ಹಿಂದುಳಿದ ವರ್ಗಗಳು ಸಿದ್ಧ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಸೆಪ್ಟೆಂಬರ್‌ 9 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ ಈಡಿಗ, ಬಿಲ್ಲವ, ನಾಮಧಾರಿ, ಧೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯ ಸಿದ್ಧತೆಯನ್ನು ಗುರುವಾರ ಪರಿಶೀಲನೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 9ರ ಸಭೆ ಅತಿ ಹಿಂದುಳಿದ ವರ್ಗಗಳ‌ ಜನರು ಸಾಮಾಜಿಕ ನ್ಯಾಯ ಪಡೆಯಲು ಆರಂಭಿಸುವ ಹೋರಾಟದ ವಿಷಯದಲ್ಲಿ‌ ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ. ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳ ಜನರಿಗೆ ನ್ಯಾಯ‌ ದೊರಕುವವರೆಗೂ ಹೋರಾಟ ನಡೆಸುವ ನಿರ್ಣಯಕ್ಕೆ ಸಭೆ ವೇದಿಕೆಯಾಗಲಿದೆ ಎಂದರು.

ಇದನ್ನೂ ಓದಿ :"ಕೋಮುವಾದಿ ಶಕ್ತಿಗಳ ವಿರುದ್ಧ ಸೆಡ್ಡುಹೊಡೆದು ನಾವು ಬಿತ್ತಿದ್ದ ಪ್ರೀತಿಯ ಬೀಜ ವ್ಯರ್ಥವಾಗಲಿಲ್ಲ"

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕೀಯ ನಡೆಸಿ, ಅಧಿಕಾರಕ್ಕೆ ಬಂದು ಯಾವುದೋ‌ ಒಂದು ಸಮುದಾಯದ ಪರವಾಗಿ ಮಾತ್ರ ಕೆಲಸ ಮಾಡುವುದು ಹೆಚ್ಚುತ್ತಿದೆ. ಈ ರೀತಿ ಅತಿ ಹಿಂದುಳಿದ ಜನರನ್ನು ಶೋಷಿಸುವುದು ನಿಲ್ಲಬೇಕು. ದೇಶದಲ್ಲಿ ಶೇಕಡ 60ರಷ್ಟು ಮಂದಿ ಹಿಂದುಳಿದ ವರ್ಗಗಳ ಜನರಿದ್ದಾರೆ. ಅವರಿಗೆ ನ್ಯಾಯ ಎಲ್ಲಿ ದೊರಕುತ್ತಿದೆ ಎಂದು ಪ್ರಶ್ನಿಸಿದರು.

ಕೆಪಿಎಸ್ಸಿ ನಡೆಸಿರುವ ನೇಮಕಾತಿಗಳ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದು ನೋಡಿದರೆ ಗೊತ್ತಾಗುತ್ತದೆ. ಹಿಂದುಳಿದ ವರ್ಗಗಳಿಗೆ ಮೀಸಲಾದ ಹುದ್ದೆಗಳಲ್ಲಿ ಶೇಕಡ 90ರಷ್ಟು ಒಂದೇ ಸಮುದಾಯಕ್ಕೆ ಸಿಕ್ಕಿವೆ. ಉಳಿದವರಿಗೆ ನ್ಯಾಯವೇ ಇಲ್ಲವಾಗಿದೆ ಎಂದು ದೂರಿದರು.

ಇದನ್ನೂ ಓದಿ : ದೇವಾಲಯಗಳ ಸ್ವಚ್ಛತೆಗೆ ಮುಜರಾಯಿ ಇಲಾಖೆ ಖಡಕ್ ನಿರ್ಧಾರ..!!

ರಾಜಕೀಯವಾಗಿಯೂ ಹಿಂದುಳಿದ ವರ್ಗಗಳ ನಾಯಕರನ್ನು ತುಳಿಯುವ ಪ್ರಯತ್ನ ನಡೆದಿದೆ. ಶಿವಮೂರ್ತಿ ನಾಯ್ಕ್, ಕೆ.ಸಿ. ಕೊಂಡಯ್ಯ ಸೇರಿದಂತೆ ಹಲವರನ್ನು ತುಳಿಯಲಾಗಿದೆ. ಈಗ ರಾಜ್ಯ ರಾಜಕಾರಣದಲ್ಲಿ ಈಡಿಗ ಸಮುದಾಯದ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆದಿದೆ. ಅದಕ್ಕೆ ಜಯ ಸಿಗುವುದಿಲ್ಲ. ನಮ್ಮ‌ ಸಮುದಾಯದ ಎಸ್. ಬಂಗಾರಪ್ಪ,  ಆರ್.ಎಲ್. ಜಾಲಪ್ಪ ಅವರಿಗೂ ಇದೇ ರೀತಿ ಮಾಡಿದ್ದರು ಎಂದರು.

ರಾಜಕೀಯದಲ್ಲಿ‌ನಾನೊಬ್ಬನೇ, ಎಲ್ಲವೂ ನನ್ನದೇ ಎಂಬ ಏಕಚಕ್ರಾಧಿಪತ್ಯ ನಡೆಯುವುದಿಲ್ಲ. ಕಾಲಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು. ಬದಲಾವಣೆ ಆಗಿಯೇ ಆಗುತ್ತದೆ. ಸಾಮಾಜಿಲ ನ್ಯಾಯ, ಸಾಮಾಜಿಕ‌ ಪರಿವರ್ತನೆ ಎಲ್ಲವೂ ಬೇಕು ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ : 60 ಲಕ್ಷ‌ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ : ಸಚಿವೆ ಲಕ್ಷ್ಮೀ ಹಬ್ಬಾಳ್ಕರ್ ಮಾಹಿತಿ

ಅಹಿಂದ ಹೋರಾಟಕ್ಕೆ ಈಡಿಗ ಸಮುದಾಯದ ಆರ್.ಎಲ್. ಜಾಲಪ್ಪ ಮತ್ತು ಜೆ.ಪಿ.‌ನಾರಾಯಣ ಸ್ವಾಮಿ ಆರ್ಥಿಕ ಬೆಂಬಲ ನೀಡಿದ್ದರು. ಈಗ‌ ಅತಿ ಹಿಂದುಳಿದ ವರ್ಗಗಳ ಹೋರಾಟಕ್ಕೂ ಈಡಿಗ, ಬಿಲ್ಲವ, ನಾಮಧಾರಿ,‌ ಧೀವರ ಸಮುದಾಯ ದೊಡ್ಡ ಬೆಂಬಲ‌ ನೀಡುತ್ತಿದೆ.‌ ಧ್ವನಿ ಇಲ್ಲದ ಸಮುದಾಯಗಳ ಪರ‌ ಹೋರಾಟದ‌ ನೇತೃತ್ವವನ್ನು ನಮ್ಮ ಸಮುದಾಯ ವಹಿಸಲಿದೆ ಎಂದರು.

ಈಡಿಗರು ಸೇರಿದಂತೆ ಅತಿ ಹಿಂದುಳಿದ ವರ್ಗಗಳ ಜನರನ್ನು ತುಳಿದು ರಾಜಕಾರಣ ಮಾಡುವುದು ಹೆಚ್ಚು ದಿನ ನಡೆಯುವುದಿಲ್ಲ. ರಾಜ್ಯದ ಕರಾವಳಿ ಮತ್ತು ಮಲೆನಾಡಿನ  24 ವಿಧಾ‌ಸಭಾ ಕ್ಷೇತ್ರಗಳಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ಧೀವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅತಿ ಹಿಂದುಳಿದ ವರ್ಗಗಳ ಸ್ವತಂತ್ರ ಪಕ್ಷ ಕಟ್ಟಿ ಅಲ್ಲಿ ನಾವೇ ಏಕೆ ಸ್ಪರ್ಧಿಸಬಾರದು ಎಂಬ ಚಿಂತನೆಯೂ ನಡೆದಿದೆ ಎಂದರು.

ಇದನ್ನೂ ಓದಿ : ನಟ ಪ್ರಕಾಶ್ ರಾಜ್ ಅಪ್ಪ-ಅಮ್ಮನಿಗೆ  ಹುಟ್ಟಿದ್ದಾನಾ ಅನ್ನೋದಕ್ಕೆ ಗ್ಯಾರಂಟಿ ಏನು?- ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಹಿಂದುಳಿದ ವರ್ಗಗಳ ಮಠಗಳಿಗೆ ಅನುದಾನ ಮತ್ತು ಜಮೀನು ನೀಡಿರುವ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಲಿ. ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಏಕೆ‌ ಅನುದಾನ ನೀಡಿಲ್ಲ ಎಂಬುದಕ್ಕೆ ಉತ್ತರ ನೀಡಲಿ ಎಂದು ಆಗ್ರಹಿಸಿದರು. ಅಲ್ಲದೆ, ಶನಿವಾರದ ಸಭೆಯಲ್ಲಿ ಹನ್ನೊಂದು ರಾಜ್ಯಗಳ ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಿ.ಕೆ‌. ಹರಿಪ್ರಸಾದ್, ಆಂಧ್ರಪ್ರದೇಶದ ಸಚಿವ ಜೋಗಿ ರಮೇಶ್ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News