ಮನೆಯಿಂದ 75 ತೊಲ ಬಂಗಾರ ಕದ್ದು, ಸ್ನೇಹಿತರಿಗೆ ಹಂಚಿದ 10ನೇ ತರಗತಿ ವಿದ್ಯಾರ್ಥಿ, ಪ್ರಕರಣ ಬಯಲಾದ ರೋಚಕ ಕತೆ ಇದು

ತನ್ನ ಮನೆಯಲ್ಲಿ ಚಿನ್ನವನ್ನು ಇಟ್ಟಿರುವುದು ಹುಡುಗಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿನಿ ಮನೆಯಿಂದ ಸುಮಾರು 37 ಲಕ್ಷ ಮೌಲ್ಯದ 75 ತೊಲಾ ಚಿನ್ನವನ್ನು ಕದ್ದು, ತನ್ನ ಸೋಶಿಯಲ್ ಮೀಡಿಯಾ ಗೆಳೆಯರಿಗೆ ಉಡುಗೊರೆಯಾಗಿ ನೀಡಿದ್ದಾಳೆ. 

Written by - Ranjitha R K | Last Updated : Sep 7, 2021, 03:22 PM IST
  • ಮನೆಯಲ್ಲಿದ್ದ ಚಿನ್ನವನ್ನು ಕದ್ದು ಸ್ನೇಹಿತರಿಗೆ ನೀಡಿದ ವಿದ್ಯಾರ್ಥಿನಿ
  • ಕೇರಳದ ತಿರುವನಂತಪುರಂನಲ್ಲಿ ಘಟನೆ
  • ಒಂದು ವರ್ಷದ ನಂತರ ಬಯಲಾದ ರಹಸ್ಯ
ಮನೆಯಿಂದ 75 ತೊಲ ಬಂಗಾರ ಕದ್ದು, ಸ್ನೇಹಿತರಿಗೆ ಹಂಚಿದ 10ನೇ ತರಗತಿ ವಿದ್ಯಾರ್ಥಿ, ಪ್ರಕರಣ ಬಯಲಾದ ರೋಚಕ ಕತೆ ಇದು  title=
ಮನೆಯಲ್ಲಿದ್ದ ಚಿನ್ನವನ್ನು ಕದ್ದು ಸ್ನೇಹಿತರಿಗೆ ನೀಡಿದ ವಿದ್ಯಾರ್ಥಿನಿ (file photo)

ತಿರುವನಂತಪುರಂ : ಸಾಮಾಜಿಕ ಜಾಲ ತಾಣದ ವ್ಯಸನಕ್ಕೆ ಬಿದ್ದು, ಮನೆ ಮಗಳೇ ಕಳ್ಳಿಯಾದ ಕತೆಯಿದು. ಸಾಮಾಜಿಕ ಜಾಲ ತಾಣದಲ್ಲಿ (Social media), ಫ್ರೆಂಡ್ ಶಿಪ್ ಉಳಿಸಿಕೊಳ್ಳುವ ಉದ್ದೇಶದಿಂದಾಗಿ, 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬ ಮನೆಯಲ್ಲಿನ ಚಿನ್ನವನ್ನು ಕದ್ದು, ತನ್ನ ಸ್ನೇಹಿತರಿಗೆ ಹಂಚಿದ್ದಾನೆ.  ಹೌದು, ಕೇರಳದ ತಿರುವನಂತಪುರಂ (Thiruvananthapuram) ನಿವಾಸಿಯಾದ ಈ ವಿದ್ಯಾನಿರ್ಥಿ, 75 ತೊಲ ಚಿನ್ನವನ್ನು ಕದ್ದು,  ತನ್ನ ಆನ್‌ಲೈನ್ ಸ್ನೇಹಿತರಿಗೆ ಗಿಫ್ಟ್  ನೀಡಿದ್ದಾಳೆ. 

ಒಂದೇ ಪೋಸ್ಟ್ ನಿಂದ ಸ್ನೇಹಿತರಾಗಿದ್ದರು : 
ವರದಿಯ ಪ್ರಕಾರ, 15 ವರ್ಷದ ವಿದ್ಯಾರ್ಥಿನಿ, ಸಾಮಾಜಿಕ ಮಾಧ್ಯಮದಲ್ಲಿ (Social media) ಶಿಬೀನ್ ಎಂಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಶಿಬಿನ್ ತನ್ನ ಹಣಕಾಸಿನ ಸಮಸ್ಯೆಗಳ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ನೋಡಿದ, ಹುಡುಗಿ ಆ ವ್ಯಕ್ತಿಯೊಂದಿಗೆ ಮಾತನಾಡಲು ಆರಂಭಿಸಿದ್ದಾಳೆ. ಹೀಗೆ ಒಂದೇ ಪೋಸ್ಟ್ (Social media post) ಮೂಲಕ  ಇಬ್ಬರೂ ಸ್ನೇಹಿತರಾಗಿದ್ದಾರೆ. ನಂತರ ಶಿಬಿನ್ ಹಣಕಾಸಿನ ತೊಂದರೆಗಳನ್ನು ನಿವಾರಿಸುವ ಉದ್ದೇಶದಿಂದ, ತಮ್ಮ ಮನೆಯಲ್ಲಿ ಇರಿಸಲಾಗಿರುವ ಚಿನ್ನವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾಳೆ.  

ಇದನ್ನೂ ಓದಿ : SBI ATM Franchise: ಈ ದಾಖಲೆಗಳನ್ನು ಸಲ್ಲಿಸಿ, ಪ್ರತಿ ತಿಂಗಳು 60 ಸಾವಿರ ರೂ.ವರೆಗೆ ಸಂಪಾದಿಸಿ

ಪ್ರಕರಣ ಹೊರ ಬಂದದ್ದು ಹೇಗೆ
ತನ್ನ ಮನೆಯಲ್ಲಿ ಚಿನ್ನವನ್ನು (Gold) ಇಟ್ಟಿರುವುದು ಹುಡುಗಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿನಿ ಮನೆಯಿಂದ ಸುಮಾರು 37 ಲಕ್ಷ ಮೌಲ್ಯದ 75 ತೊಲಾ ಚಿನ್ನವನ್ನು ಕದ್ದು, ತನ್ನ ಸೋಶಿಯಲ್ ಮೀಡಿಯಾ ಗೆಳೆಯರಿಗೆ ಉಡುಗೊರೆಯಾಗಿ ನೀಡಿದ್ದಾಳೆ. ಶಿಬಿನ್ ತನ್ನ ತಾಯಿಯ ಸಹಾಯದಿಂದ ಈ ಚಿನ್ನವನ್ನು ಮಾರಾಟ ಮಾಡಿದ್ದಾನೆ. ನಂತರ ಶಿಬಿನ್ ಮತ್ತು ಆತನ ತಾಯಿ ಮನೆ ರಿಪೇರಿ ಮಾಡಿಸಿಕೊಂಡು, ಉಳಿದ 9.8 ಲಕ್ಷ ರೂಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಘಟನೆ ನಡೆದು ಸುಮಾರು ಒಂದು ವರ್ಷದ ನಂತರ, ಹುಡುಗಿಯ ಮನೆಯಲ್ಲಿ ಚಿನ್ನ ನಾಪತ್ತೆಯಾಗಿರುವ ಬಗ್ಗೆ ಗೊತ್ತಾಗಿದೆ. ಮನೆಯಲ್ಲಿದ್ದ ಚಿನ್ನ ನಾಪತ್ತೆಯಾಗಿರುವ ಬಗ್ಗೆ ಹುಡುಗಿಯ ತಾಯಿ, ಪೊಲೀಸರಿಗೆ ದೂರು ನೀಡಿದ್ದಾರೆ. 

ಪೊಲೀಸ್ ವಿಚಾರಣೆಯಲ್ಲಿ ಬಾಯಿ ಬಿಟ್ಟ ಹುಡುಗಿ :
ಪೊಲೀಸರ (Police enquiry) ವಿಚಾರಣೆಯ ಸಮಯದಲ್ಲಿ, ಹುಡುಗಿ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.  ಹುದುಗಿಯಹೆಲಿಕೆ ಮೇರೆಗೆ,  ಶಿಬೀನ್ ಮತ್ತು ಆತನ ತಾಯಿ ಶಾಜಿಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವರ್ಷದ ಹಿಂದೆ ಶಿಬೀನ್ ಗೆ ಚಿನ್ನ ನೀಡಿರುವುದಾಗಿ, ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಶಿಬೀನ್ ಮನೆಯಿಂದ ಪೊಲೀಸರು ಸುಮಾರು 10 ಲಕ್ಷ ರೂಯನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : Shikshak Parv 2021: ಶಿಕ್ಷಣ ಕ್ಷೇತ್ರದಲ್ಲಿ N-DEAR ಪ್ರಮುಖ ಪಾತ್ರ, PM Modi ಯಿಂದ ಹಲವು ಮಹತ್ವದ ಘೋಷಣೆಗಳು

ಮತ್ತೊಬ್ಬ ಗೆಳೆಯನಿಗೆ ನೀಡಿದ್ದಳು ಚಿನ್ನದ ಉಡುಗೊರೆ : 
ಈ ಹುಡುಗಿ, ಶಿಬೀನ್ ಎಲ್ಲಾ 75 ತೊಲ ಚಿನ್ನವನ್ನು ನೀಡಲಿಲ್ಲ. ಆತನಿಗೆ ಕೇವಲ 2 7 ತೊಲ ಚಿನ್ನವನ್ನು ಮಾತ್ರ ನೀಡಿದ್ದಾಳೆ.  ಈ ಹಿನ್ನೆಲೆಯಲ್ಲಿ ಹುಡುಗಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಿದಾಗ ಪೂರ್ತಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.   ಉಳಿದ ಚಿನ್ನವನ್ನು   ಪಾಲಕ್ಕಾಡ್ ಜಿಲ್ಲೆಯ ಮತ್ತೊಬ್ಬ ಯುವಕನಿಗೆ ನೀಡಿದ್ದಾಗಿ ಹೇಳಿದ್ದಾಳೆ. ಇನ್ಸ್ಟಾಗ್ರಾಮ್ (Instagram) ಮೂಲಕ ಪರಿಚಯವಾದ ವ್ಯಕ್ತಿಗೆ ಈ ಚಿನ್ನವನ್ನು ನೀಡಿದ್ದಾಳೆ. ಆದರೆ ಆ ವ್ಯಕ್ತಿ ಚಿನ್ನವನ್ನು ಪಡೆದ ತಕ್ಷಣ ಹುಡುಗಿಯನ್ನು ಬ್ಲಾಕ್ ಮಾಡಿದ್ದಾನೆ ಎನ್ನಲಾಗಿದೆ. 

ತಾಯಿಯ ಹೇಳಿಕೆಯ ಮೇಲೆ ಅನುಮಾನ :
ಇನ್ನು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾತ್ರ, ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮನೆಯಿಂದ 75 ತೊಲ ಚಿನ್ನ ಕಾಣೆಯಾಗಿರುವ ಬಗ್ಗೆ ಒಂದು ವರ್ಷದವರೆಗೆ ತಿಳಿದಿರಲಿಲ್ಲ ಎನ್ನುವ ಹುಡುಗಿಯ ತಾಯಿಯ ಹೇಳಿಕೆ ಮೇಲೆ ಕೂಡ ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News