ಬೆಂಗಳೂರು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅತಿಥಿ ಉಪನ್ಯಾಸಕರ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ.ಆ ಮೂಲಕ ಈಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಪ್ರಯುಕ್ತ ರಾಜ್ಯ ಸರ್ಕಾರ ಉಡುಗೊರೆಯನ್ನು ನೀಡಿದೆ.
ಇದನ್ನೂ ಓದಿ: Budget 2022 : PPF ಖಾತೆದಾರರಿಗೆ ಭರ್ಜರಿ ಸಿಹಿ ಸುದ್ದಿ! ಹೊಸ ಬಜೆಟ್ನಲ್ಲಿ ಹಣಕಾಸು ಸಚಿವರಿಂದ ಸಿಗಲಿದೆ ಈ ಬಿಗ್ ನ್ಯೂಸ್
ಈ ಕುರಿತಾಗಿ ಮಾಧ್ಯಮಗಳಿಗೆ ತಿಳಿಸಿರುವ ಸಚಿವ ಅಶ್ವತ್ ನಾರಾಯಣ್ 'ಅತಿಥಿ ಉಪನ್ಯಾಸಕರ ಬೇಡಿಕೆ ಇದ್ದು, ಮುಷ್ಕರ ಮಾಡಿದ್ರು. ಅವರ ಬೇಡಿಕೆ ಅನುಗುಣವಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು.ಈಗ ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ನೇತೃತ್ವದಲ್ಲಿನ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ವರದಿಯನ್ನು ಸಿಎಂ ಗಮನಿಸಿ ವರದಿ ಅನುಷ್ಠಾನಕ್ಕೆ ಸಮ್ಮತಿಸಿದ್ದಾರೆ.
ಇದನ್ನೂ ಓದಿ: ರಾತ್ರಿ 10 ಗಂಟೆಯಿಂದ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಬ್ರೇಕ್
ಈ ಸಮಿತಿಯ ಶಿಫಾರಸ್ಸಿನ ಅನುಗುಣವಾಗಿ UGC ಕ್ವಾಲಿಫಿಕೇಷನ್ ಇರೋರು, 5 ವರ್ಷ ಸೇವೆ ಸಲ್ಲಿಸಿದವರಿಗೆ 32 ಸಾವಿರ, ಯುಜಿಸಿ ಅರ್ಹತೆ ಇಲ್ಲದವರಿಗೆ 30 ಸಾವಿರ, ಇಲ್ಲದೆ ಐದು ವರ್ಷ ಸೇವೆ ಸಲ್ಲಿಸಿದವರಿಗೆ 28 ಸಾವಿರ, ಅರ್ಹತೆ ಜೊತೆಗೆ ಐದು ವರ್ಷ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರಿಗೆ 32 ಸಾವಿರ ನೀಡಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ.
'ಒಂದು ವೇಳೆ ಯುಜಿಸಿ ಅರ್ಹತೆ ಇದ್ದು, ಐದು ವರ್ಷ ಪೂರೈಸದವರಿಗೆ 30 ಸಾವಿರ, ಅದೇ ಯುಜಿಸಿ ಇಲ್ಲದೆ ಐದು ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿರುವ ಉಪನ್ಯಾಸಕರಿಗೆ 28 ಸಾವಿರ, ಯುಜಿಸಿ ಇಲ್ಲದೆ ಐದು ವರ್ಷಗಳ ಸೇವೆ ಸಲ್ಲಿಸದಿರುವವರಿಗೆ 26 ಸಾವಿರಗಳ ವರೆಗೆ ವೇತನ ನೀಡಲು ರಾಜ್ಯಸರ್ಕಾರ ಈಗ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: ಫೆಬ್ರುವರಿ 1 ಕ್ಕೆ ಕೇಂದ್ರ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್
ಆ ಮೂಲಕ ಹಲವಾರು ವರ್ಷಗಳಿಂದ ತಮ್ಮ ವೇತನದ ವಿಚಾರವಾಗಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರು ಈಗ ಸರ್ಕಾರದ ಈ ನಿರ್ಧಾರದಿಂದ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.