Video : ಬಸ್ - ಬೈಕ್ ನಡುವೆ ಅಪಘಾತ : ಬೆಂಕಿಗಾಹುತಿಯಾದ ಬಸ್

ಮಂಗಳೂರು - ಗುರುಪುರ ನಡುವೆ ಸಂಚರಿಸುವ ರೂಟ್ ಸಂಖ್ಯೆ 45 ಅಶೆಲ್ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ.

Written by - Zee Kannada News Desk | Last Updated : Apr 8, 2022, 05:44 PM IST
  • ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ

    ರಸ್ತೆ ಮಧ್ಯೆಯೇ ಸಂಪೂರ್ಣವಾಗಿ ಬಸ್ ಬೆಂಕಿಗಾಹುತಿ
  • ಮಂಗಳೂರು - ಗುರುಪುರ ನಡುವೆ ಸಂಚರಿಸುವ ರೂಟ್ ಸಂಖ್ಯೆ 45 ಅಶೆಲ್ ಬಸ್
Video : ಬಸ್ - ಬೈಕ್ ನಡುವೆ ಅಪಘಾತ : ಬೆಂಕಿಗಾಹುತಿಯಾದ ಬಸ್ title=

ಮಂಗಳೂರು : ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ರಸ್ತೆ ಮಧ್ಯೆಯೇ ಸಂಪೂರ್ಣವಾಗಿ ಬಸ್ ಬೆಂಕಿಗಾಹುತಿಯಾದ ಘಟನೆ ನಗರದ ಹಂಪನಕಟ್ಟೆ ಸಿಗ್ನಲ್ ಬಳಿ ನಡೆದಿದೆ. 

ಮಂಗಳೂರು - ಗುರುಪುರ ನಡುವೆ ಸಂಚರಿಸುವ ರೂಟ್ ಸಂಖ್ಯೆ 45 ಅಶೆಲ್ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾವುದೆ ಅನಾವುತ ಸಂಭವಿಸಿಲ್ಲ. ಆದ್ರೆ, ದ್ವಿಚಕ್ರ ವಾಹನದಲ್ಲಿದ್ದ ಸವಾರನಿಗೆ ಕಾಲಿಗೆ ಗಾಯವಾಗಿದ್ದು, 26 ವರ್ಷದ ಈತನನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 28 ಮಂದಿಯೂ ಸುರಕ್ಷಿತವಾಗಿದ್ದಾರೆ.

ಇದನ್ನೂ ಓದಿ : Kamal Pant : 'ಬೆಂಗಳೂರಿನ 6 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ'

ಅಪಘಾತದ ಸಂದರ್ಭ ಬಸ್ ಮುಂಭಾಗದ ಚಕ್ರದ ಬಳಿ ದ್ವಿಚಕ್ರ ಸಿಲುಕಿಕೊಂಡಿದೆ. ಇದರಿಂದ ಡ್ರ್ಯಾಗ್ ಆಗಿ ಡಿಸೇಲ್ ಲೀಕ್ ಆಗಿ ಬಸ್ ಗೆ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹಾಗೂ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News