ಬೆಂಗಳೂರಿನ ಸೂರ್ಯ ದೇವನ ದೇಗುಲದಲ್ಲಿ 500 ಜನರಿಂದ ಸೂರ್ಯ ನಮಸ್ಕಾರ..!

ಕರ್ನಾಟಕದಲ್ಲಿ ಸಮಾಜವನ್ನು ಆರೋಗ್ಯಕರ ಮತ್ತು ದೃಢಕಾಯ ಮಾಡುವ ಸಲುವಾಗಿ, ಸಂಕ್ರಾಂತಿಯನ್ನು ಅನುಪಮವಾದ ರೀತಿಯಲ್ಲಿ ಆಚರಿಸಲಾಯಿತು. 500 ಜನ ಯೋಗೋತ್ಸಾಹಿಗಳು ಅನೇಕ ಸುತ್ತುಗಳ ಸೂರ್ಯನಮಸ್ಕಾರಗಳನ್ನು ಮಾಡಿ, ಸೂರ್ಯದೇವನಿಗೆ ದೊಮಲೂರಿನ ಶ್ರೀ ಸೂರ್ಯನಾರಾಯಣ ದೇಗುಲದಲ್ಲಿ ಭಾನುವಾರ ಬೆಳಗ್ಗೆ ತಮ್ಮ ನಮನವನ್ನು ಸಲ್ಲಿಸಿದರು.

Written by - Zee Kannada News Desk | Last Updated : Jan 14, 2024, 04:04 PM IST
  • ಭಾನುವಾರದ ಬೆಳಗಿನ ಸಮಯದಲ್ಲಿ, ಉತ್ತಮ ಆರೋಗ್ಯಕ್ಕಾಗಿ 500 ಜನ ಇಲ್ಲಿ ಸೇರಿರುವುದನ್ನು ಕಂಡು ಸಂತಸವಾಗುತ್ತಿದೆ.
  • ಧ್ಯಾನಸ್ತವಾದ ರೀತಿಯಲ್ಲಿ ಮಾಡಿದ್ದರ ಪರಿಣಾಮ ಇಲ್ಲಿ ಪ್ರಶಾಂತತೆ ಹಾಗೂ ಚೈತನ್ಯದಾಯಕ ಅನುಭವಗಳು ಉಂಟಾಗಿವೆ.
  • ಇಂದಿನ ದಿನಕ್ಕೆ ಇದು ಒಳ್ಳೆಯ ಶುಭಾರಂಭ
ಬೆಂಗಳೂರಿನ ಸೂರ್ಯ ದೇವನ ದೇಗುಲದಲ್ಲಿ 500 ಜನರಿಂದ ಸೂರ್ಯ ನಮಸ್ಕಾರ..! title=

ಬೆಂಗಳೂರು: ಕರ್ನಾಟಕದಲ್ಲಿ ಸಮಾಜವನ್ನು ಆರೋಗ್ಯಕರ ಮತ್ತು ದೃಢಕಾಯ ಮಾಡುವ ಸಲುವಾಗಿ, ಸಂಕ್ರಾಂತಿಯನ್ನು ಅನುಪಮವಾದ ರೀತಿಯಲ್ಲಿ ಆಚರಿಸಲಾಯಿತು. 500 ಜನ ಯೋಗೋತ್ಸಾಹಿಗಳು ಅನೇಕ ಸುತ್ತುಗಳ ಸೂರ್ಯನಮಸ್ಕಾರಗಳನ್ನು ಮಾಡಿ, ಸೂರ್ಯದೇವನಿಗೆ ದೊಮಲೂರಿನ ಶ್ರೀ ಸೂರ್ಯನಾರಾಯಣ ದೇಗುಲದಲ್ಲಿ ಭಾನುವಾರ ಬೆಳಗ್ಗೆ ತಮ್ಮ ನಮನವನ್ನು ಸಲ್ಲಿಸಿದರು.

ಇದನ್ನೂ ಓದಿ: ದೆಹಲಿ ಪೊಲೀಸ್ ಅಪರಾಧ ವಿಭಾಗದ ಮೊದಲ ಮಹಿಳಾ ಮುಖ್ಯಸ್ಥೆ ಶಾಲಿನಿ ಸಿಂಗ್ ಯಾರು?

ಸೇಲ್ಸ್ ಫೋರ್ಸ್ ನ ಪ್ರಾಡೆಕ್ಟ್ ಮ್ಯಾನೇಜ್ಮೆಂಟ್ ನಿರ್ದೇಶಕರಾಗಿರುವ ದೀಪಿಕಾ ರೆಡ್ಡಿಯವರು ಮಾತನಾಡಿ, " ಭಾನುವಾರದ ಬೆಳಗಿನ ಸಮಯದಲ್ಲಿ, ಉತ್ತಮ ಆರೋಗ್ಯಕ್ಕಾಗಿ 500 ಜನ ಇಲ್ಲಿ ಸೇರಿರುವುದನ್ನು ಕಂಡು ಸಂತಸವಾಗುತ್ತಿದೆ. 13 ಸುತ್ತುಗಳ ಸೂರ್ಯನಮಸ್ಕಾರವನ್ನು, ಮಂತ್ರೋಚ್ಚಾರಣೆಯನ್ನು ಅನುಸರಿಸಿ ಧ್ಯಾನಸ್ತವಾದ ರೀತಿಯಲ್ಲಿ ಮಾಡಿದ್ದರ ಪರಿಣಾಮ ಇಲ್ಲಿ ಪ್ರಶಾಂತತೆ ಹಾಗೂ ಚೈತನ್ಯದಾಯಕ ಅನುಭವಗಳು ಉಂಟಾಗಿವೆ. ಇಂದಿನ ದಿನಕ್ಕೆ ಇದು ಒಳ್ಳೆಯ ಶುಭಾರಂಭ. ಆಯುಷ್ ಸಚಿವಾಲಯವು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜೊತೆಗೂಡಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದರು.

ಇದನ್ನೂ ಓದಿPhoto Gallery: ಪ್ರಧಾನಿ ಮೋದಿಯಿಂದ ದೇಶದ ಅತೀ ಉದ್ದದ ಅಟಲ್ ಸೇತುವೆ ಲೋಕಾರ್ಪಣೆ!

ಭವ್ಯವಾದ ಈ ಸೂರ್ಯನಮಸ್ಕಾರದ ಕಾರ್ಯಕ್ರಮವನ್ನು ಆರ್ಟ್ ಆಫ್ ಲಿವಿಂಗಿನ ಶ್ರೀ ಶ್ರೀ ಯೋಗ ಶಾಲೆಯು ಆಯುಷ್ ಮಂತ್ರಾಲಯದ ಸಹಯೋಗದೊಂದಿಗೆ ಆಯೋಜಿಸಿತ್ತು. ಭಾರತದಾದ್ಯಂತ 21 ಸೂರ್ಯ ದೇವಸ್ಥಾನಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಇದೂ ಕೂಡ ಒಂದಾಗಿತ್ತು. ಫಿಟ್ ಭಾರತ ಅಭಿಯಾನದ ಭಾಗವಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ದೃಢಕಾಯ ಭಾರತಕ್ಕಾಗಿ ಆರೋಗ್ಯದಿಂದಿರುವ ಪಣವನ್ನು ತೊಟ್ಟರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News