ಆನೇಕಲ್ ಬಳಿ ರೇವ್ ಪಾರ್ಟಿ: ಡ್ರಗ್ಸ್ ನಶೆಯಲ್ಲಿದ್ದ 11 ಮಂದಿ ಬಂಧನ..!

ಜಂಗಲ್ ಸಫಾರಿ ಹೆಸರಿನಲ್ಲಿ ‘ಡ್ರಗ್ಸ್’ ಪಾರ್ಟಿ ನಡೆಸಲಾಗುತ್ತಿತ್ತು, ಮ್ಯೂಸಿಕ್ ಕಂಪನಿಯೊಂದು ಈ ಪಾರ್ಟಿ ಆಯೋಜಿಸಿತ್ತು ಎಂದು ಹೇಳಲಾಗಿದೆ.

Written by - Puttaraj K Alur | Last Updated : Sep 19, 2021, 12:27 PM IST
  • ಜಂಗಲ್ ಸಫಾರಿ ಹೆಸರಿನಲ್ಲಿ ಆನೇಕಲ್ ಬಳಿಯ ರೆಸಾರ್ಟ್ ನಲ್ಲಿ ಭರ್ಜರಿ ರೇವ್ ಪಾರ್ಟಿ ನಡೆಸಲಾಗಿದೆ
  • ಪೆಡ್ಲರ್ಸ್ ಮೂಲಕ ನೇರವಾಗಿ ಡ್ರಗ್ಸ್ ಖರೀದಿಸಿ ಯುವಕ-ಯುವತಿಯರಿಗೆ ಮಾರಾಟ ಮಾಡಿ ಪಾರ್ಟಿ ಆಯೋಜನೆ
  • ಮಾದಕವಸ್ತು ಸೇವಿಸಿ ನಶೆಯಲ್ಲಿದ್ದ 11 ಮಂದಿಯ ಬಂಧನ, ಕೆಲವರು ಸ್ಥಳದಿಂದ ಎಸ್ಕೇಪ್
ಆನೇಕಲ್ ಬಳಿ ರೇವ್ ಪಾರ್ಟಿ: ಡ್ರಗ್ಸ್ ನಶೆಯಲ್ಲಿದ್ದ 11 ಮಂದಿ ಬಂಧನ..! title=
ಆನೇಕಲ್ ಬಳಿಯ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ನಡೆಸಲಾಗಿದೆ (Photo Courtesy: @Zee News)

ಬೆಂಗಳೂರು: ಬೆಂಗಳೂರಿನ ಆನೇಕಲ್ ಹೊರವಲಯದ ತಮ್ಮನಾಯನಕನಹಳ್ಳಿ ಬಳಿಯ ಖಾಸಗಿ ರೆಸಾರ್ಟ್(Anekal Resort)ವೊಂದರಲ್ಲಿ ತಡರಾತ್ರಿ ರೇವ್ ಪಾರ್ಟಿ ನಡೆದಿದೆ. ಗಾಂಜಾ, ಮರಿಜುವಾನಾ ಸೇರಿ ವಿವಿಧ ರೀತಿಯ ಡ್ರಗ್ಸ್ ಬಳಸುತ್ತಾ ಅರ್ಧಂಬರ್ಧ ಬಟ್ಟೆ ಧರಿಸಿ ಯುವಕ-ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆನೇಕಲ್ ಪೊಲೀಸರು ಡ್ರಗ್ಸ್ ನಶೆಯಲ್ಲಿ ತೇಲಾಡುತ್ತಿದ್ದ 11 ಮಂದಿಯನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಆನೇಕಲ್ ಬಳಿಯ ನಿರ್ಜನ ಪ್ರದೇಶದಲ್ಲಿರುವ ರೆಸಾರ್ಟ್(Anekal Resort Party) ನಲ್ಲಿ ನಿನ್ನೆ(ಸೆ.18) ತಡರಾತ್ರಿ ಸುಮಾರು 30 ರಿಂದ 40 ಮಂದಿ ಯುವಕ-ಯುವತಿಯರು ರೇವ್ ಪಾರ್ಟಿ(Rave Party) ಆಯೋಜಿಸಿ ಮಸ್ತ್ ಮಜಾ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಹೊಂದಿದ್ದ ಆನೇಕಲ್ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಯುವಕರು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ. ಡ್ರಗ್ಸ್(Drugs) ಸೇವಿಸಿ ಅರೆನಗ್ನಾವಸ್ಥೆಯಲ್ಲಿದ್ದ 11 ಮಂದಿಯನ್ನು ಖಾಕಿಪಡೆ ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕೌಟುಂಬಿಕ ಕಲಹ?: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಸಾವು..!

ರೇವ್‌ ಪಾರ್ಟಿ(Rave Party) ನಡೆದ ರೆಸಾರ್ಟ್ ನಲ್ಲಿ ಗಾಂಜಾ, ಮರಿಜುವಾನ ಸೇರಿ ವಿವಿಧ ರೀತಿಯ ಡ್ರಗ್ಸ್‌ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಂಗಲ್ ಸಫಾರಿ ಹೆಸರಿನಲ್ಲಿ ‘ಡ್ರಗ್ಸ್’ ಪಾರ್ಟಿ ನಡೆಸಲಾಗುತ್ತಿತ್ತು. ಮ್ಯೂಸಿಕ್ ಕಂಪನಿಯೊಂದು ಈ ಪಾರ್ಟಿ ಆಯೋಜಿಸಿತ್ತು ಎಂದು ಹೇಳಲಾಗಿದೆ. ರಷ್ಯಾದಿಂದ ಮಾಡೆಲ್ಸ್, ‘ಡಿಜೆ’ ಕರೆಸಿಕೊಂಡಿದ್ದ ಪೆಡ್ಲರ್ಸ್ ಸೋಷಿಯಲ್ ಮೀಡಿಯಾ ಮೂಲಕ ಪಾರ್ಟಿಗೆ ಯುವಕ-ಯುವತಿಯರನ್ನು ಸೆಲೆಕ್ಷನ್ ಮಾಡುತ್ತಿದ್ದರಂತೆ.

ಗುಪ್ತವಾಗಿ ಒಂದು ಕಡೆ ಸೇರೋದಕ್ಕೆ ‘ಸ್ಕ್ಯಾನರ್’ ತಂತ್ರ ರೂಪಿಸಿದ್ದರಂತೆ. ‘ಸ್ಕ್ಯಾನ್’ ಸಕ್ಸಸ್ ಆದ್ರೆ ಮಾತ್ರ ಪಾರ್ಟಿಗೆ ಎಂಟ್ರಿ ನೀಡುತ್ತಿದ್ದರು. ಪಾರ್ಟಿಗೆ ಹೆಸರು ನೋಂದಾಯಿಸಲು​ ಒಬ್ಬರಿಂದ 1 ಸಾವಿರ, 2 ಸಾವಿರ, 5 ಸಾವಿರ ರೂ.ವರೆಗೂ ಶುಲ್ಕ ವಿಧಿಸುತ್ತಿದ್ದರಂತೆ. ಪಾರ್ಟಿಗೆ ಹೋಗುವ ಮೊದಲು ಬಲಗೈಗೆ ಸೀಲ್ ಹಾಕಿ ಒಳಗಡೆ ಬಿಡುತ್ತಿದ್ದರಂತೆ. ಪೆಡ್ಲರ್ಸ್ ಮೂಲಕ ನೇರವಾಗಿ ಡ್ರಗ್ಸ್ ಖರೀದಿ ಮಾಡಿ ಪಾರ್ಟಿ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕೊರೊನಾ ಲಸಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದ ಕರ್ನಾಟಕ

ಬೆಂಗಳೂರಿನ ವಿದ್ಯಾರ್ಥಿಗಳು ಹಾಗೂ ಕೆಲ ಶ್ರೀಮಂತರ ಮಕ್ಕಳು ರೇವ್‌ ಪಾರ್ಟಿ(Rave Party)ಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಮಧ್ಯರಾತ್ರಿ ವೇಳೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಪಾರ್ಟಿ ಮೂಡ್ ನಲ್ಲಿದ್ದ ಕೆಲವರು ಎಸ್ಕೇಪ್ ಆಗಿದ್ದಾರೆ. ಡ್ರಗ್ಸ್ ಖರೀದಿಸಿ ಅದನ್ನು ಸೇವಿಸಿ ಮೋಜು ಮಸ್ತಿ ಮಾಡುತ್ತಿದ್ದ 11 ಮಂದಿ ಪೊಲೀಸರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News