ಬೆಂಗಳೂರು: ದೇಶದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಪಕ್ಷಾಂತರಿಗಳಲ್ಲಿ 70% ಜನರು ಸೋತಿದ್ದಾರೆ.ಇದೇ ಫಲಿತಾಂಶ ರಾಜ್ಯದಲ್ಲೂ ಬರಲಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಖರ್ಗೆ 'ದೇಶದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಪಕ್ಷಾಂತರಿಗಳಲ್ಲಿ 70% ಜನರು ಸೋತಿದ್ದಾರೆ.ಇದೇ ಫಲಿತಾಂಶ ರಾಜ್ಯದಲ್ಲೂ ಬರಲಿದೆ.100% ಫಕ್ಷಾಂತರಿಗಳು ಸೋಲಲಿದ್ದಾರೆ.ಯಾವ ಕಾರ್ಯಕ್ರಮಗಳ ಹೆಸರಲ್ಲಿ ಮತ ಪಡೆದಿದ್ದಿರೊ, ಆ ಪಕ್ಷಕ್ಕೆ, ತತ್ವ ಸಿದ್ಧಾಂತಕ್ಕೆ ಅವಮಾನ ಮಾಡಿದ್ದಕ್ಕಾಗಿ ಜನರು ಅವರನ್ನು ತಿರಸ್ಕರಿಸಲು ಸಜ್ಜಾಗಿದ್ದಾರೆ' ಎಂದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು 'ಬಿಜೆಪಿ ಸರ್ಕಾರ ಎಲ್ಲಾ ಸರ್ಕಾರಿ ಸಂಸ್ಥಗೆಳನ್ನು, ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.ಬಿಜೆಪಿಯೇತರ ಪಕ್ಷಗಳ ನಾಯಕರು, ಕಾರ್ಯಕರ್ತರನ್ನು ಬೆದರಿಸುವ ಮೂಲಕ ಬಿಜೆಪಿಯತ್ತ ಸೆಳೆಯುತ್ತಿದ್ದಾರೆ.ಮಹಾರಾಷ್ಟ್ರದಲ್ಲೂ ಹೀಗೆಯೇ ಮಾಡಿದ್ದರು.ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಕಿಡಿ ಕಾರಿದರು.
ದೇಶದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಪಕ್ಷಾಂತರಿಗಳಲ್ಲಿ 70% ಜನರು ಸೋತಿದ್ದಾರೆ.
ಇದೇ ಫಲಿತಾಂಶ ರಾಜ್ಯದಲ್ಲೂ ಬರಲಿದೆ.
100% ಫಕ್ಷಾಂತರಿಗಳು ಸೋಲಲಿದ್ದಾರೆ.
ಯಾವ ಕಾರ್ಯಕ್ರಮಗಳ ಹೆಸರಲ್ಲಿ ಮತ ಪಡೆದಿದ್ದಿರೊ, ಆ ಪಕ್ಷಕ್ಕೆ, ತತ್ವ ಸಿದ್ಧಾಂತಕ್ಕೆ ಅವಮಾನ ಮಾಡಿದ್ದಕ್ಕಾಗಿ ಜನರು ಅವರನ್ನು ತಿರಸ್ಕರಿಸಲು ಸಜ್ಜಾಗಿದ್ದಾರೆ.
- @kharge pic.twitter.com/nCpU9tKIR6— Karnataka Congress (@INCKarnataka) December 1, 2019
ಇನ್ನು ರಾಜ್ಯದಲ್ಲಿನ ಭೀಕರ ಪ್ರವಾಹದ ಸಂದರ್ಭದಲ್ಲಿ ಸೂಕ್ತ ಪ್ರಮಾಣದ ನೆರವು ನೀಡದಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು., ನರೇಂದ್ರ ಮೋದಿ ಅವರು ರಾಜ್ಯದ ಭೀಕರ ಪ್ರವಾಹದ ಬಗ್ಗೆ ಮಾತನಾಡಲಿಲ್ಲ.ಅಗತ್ಯ ಪರಿಹಾರ ನೀಡಲಿಲ್ಲ.ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿನ ನೆರವು ತರಲಿಲ್ಲ. ಮೋದಿಯವರಗೆ ರಾಜ್ಯದ ಮೇಲೆ ಸಿಟ್ಟು ಇದೆ. ಯಾಕೆ ಎಂಬುದು ತಿಳಿದಿಲ್ಲ.ಯಡಿಯೂರಪ್ಪ ನವರ ಮೇಲಿನ ಸಿಟ್ಟನ್ನು ನಮ್ಮ ಮೇಲೆ ತೀರಿಸಿಕೊಳ್ಳುತ್ತಿದ್ದಾರೆಯೇ ನನಗೆ ಗೊತ್ತಿಲ್ಲ' ಎಂದರು.
ಇದೇ ಸಂದರ್ಭದಲ್ಲಿ ಅವರು ಚುನಾವಣಾ ಫಲಿತಾಂಶದ ಬಳಿಕ ಏನು ಎನ್ನುವ ವಿಚಾರವಾಗಿ ಮಾತನಾಡಿ ' ಸಧ್ಯಕ್ಕೆ ಚುನಾವಣೆಲಿ ಗೆಲ್ಲುವುದಷ್ಟೇ ನಮ್ಮ ಉದ್ದೇಶ.ಪಕ್ಷಾಂತರಿಗಳಿಗೆ ಪಾಠ ಕಲಿಸಬೇಕು.ಇದಕ್ಕಾಗಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು. ಹೆಚ್ಚು ಸ್ಥಾನ ಗೆದ್ದ ಬಳಿಕ ಏನು ಎಂಬುದು ಸಧ್ಯಕ್ಕಂತು ಗೊತ್ತಿಲ್ಲ.ಜನತೆ ಕಾಂಗ್ರೆಸ್ ಗೆ ಬೆಂಬಲ ನೀಡಿ, 15ರಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಕೋರುತ್ತೇನೆ' ಎಂದು ಮನವಿ ಮಾಡಿದರು.