ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಲೋಕಾರ್ಪಣೆಗೊಂಡ ಸರ್ದಾರ್ ವಲ್ಲಭಭಾಯಿ ಅಕಾಡೆಮಿ...!

ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳನ್ನು ಸಹ ಅತೀ ಕಡಿಮೆ ವೆಚ್ಚದಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರನ್ನಾಗಿ ಮಾಡುವ ಸದುದ್ದೇಶದಿಂದ ಸ್ಥಾಪಿಸಲಾದ ಸರ್ದಾರ್ ವಲ್ಲಭಭಾಯಿ ಅಕಾಡೆಮಿಯನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ.

Last Updated : Jun 12, 2020, 05:38 PM IST
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಲೋಕಾರ್ಪಣೆಗೊಂಡ ಸರ್ದಾರ್ ವಲ್ಲಭಭಾಯಿ ಅಕಾಡೆಮಿ...! title=
Photo Courtsey : Twitter

ಬೆಂಗಳೂರು: ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳನ್ನು ಸಹ ಅತೀ ಕಡಿಮೆ ವೆಚ್ಚದಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರನ್ನಾಗಿ ಮಾಡುವ ಸದುದ್ದೇಶದಿಂದ ಸ್ಥಾಪಿಸಲಾದ ಸರ್ದಾರ್ ವಲ್ಲಭಭಾಯಿ ಅಕಾಡೆಮಿಯನ್ನು (Sardar Vallabhbhai Academy) ಇಂದು ಲೋಕಾರ್ಪಣೆಗೊಳಿಸಲಾಗಿದೆ.

ಈಗ ಲೋಕಾರ್ಪಣೆಗೊಂಡಿರುವ ಈ ಅಕಾಡೆಮಿಯಲ್ಲಿ ಕಚೇರಿ,ಕೋಚಿಂಗ್ ಹಾಲ್,ವೀಡಿಯೋ ಕಾನ್ಸರೆನ್ಸ್ ಹಾಲ್ ಮತ್ತು ಇ-ಲೈಬ್ರರಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.ಅಷ್ಟೇ ಅಲ್ಲದೆ ಸುಸಜ್ಜಿತ ಗ್ರಂಥಾಲಯವನ್ನು ಒಳಗೊಂಡಿರುವ ಈ ಅಕಾಡೆಮಿ ಅತಿ ಹೆಚ್ಚು ಪುಸ್ತಕ ಸೌಲಭ್ಯಗಳನ್ನು ಒಳಗೊಂಡಿದೆ. 

ಸನ್ಮಾನ್ಯ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಬಿಬಿಎಂಪಿಯ ಅನುದಾನದ ಅಡಿಯಲ್ಲಿ ಯಡಿಯೂರು ವಾರ್ಡ್ ನಲ್ಲಿ ನಿರ್ಮಿಸಿರುವ ' ಸರ್ದಾರ್ ವಲ್ಲಭಭಾಯಿ ಅಕಾಡೆಮಿ' ಮತ್ತು 'ಸಾವಯವ ಗೊಬ್ಬರ ಘಟಕ' ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ಮಾಡಿದ್ದಾರೆ.

Trending News