ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ-ಸಿದ್ದರಾಮಯ್ಯ

ಆರ್ ಆರ್ ನಗರ ಉಪಚುನಾವಣೆ (RR Nagar byelection)  ಪ್ರಚಾರ ಕಾವೇರುತ್ತಿರುವಂತೆಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರಣಿ ಟ್ವೀಟ್ ಗಳ ಮೂಲಕ ಆಕ್ರೋಶ  ಹೊರಹಾಕಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯ ಆಕ್ರೋಶಕ್ಕೆ  ಗುರಿಯಾಗಿದ್ದು ಯಾರು ಗೊತ್ತಾ..? ಮತ್ಯಾರೂ ಅಲ್ಲ, ಸಿದ್ದರಾಮಯ್ಯ  ಅವರ ಒಂದು ಕಾಲದ ಸಹವರ್ತಿ, ಸ್ನೇಹಿತ ಮುನಿರತ್ನ.ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ ಮುನಿರತ್ನ, ಈಗ ರಾಜ ರಾಜೇಶ್ವರಿ ನಗರದಲ್ಲಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. 

Last Updated : Oct 30, 2020, 07:01 PM IST
ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ-ಸಿದ್ದರಾಮಯ್ಯ

ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆ (RR Nagar byelection)  ಪ್ರಚಾರ ಕಾವೇರುತ್ತಿರುವಂತೆಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರಣಿ ಟ್ವೀಟ್ ಗಳ ಮೂಲಕ ಆಕ್ರೋಶ  ಹೊರಹಾಕಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯ ಆಕ್ರೋಶಕ್ಕೆ  ಗುರಿಯಾಗಿದ್ದು ಯಾರು ಗೊತ್ತಾ..? ಮತ್ಯಾರೂ ಅಲ್ಲ, ಸಿದ್ದರಾಮಯ್ಯ  ಅವರ ಒಂದು ಕಾಲದ ಸಹವರ್ತಿ, ಸ್ನೇಹಿತ ಮುನಿರತ್ನ.ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ ಮುನಿರತ್ನ, ಈಗ ರಾಜ ರಾಜೇಶ್ವರಿ ನಗರದಲ್ಲಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. 

ನಮ್ಮ ಸರ್ಕಾರದ ಕಾರ್ಯಕ್ರಮಗಳಿಗೆ ಅನುದಾನ ನೀಡದೆ ಇತಿಶ್ರೀ ಹಾಡಿದ್ದೇ ಬಿಜೆಪಿ ಸಾಧನೆ-ಸಿದ್ಧರಾಮಯ್ಯ

ಅಷ್ಟಕ್ಕೂ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಏನಿದೆ..?

ಸರಣಿ ಟ್ವೀಟ್ ರಿಲೀಸ್ ಮಾಡಿರುವ ಸಿದ್ದರಾಮಯ್ಯ ಅದರಲ್ಲಿ ಹೇಳಿದ್ದು ಇಷ್ಟು..

“ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತೆ” ಎಂದ್ದಿದ್ದಾರೆ ಸಿದ್ದರಾಮಯ್ಯ.

“ಮುನಿರತ್ನ ಅವರು ಎರಡು ಬಾರಿ ಗೆದ್ದು ಶಾಸಕನಾಗಲು ಕಾರಣ ಕಾಂಗ್ರೆಸ್ ಪಕ್ಷವೇ ಹೊರತು ಅವರ ವೈಯಕ್ತಿಕ ವರ್ಚಸ್ಸಲ್ಲ.ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್.ಆರ್ ನಗರ ಕ್ಷೇತ್ರದ ಅಭಿವೃದ್ಧಿಗೆ ರೂ.2,000 ಕೋಟಿ ಅನುದಾನ ನೀಡಿದ್ದೆ, ಆದರೂ ನಮಗೆ ದ್ರೋಹ ಮಾಡಿದ್ರಲ್ಲ ಮುನಿರತ್ನ ಅವರೇ, ಅಂಥಾ ಅನ್ಯಾಯ ನಾವೇನು ಮಾಡಿದ್ವಿ ನಿಮ್ಗೆ”  ಎಂದು ಕುಟುಕಿದ್ದಾರೆ.

ಇದೊಂದು ಪಂಚೇಂದ್ರಿಯವನ್ನು ಕಳೆದುಕೊಂಡು ಮರಗಟ್ಟಿ ಹೋಗಿರುವ ಸರ್ಕಾರ- ಸಿದ್ಧರಾಮಯ್ಯ ವಾಗ್ದಾಳಿ

“ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ತನ್ನ ತಾಯಿ ಅಂತ ಹೇಳ್ತಿದ್ದ ಮುನಿರತ್ನ ಅದೇ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದ್ರು. ನಾವು ಯಾಕಪ್ಪಾ ಪಕ್ಷನ ತಾಯಿ ಅಂತ ಕರೀತಿದ್ದಿ, ಈಗ ಅದೇ ತಾಯಿಗೆ ಮೋಸ ಮಾಡಿದ್ಯಲ ಅಂದ್ರೆ ಕಾಂಗ್ರೆಸ್ ನಾಯಕರು ನನ್ನ ತಾಯಿಗೆ ಅವಮಾನ ಮಾಡ್ತಿದಾರೆಂದು ಗೊಳೋ ಅಂತ ಮೊಸಳೆ ಕಣ್ಣೀರು ಸುರಿಸ್ತಾರೆ” ಎಂದು ಛೇಡಿಸಿದ್ದಾರೆ.

“ರಾಜ್ಯ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದೆ, ಅದರ ಜೊತೆಗೆ ವಿತರಣೆ ಆಗುತ್ತಿರುವ ಆಹಾರ ಪದಾರ್ಥಗಳು ಕಲಬೆರಕೆ ಬೇರೆ. ನಾನು ಶಿರಾಕ್ಕೆ ಹೋದಾಗ ಸರ್ಕಾರ ಕೊಡ್ತಿರುವ ರಾಗಿನ ಕೋಳಿ ಸಹಾ ತಿನ್ನಲ್ಲ ಅಷ್ಟು ಕಲ್ಲು, ಕಡ್ಡಿಗಳಿವೆ ಅಂತ ಜನ ಹಿಡಿಹಿಡಿ ಶಾಪ ಹಾಕ್ತಿದ್ರು. ನಾಚಿಕೆಯಾಗ್ಬೇಕು ಈ ಸರ್ಕಾರಕ್ಕೆ” ಎಂದು ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ ಸಿದ್ದರಾಮಯ್ಯ. 
ಸಿದ್ದರಾಮಯ್ಯ ಶುಕ್ರವಾರ ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರ ರೋಡ್ ಶೋ ನಡೆಸಿದರು. ಕೆಪಿಸಿಸಿ ಸಾರಥಿ ಡಿಕೆ ಶಿವಕುಮಾರ್ ಅವರಿಗೆ ಸಾಥ್ ನೀಡಿದರು.

More Stories

Trending News