ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ: ದಾಖಲೆ ಸಲ್ಲಿಸದವರಿಗೆ ಸೂಚನೆ

ಕೋವಿಡ್ 19 ವೈರಾಣು ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದ್ದು, ಈವರೆಗೂ ದಾಖಲೆಗಳನ್ನು ಸಲ್ಲಿಸದೇ ಇರುವ ವಾರಸುದಾರರಿಗೆ ಈ ಮೂಲಕ ಸೂಚಿಸಲಾಗಿದೆ.

Written by - Zee Kannada News Desk | Last Updated : Jan 27, 2022, 04:50 PM IST
  • ಕೋವಿಡ್ 19 ವೈರಾಣು ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದ್ದು, ಈವರೆಗೂ ದಾಖಲೆಗಳನ್ನು ಸಲ್ಲಿಸದೇ ಇರುವ ವಾರಸುದಾರರಿಗೆ ಈ ಮೂಲಕ ಸೂಚಿಸಲಾಗಿದೆ.
  • ಒಂದು ವೇಳೆ ಅಧಿಕೃತ ಫಲಾನುಭವಿಗಳು ಅರ್ಜಿ ಸಲ್ಲಿಸದೇ ಇದ್ದಲ್ಲಿ ಯಾವ ಅರ್ಜಿಗಳು ಬಾಕಿ ಇರುವದಿಲ್ಲ ಎಂದು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಕೊಪ್ಪಳ ಅಪಾರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ: ದಾಖಲೆ ಸಲ್ಲಿಸದವರಿಗೆ ಸೂಚನೆ title=
ಸಾಂದರ್ಭಿಕ ಚಿತ್ರ

ಕೊಪ್ಪಳ: ಕೋವಿಡ್ 19 ವೈರಾಣು ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದ್ದು, ಈವರೆಗೂ ದಾಖಲೆಗಳನ್ನು ಸಲ್ಲಿಸದೇ ಇರುವ ವಾರಸುದಾರರಿಗೆ ಈ ಮೂಲಕ ಸೂಚಿಸಲಾಗಿದೆ.

ಇದನ್ನೂ ಓದಿ : Padmashri Award: ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪುತ್ರನಿಗೂ ಪದ್ಮಶ್ರೀ

ಕೋವಿಡ್ 19 ವೈರಾಣು ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ಆಸರೆಯಾಗಿ ಒಂದು ಲಕ್ಷ ರೂ.ಪರಿಹಾರವನ್ನು ಅರ್ಹ ಸಂತ್ರಸ್ತ ಕುಟುಂಬದ ಕಾನುನುಬದ್ಧ ವಾರಸುದಾರರರಿಗೆ ಪಾವತಿಸಲು ಸರ್ಕಾರವು ಆದೇಶಿಸಲಾಗಿದ್ದು, ಅದರಂತೆ ಸಂತ್ರಸ್ತರಿಗೆ ಪರಿಹಾರ ಹಣವನ್ನು ಈಗಾಗಲೇ ಪಾವತಿಸಲಾಗಿದೆ.

ಇದನ್ನೂ ಓದಿ : HD Kumaraswamy: ಮಿಷನ್ 123 ಮರೆತಿದೆಯೇ ಜೆಡಿಎಸ್? ಅವಲಂಬಿ ರಾಜಕಾರಣಕ್ಕೆ ಮತ್ತೆ ಜೈ ಎನ್ನುತ್ತಾರ ಎಚ್ಡಿಕೆ? 

ಪ್ರಸ್ತುತದವರೆಗೂ ಕೋವಿಡ್19 ಸೋಂಕಿನಿಂದ ಮೃತಪಟ್ಟ ಕುಟುಂಬದವರು ಅರ್ಜಿ ಸಲ್ಲಿಸದಿದ್ದಲ್ಲಿ ಸಂಬಂಧಿಸಿದ ತಹಶೀಲ್ ಕಛೇರಿಗೆ ಜ. 31 ರೊಳಗಾಗಿ ಅಗತ್ಯ ದಾಖಲಾತಿಗಳಾದ ಮರಣ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ವೈಧ್ಯಕೀಯ ಪ್ರಮಾಣಿತ ದಾಖಲೆಗಳು, ಆಸ್ಪತ್ರೆಗೆ ದಾಖಲಾದ ಕೋವಿಡ್ ಸಂಬಂಧಿತ ದಾಖಲೆಗಳು ಹಾಗೂ ಆರ್.ಟಿ.ಪಿ.ಸಿ.ಆರ್/ ಆರ್.ಎ.ಟಿ/ ಎಚ್.ಆರ್.ಸಿ.ಟಿ. ಪರಿಕ್ಷೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಇದನ್ನೂ ಓದಿ: ಊರಿಗೆ ಊರೇ ಅನಾರೋಗ್ಯ ಪೀಡಿತ.. 114 ಮಂದಿಯಲ್ಲಿ 70 ಮಂದಿಗೆ ಚಳಿಜ್ವರ, ಹೆಚ್ಚಿದ ಆತಂಕ

ಒಂದು ವೇಳೆ ಅಧಿಕೃತ ಫಲಾನುಭವಿಗಳು ಅರ್ಜಿ ಸಲ್ಲಿಸದೇ ಇದ್ದಲ್ಲಿ ಯಾವ ಅರ್ಜಿಗಳು ಬಾಕಿ ಇರುವದಿಲ್ಲ ಎಂದು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಕೊಪ್ಪಳ ಅಪಾರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News