ಸೇವಾ ನ್ಯೂನ್ಯತೆ ಎಸಗಿದ ಪ್ಲಿಪ್‍ಕಾರ್ಟ ಕಂಪನಿಗೆ ದಂಡ

  ಧಾರವಾಡದ ಖಾನಾಪೂರ ಮ.ತಡಕೋಡ ಗ್ರಾಮದ ವಾಸಿ ಈರಣ್ಣ ಗುಂಡಗೋವಿ ಎಂಬುವವರು ಪ್ಲಿಪ್‍ಕಾರ್ಟ ಕಂಪನಿಯಿಂದ ಆನ್‍ಲೈನ್ ಮೂಲಕ ದಿ:14/01/2023 ರಂದು ರೂ.2,632/- ಸಂದಾಯ ಮಾಡಿ ಮಿಲ್ಟನ್ ಬೆವರೇಜ್ ಡಿಸ್ಪೆನ್ಸರ್ 2500 ಎಮ್.ಎಲ್.ನ ಥರ್ಮಸ್ ಆರ್ಡರ್ ಮಾಡಿದ್ದರು. ಅದರ ಆಯ್‍ಡಿ.ನಂ.ಓಡಿ ನಂ.427057552465496100 ಇರುತ್ತದೆ. ಅದರಂತೆ ಸದರಿ ಥರ್ಮಸ್‍ನ್ನು 1ನೇ ಎದುರುದಾರರ ಕೋರಿಯರ್ ಸರ್ವಿಸ್‍ನವರು ದಿ:19/01/2023 ರಂದು ದೂರುದಾರನಿಗೆ ತಲುಪಿಸಿದ್ದರು.

Written by - Zee Kannada News Desk | Last Updated : Sep 17, 2023, 12:06 AM IST
ಸೇವಾ ನ್ಯೂನ್ಯತೆ ಎಸಗಿದ ಪ್ಲಿಪ್‍ಕಾರ್ಟ ಕಂಪನಿಗೆ ದಂಡ  title=

ಧಾರವಾಡ:  ಧಾರವಾಡದ ಖಾನಾಪೂರ ಮ.ತಡಕೋಡ ಗ್ರಾಮದ ವಾಸಿ ಈರಣ್ಣ ಗುಂಡಗೋವಿ ಎಂಬುವವರು ಪ್ಲಿಪ್‍ಕಾರ್ಟ ಕಂಪನಿಯಿಂದ ಆನ್‍ಲೈನ್ ಮೂಲಕ ದಿ:14/01/2023 ರಂದು ರೂ.2,632/- ಸಂದಾಯ ಮಾಡಿ ಮಿಲ್ಟನ್ ಬೆವರೇಜ್ ಡಿಸ್ಪೆನ್ಸರ್ 2500 ಎಮ್.ಎಲ್.ನ ಥರ್ಮಸ್ ಆರ್ಡರ್ ಮಾಡಿದ್ದರು. ಅದರ ಆಯ್‍ಡಿ.ನಂ.ಓಡಿ ನಂ.427057552465496100 ಇರುತ್ತದೆ. ಅದರಂತೆ ಸದರಿ ಥರ್ಮಸ್‍ನ್ನು 1ನೇ ಎದುರುದಾರರ ಕೋರಿಯರ್ ಸರ್ವಿಸ್‍ನವರು ದಿ:19/01/2023 ರಂದು ದೂರುದಾರನಿಗೆ ತಲುಪಿಸಿದ್ದರು.

ಇದನ್ನೂ ಓದಿ: ಸಾಲು ಕೊಡುವ ನೆಪದಲ್ಲಿ ಅನುಚಿತ ವರ್ತನೆ: ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಧರ್ಮದೇಟು!

ದೂರುದಾರ ಆ ಥರ್ಮಸ್‍ನ್ನು ಬಳಸಲು ತೆರೆದು ನೋಡಿದಾಗ ಅದು ದೋಷದಿಂದ ಕೂಡಿರುವುದು ಕಂಡು ಬಂದಿರುತ್ತದೆ.ಆದ್ದರಿಂದ ಅದನ್ನು ವಾಪಸ್ಸು ಕಳುಹಿಸಲು 1ನೇ ಎದುರುದಾರರಿಗೆ ದೂರುದಾರ ದಿ:21/01/2023 ರಂದು ವಿನಂತಿಸಿಕೊಂಡಿರುತ್ತಾರೆ. ಅದರಂತೆ ಕಂಪನಿಯ ಕೋರಿಯರ್ ಸರ್ವಿಸ್‍ನವರು ಆ ಥರ್ಮಸನ್ನು ದೂರುದಾರನಿಂದ ದಿ:24/01/2023 ರಂದು ಹಿಂಪಡೆದುಕೊಂಡು ಹೋಗಿರುತ್ತಾರೆ. ಆದರೆ ಆ ದೋಷಯುಕ್ತ ಥರ್ಮಸ್ ಬದಲು ಬೇರೆ ಹೊಸ ಥರ್ಮಸ್ಸ ಕೊಡದೇ, ಅದರ ಬೆಲೆ ರೂ.2,632/- ನ್ನು ಹಿಂದಿರುಗಿಸದೇ ಥರ್ಮಸ್/ವಸ್ತುವನ್ನು ಮರಳಿ ಪಡೆಯುವಿಕೆ ರದ್ದುಗೊಳಿಸಲಾಗಿರುತ್ತದೆ ಅಂತಾ ದೂರುದಾರನ ಮೂಬೈಲಗೆ ದಿ:29/01/2023 ರಂದು 1ನೆ ಎದುರುದಾರರು ಸಂದೇಶ ಕಳುಹಿಸಿರುತ್ತಾರೆ. ಎದುರುದಾರ ನಂ.1 ಮತ್ತು 2ನೇ ರವರಇಂತಹ ನಡಾವಳಿಕೆಯಿಂದ ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಹಾಗೂ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಜಿಲ್ಲಾಗ್ರಾಹಕರ ಆಯೋಗಕ್ಕೆ ದಿ:19/04/2023 ರಂದು ದೂರನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಸರ್.ಎಂ. ವಿಶ್ವೇಶ್ವರಯ್ಯರಿಂದಲೇ ಬೆಂಗಳೂರಿಗೆ ಕಾವೇರಿ ನೀರು ಬಂದಿದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ದೋಷಯುಕ್ತ ಮಿಲ್ಟನ್ ಬೆವರೇಜ್ ಡಿಸ್ಪನ್ಸರ್ ಥರ್ಮಸ್ ಹಿಂಪಡೆದು ಬೇರೆ ಹೊಸ ಥರ್ಮಸ್ ಮರಳಿಸುವಲ್ಲಿ ಎದುರುದಾರರು ವಿಫಲರಾಗಿ ದೂರುದಾರನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಎದುರುದಾರರು ದೂರುದಾರರಿಗೆ ಥರ್ಮಸ್‍ನ ಮೌಲ್ಯ ರೂ.2,632/- ಗಳನ್ನು ಈ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಕೊಡಲು ಆದೇಶಿಸಿದೆ ಅಲ್ಲದೇ ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.10,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.5,000/-ಗಳನ್ನು ನೀಡುವಂತೆ ಇಬ್ಬರೂ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

 

Trending News