ಭಾರತದ ದುಡಿಯುವ ವರ್ಗದ ಸ್ಥಿತಿ 2023: ಸಾಮಾಜಿಕ ಗುರುತುಗಳು ಮತ್ತು ಕಾರ್ಮಿಕ ಮಾರುಕಟ್ಟೆಯ ಫಲಿತಾಂಶಗಳು

 ಭಾರತವು 1980 ರ ದಶಕದಿಂದ ದುಡಿಯುವ ವರ್ಗದಲ್ಲಿ, ನಿಯಮಿತ ವೇತನ ಪಡೆಯುವ ಕಾರ್ಮಿಕರ ಸಂಖ್ಯೆಯಲ್ಲಿ ಗಮನಾರ್ಹವಾದ ಹೆಚ್ಚಳ ಕಂಡಿದೆ, ಜಾತಿ ಆಧಾರಿತ ಪ್ರತ್ಯೇಕತೆಯನ್ನು ಕನಿಷ್ಠವಾಗಿಸಿದೆ ಮತ್ತು ಕಾರ್ಯಪಡೆಯಲ್ಲಿ ಲಿಂಗ ಆಧಾರಿತ ಅಸಮಾನತೆಗಳನ್ನು ಸಾಕಷ್ಟು ನಿವಾರಿಸಿದೆ,  ಆದರೆ ಕೆಲವು ಸವಾಲುಗಳು ಮಾತ್ರ ಹಾಗೆಯೇ ಉಳಿದಿವೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಇಂದು ಬಿಡುಗಡೆಗೊಳಿಸಿರುವ ‘ಭಾರತೀಯ ದುಡಿಯುವ ವರ್ಗದ ಸ್ಥಿತಿ 2023’ (ಸ್ಟೇಟ್ ಆಫ್ವರ್ಕಿಂಗ್ ಇಂಡಿಯಾ 2023) ವರದಿ ತಿಳಿಸಿದೆ. 

Written by - Zee Kannada News Desk | Last Updated : Sep 20, 2023, 07:54 PM IST
  • ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯವನ್ನು ಕರ್ನಾಟಕ ಸರಕಾರದ 2010 ರ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ ಕಾಯಿದೆಯಡಿಯಲ್ಲಿ ಸ್ಥಾಪಿಸಲಾಗಿದೆ.
  • ಅಜೀಂ ಪ್ರೇಮ್‍ಜಿ ಫೌಂಡೇಷನ್ಸ್ಥಾಪಿಸಿರುವ ಈ ವಿಶ್ವ ವಿದ್ಯಾಲಯವು ಸಂಪೂರ್ಣವಾಗಿ ಸಮಾಜೋಪಕಾರಿ ಉದ್ದೇಶವನ್ನು ಹೊಂದಿದ್ದು, ಲಾಭದ ಉದ್ದೇಶವಿಲ್ಲದ ಸಂಸ್ಥೆಯಾಗಿದೆ.
  • ವಿಶ್ವ ವಿದ್ಯಾಲಯವು ಸ್ಪಷ್ಟವಾದ ಸಾಮಾಜಿಕ ಗುರಿಯನ್ನು ಹೊಂದಿದ್ದು ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ.
ಭಾರತದ ದುಡಿಯುವ ವರ್ಗದ ಸ್ಥಿತಿ 2023: ಸಾಮಾಜಿಕ ಗುರುತುಗಳು ಮತ್ತು ಕಾರ್ಮಿಕ ಮಾರುಕಟ್ಟೆಯ ಫಲಿತಾಂಶಗಳು title=

ನವದೆಹಲಿ: ಭಾರತವು 1980 ರ ದಶಕದಿಂದ ದುಡಿಯುವ ವರ್ಗದಲ್ಲಿ, ನಿಯಮಿತ ವೇತನ ಪಡೆಯುವ ಕಾರ್ಮಿಕರ ಸಂಖ್ಯೆಯಲ್ಲಿ ಗಮನಾರ್ಹವಾದ ಹೆಚ್ಚಳ ಕಂಡಿದೆ, ಜಾತಿ ಆಧಾರಿತ ಪ್ರತ್ಯೇಕತೆಯನ್ನು ಕನಿಷ್ಠವಾಗಿಸಿದೆ ಮತ್ತು ಕಾರ್ಯಪಡೆಯಲ್ಲಿ ಲಿಂಗ ಆಧಾರಿತ ಅಸಮಾನತೆಗಳನ್ನು ಸಾಕಷ್ಟು ನಿವಾರಿಸಿದೆ,  ಆದರೆ ಕೆಲವು ಸವಾಲುಗಳು ಮಾತ್ರ ಹಾಗೆಯೇ ಉಳಿದಿವೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಇಂದು ಬಿಡುಗಡೆಗೊಳಿಸಿರುವ ‘ಭಾರತೀಯ ದುಡಿಯುವ ವರ್ಗದ ಸ್ಥಿತಿ 2023’ (ಸ್ಟೇಟ್ ಆಫ್ವರ್ಕಿಂಗ್ ಇಂಡಿಯಾ 2023) ವರದಿ ತಿಳಿಸಿದೆ.

ಐ ಡಬ್ಲ್ಯು ಡಬ್ಲ್ಯು ಎ ಜಿ ಇ (IWWAGE) ಮತ್ತು ಐ ಐ ಎಮ್‌  (IIM)  ಬೆಂಗಳೂರು ಇವರ ಸಹಯೋಗದೊಂದಿಗೆ ಕೈಗೊಳ್ಳಲಾಗಿದ್ದ ಭಾರತೀಯ ದುಡಿಯುವ ವರ್ಗದ ಮಹತ್ತರ ಪ್ರಾಥಮಿಕ ಸಮೀಕ್ಷೆ ಮತ್ತು ಅಧಿಕೃತ ಮೂಲಗಳಿಂದ ಪಡೆದ ದತ್ತಾಂಶಗಳ ಪುರಾವೆಯೊಂದಿಗೆ ಈ ವರದಿಯನ್ನು ತಯಾರಿಸಲಾಗಿದೆ. ವರದಿಯು ಸಾಮಾಜಿಕ ಅಸಮಾನತೆಯ ಮೇಲೆ ಆರ್ಥಿಕ ಮತ್ತು ರಚನಾತ್ಮಕ ಬದಲಾವಣೆಗಳ ಪ್ರಭಾವದ ಬಗ್ಗೆ ಆಳವಾದ ಒಳನೋಟಗಳನ್ನು ಬೀರುತ್ತದೆ. ಎಲ್ಲಾ ರಂಗಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆಯಾದರೂ,  ಸಾಧಿಸುವುದು ಇನ್ನೂ ಸಾಕಷ್ಟಿದೆ ಎಂದು ವರದಿಯು ತೋರಿಸುತ್ತಿದೆ. ಇದರ ಸಂಪೂರ್ಣ ವರದಿ ಆನ್‌ಲೈನ್‌ನಲ್ಲಿ ಲಭ್ಯವಿದೆ.

ಇದನ್ನೂ ಓದಿ: ಯಡಿಯೂರಪ್ಪ ಭ್ರಷ್ಟ ಜನತಾ ಪಾರ್ಟಿಯನ್ನು ಸ್ವಚ್ಛಗೊಳಿಸಲು ಪ್ರವಾಸ ಮಾಡಲಿ: ಕಾಂಗ್ರೆಸ್

“ಉದ್ಯೋಗ ವಿಷಯಗಳಿಗೆ ಸಂಬಂಧಿಸಿದಂತೆ ಸಮೀಕ್ಷಾ ವರದಿಗಳಲ್ಲಿ ಒಳ್ಳೆಯ ಸುದ್ದಿ ಕಾಣುವುದು ಇಂದು ಜಗತ್ತಿನೆಲ್ಲೆಡೆ ಅಪರೂಪವಾಗಿದೆ. ಆದರೆ ಭಾರತೀಯ ದುಡಿಯುವ ವರ್ಗದ ಸಮೀಕ್ಷೆ 2023 (ಸ್ಟೇಟ್‌ ಆಫ್‌ ವರ್ಕಿಂಗ್‌ ಇಂಡಿಯಾ 2023) ಭಾರತದಲ್ಲಿ ಉದ್ಯೋಗಗಳು ಮತ್ತು ಜೀವನೋಪಾಯದ ಕುರಿತಂತೆ ಉತ್ತಮಸಂಗತಿಗಳನ್ನು ಒಳಗೊಂಡಿದೆ ಎನ್ನುವುದು ಸ್ಫೂರ್ತಿದಾಯಕವೂ ಆಗಿದೆ. ಎಸ್‌ ಡಬ್ಲ್ಯು ಐ (SWI)  ಕುರಿತಾದ ಸಂಶೋಧನೆಯನ್ನು ಯಾವಾಗಲೂ ಕಟ್ಟುನಿಟ್ಟಾಗಿ ನಡೆಸಲಾಗುತ್ತದೆ ಮತ್ತು ಅದು ಉದ್ಯೋಗಗಳ ಗುಣಮಟ್ಟ,  ಸಮಾನತೆ ಮತ್ತು ನ್ಯಾಯ ಮುಂತಾದ ಮೂಲಭೂತ ಅಂಶಗಳನ್ನು ಒಳಗೊಂಡಂತೆ ಹಲವು ಆಯಾಮಗಳಲ್ಲಿ ಪ್ರಗತಿಯನ್ನು ಸೂಚಿಸುತ್ತದೆ, ಅದರೊಂದಿಗೆ ಇದು ಇನ್ನೂ ಉಳಿದಿರುವ ಸವಾಲುಗಳತ್ತಲೂ ಬೆರಳು ಮಾಡುತ್ತದೆ” ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಉಪಕುಲಪತಿ, ಇಂದು ಪ್ರಸಾದ್ಹೇಳುತ್ತಾರೆ.

ಈ ವರದಿಯ ಪ್ರಮುಖ ಲೇಖಕ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರೊಫೆಸರ್ಅಮಿತ್ಬಸೋಲೆ “ಈ ವರದಿಯು  1980 ರ ದಶಕದಿಂದ ಈ ವರೆಗಿನ ಸುದೀರ್ಘ ಅವಧಿಯಲ್ಲಿ ನಡೆದ ಆರ್ಥಿಕ ಬೆಳವಣಿಗೆ,  ರಚನಾತ್ಮಕ ಬದಲಾವಣೆ ಮತ್ತು ಸಾಮಾಜಿಕ ಅಸಮಾನತೆಗಳ ನಡುವಿನ ಸಂಬಂಧದ ಆಳವಾದ ವಿಶ್ಲೇಷಣೆಯನ್ನು ನೀಡುತ್ತದೆ.ಇದರೊಂದಿಗೆ ಕಾರ್ಮಿಕ ಮಾರುಕಟ್ಟೆಯ ಮೇಲೆ ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಉಂಟಾದ ಅಲ್ಪಾವಧಿಯ ಪರಿಣಾಮಗಳನ್ನು ಪರಿಶೀಲಿಸುತ್ತದೆ.ಅಸಮಾನತೆಗಳನ್ನು ಮತ್ತಷ್ಟು ಕಡಿಮೆ ಮಾಡಲು ಮತ್ತು ಪ್ರಗತಿಯನ್ನು ಒಳಗೊಳ್ಳುವಿಕೆಯ ಪ್ರಕ್ರಿಯೆಯನ್ನಾಗಿ ಮಾಡಲು ನಮಗೆ ಈ ವರದಿಯು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎನ್ನುತ್ತಾರೆ.

ವರದಿಯ ಮುಖ್ಯಾಂಶಗಳು:

ತ್ವರಿತಗತಿಯ ರಚನಾತ್ಮಕ ಬದಲಾವಣೆ: 1980  ರ ವರೆಗೆ ಸ್ಥಿರವಾಗಿದ್ದ,  ನಿಯಮಿತ ಕೂಲಿ ಅಥವಾ ವೇತನದ ಕೆಲಸ ಹೊಂದಿದ್ದ ದುಡಿಯುವ ವರ್ಗದವರ ಪಾಲು 2004 ರಲ್ಲಿ ಹೆಚ್ಚಾಗ ತೊಡಗಿತು, ಈ ಪ್ರಮಾಣಪುರುಷರಲ್ಲಿ ಶೇಕಡ 18  ರಿಂದ  25  ಕ್ಕೆ ಮತ್ತು ಮಹಿಳೆಯರಲ್ಲಿ ಶೇಕಡ  10  ರಿಂದ  25  ಕ್ಕೆ ಏರಿತು. 2004 ಮತ್ತು 2017 ರ ನಡುವೆ, ವಾರ್ಷಿಕವಾಗಿ ನಿಯಮಿತ ವೇತನದ ಸುಮಾರು 3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲಾಯಿತು.  ಇದು 2017 ಮತ್ತು 2019 ರ ನಡುವೆ ಉದ್ಯೋಗ ಸೃಷ್ಟಿ, ವರ್ಷಕ್ಕೆ 5 ಮಿಲಿಯನ್‌ಗೆ ಏರಿತು. 2019 ರಿಂದ, ಪ್ರಗತಿಯಲ್ಲಿ ಹಿಂಜರಿತ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ನಿಯಮಿತ ವೇತನದ ಉದ್ಯೋಗಗಳ ಸೃಷ್ಟಿಯ ವೇಗಕಡಿಮೆಯಾಯಿತು.

ಮೇಲ್ಮುಖಚಲನೆ ಹೆಚ್ಚಿದೆ: 2004 ರಲ್ಲಿ, ಶೇಕಡ 80  ಕ್ಕಿಂತ ಹೆಚ್ಚು ಸಾಂದರ್ಭಿಕ ಕೂಲಿ ಕಾರ್ಮಿಕರ ಗಂಡು ಮಕ್ಕಳು ಸಾಂದರ್ಭಿಕ ಉದ್ಯೋಗಗಳಲ್ಲಿದ್ದರು.ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ಮತ್ತು ಇತರ ಜಾತಿಗೆ ಸೇರಿದ ಕಾರ್ಮಿಕರು ಎರಡೂ ವರ್ಗಗಳಲ್ಲಿ ಸಾಮಾನ್ಯವಾಗಿತ್ತು. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರದ ಜಾತಿಗಳಲ್ಲಿ,  2018 ರ ವೇಳೆಗೆ ಈ ಪ್ರಮಾಣ ಶೇಕಡ 83 ರಿಂದ 53 ಕ್ಕೆ ಇಳಿದಿದೆ ಮತ್ತು ನಿಯಮಿತ ವೇತನದ ಉದ್ಯೋಗಗಳಂತಹ ಉತ್ತಮ-ಗುಣಮಟ್ಟದ ವೃತ್ತಿಗಳಲ್ಲಿ ಅವರ ಉಪಸ್ಥಿತಿ ಹೆಚ್ಚಿದೆ.  ಇದೇ ಬದಲಾವಣೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದಲ್ಲಿಯೂ ಕಂಡುಬಂದಿದ್ದರೂ, ಅಲ್ಲಿ ಈ ಇಳಿಕೆಯ ಪ್ರಮಾಣ ಸ್ವಲ್ಪ ಮಟ್ಟಿಗೆ (86% ರಿಂದ 76%) ಮಾತ್ರ ಕಂಡು ಬರುತ್ತದೆ.

ಇದನ್ನೂ ಓದಿ: ಚುನಾವಣೆಯಲ್ಲಿ ಕುಕ್ಕರ್, ಐರನ್ ಬಾಕ್ಸ್ ಹಂಚಿಕೆ: ಚುನಾವಣೆ ಆಯೋಗದ ಕ್ರಮಕ್ಕೆ ಬೊಮ್ಮಾಯಿ ಆಗ್ರಹ

ಜಾತಿ ಆಧಾರಿತ ಪ್ರತ್ಯೇಕತೆ ಕಡಿಮೆ ಯಾಗಿದೆ: 1980 ರ ದಶಕದ ಆರಂಭದಲ್ಲಿ, ಪರಿಶಿಷ್ಟ ಜಾತಿಯ ಕಾರ್ಮಿಕರು ತ್ಯಾಜ್ಯ-ಸಂಬಂಧಿತ ಕೆಲಸಗಳಲ್ಲಿ ಐದು ಪಟ್ಟು ಹೆಚ್ಚು ಮತ್ತು ಚರ್ಮಕ್ಕೆ ಸಂಬಂಧಿಸಿದ ಕೆಲಸದಲ್ಲಿ ನಾಲ್ಕು ಪಟ್ಟು ಹೆಚ್ಚು ಪ್ರಾತಿನಿಧ್ಯ ಹೊಂದಿದ್ದರು. ಇದು 2021-22 ರ ಹೊತ್ತಿಗೆ, ಸಂಪೂರ್ಣವಾಗಿ ನಿರ್ಮೂಲ ವಾಗದಿದ್ದರೂ, ಕಾಲಾನಂತರದಲ್ಲಿ ವೇಗವಾಗಿ ಕ್ಷೀಣಿಸಿದೆ. ಚರ್ಮೋದ್ಯಮದಲ್ಲಿ ಪ್ರಾತಿನಿಧ್ಯ ಸೂಚ್ಯಂಕವು 2021 ರಲ್ಲಿ 1.4 ಕ್ಕೆ ತೀವ್ರವಾಗಿ ಕುಸಿಯಿತು. ತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ಕ್ಷೇತ್ರದಲ್ಲಿ, 2011 ರಲ್ಲಿ 1.6 ಪಟ್ಟು ಕಡಿಮೆಯಾಗಿದ್ದು ಇತ್ತೀಚೆಗೆ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯದಲ್ಲಿ ಏರಿಕೆ ಕಾಣುತ್ತಿದೆ. 

ಲಿಂಗ-ಆಧಾರಿತ ಗಳಿಕೆಯ ಅಸಮಾನತೆಗಳು ಇಳಿಮುಖಗೊಂಡಿವೆ: 2004 ರಲ್ಲಿ, ವೇತನ ಪಡೆಯುವ ಮಹಿಳಾ ಉದ್ಯೋಗಿಗಳು ಪುರುಷರು ಗಳಿಸುವ ವೇತನದ ಶೇಕಡ 70 ರಷ್ಟನ್ನು ಗಳಿಸಿದ್ದಾರೆ. 2017 ರ ಹೊತ್ತಿಗೆ,  ಈ ಅಂತರವು ಕಡಿಮೆಯಾಗಿ ಪುರುಷರ ವೇತನದ ಶೇಕಡ 76 ರಷ್ಟನ್ನು ಗಳಿಸಲು ಮಹಿಳೆಯರು ಶಕ್ತರಾದರು. ಅಂದಿನಿಂದ, 2021-22 ರ ವರೆಗೆ ಈ ಅಂತರವು ಸ್ಥಿರವಾಗಿದೆ.

ಪ್ರಗತಿ ಮತ್ತು ಉತ್ತಮ ಉದ್ಯೋಗಗಳ ನಡುವಿನ ಸಂಪರ್ಕವು ದುರ್ಬಲವಾಗಿಯೇ ಉಳಿದಿದೆ: 1990 ರ ದಶಕದಿಂದಲೂ, ವರ್ಷದಿಂದ ವರ್ಷಕ್ಕೆ ಕೃಷಿಯೇತರ ಜಿಡಿಪಿ ಬೆಳವಣಿಗೆ ಮತ್ತು ಕೃಷಿಯೇತರ ಉದ್ಯೋಗದ ಬೆಳವಣಿಗೆಯು ಪರಸ್ಪರ ಸಂಬಂಧಹೊಂದಿಲ್ಲ.  ಇದು ತ್ವರಿತ ಪ್ರಗತಿಯನ್ನು ಉತ್ತೇಜಿಸುವ ನೀತಿಗಳು ವೇಗವಾಗಿ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಅಗತ್ಯವಿಲ್ಲ ಎಂದು ಸೂಚಿಸುತ್ತದೆ.ಇದರ ಹೊರತಾಗಿಯೂ 2004 ಮತ್ತು 2019 ರ ನಡುವೆ, ಸರಾಸರಿ ಪ್ರಗತಿಯು ಯೋಗ್ಯ ಉದ್ಯೋಗ ಸೃಷ್ಟಿಗೆ ಕಾರಣೀಭೂತವಾಗಿದೆ. ಆದರೆ ಈ ಪ್ರಕ್ರಿಯೆಗೆ ಕೋವಿಡ್‌ ಸಾಂಕ್ರಾಮಿಕವು ಅಡ್ಡಿಪಡಿಸಿತು.  ಇದು ಸಂಕಷ್ಟಮಯ ಉದ್ಯೋಗದ ಬೃಹತ್ಹೆಚ್ಚಳಕ್ಕೆಕಾರಣವಾಯಿತು.

ನಿರುದ್ಯೋಗ ಪ್ರಮಾಣ ಇಳಿಕೆ ಯಾಗುತ್ತಿದ್ದರೂ ಒಟ್ಟಾರೆ ನಿರುದ್ಯೋಗ ಪ್ರಮಾಣ ಹೆಚ್ಚಾಗಿಯೇ ಇದೆ: ಕೋವಿಡ್ನಂತರದ ನಿರುದ್ಯೋಗ ದರವು ಎಲ್ಲಾ ಶೈಕ್ಷಣಿಕ ಹಂತಗಳಲ್ಲಿಯೂ ಕೋವಿಡ್‌ ಪೂರ್ವ ಸಂದರ್ಭಕ್ಕಿಂತ ಕಡಿಮೆಯಾಗಿದೆ.ಆದರೆ ಪದವೀಧರರಲ್ಲಿ ಈ ನಿರುದ್ಯೋಗ ಪ್ರಮಾಣ ಶೇಕಡ 15 ಕ್ಕಿಂತ ಹೆಚ್ಚಾಗಿದೆ ಮತ್ತು ಇದು 25 ವರ್ಷದೊಳಗಿನಶೇಕಡ 42 ರಷ್ಟು ಪದವೀಧರರನ್ನು ಒಳಗೊಳ್ಳುತ್ತದೆ ಎಂಬುದು ಹೆಚ್ಚು ಆತಂಕಕಾರಿ ವಿಷಯವಾಗಿದೆ.

ಹಲವು ವರ್ಷಗಳ ಕುಸಿತದ ನಂತರ, ಮಹಿಳೆಯರ ಡಬ್ಲ್ಯುಪಿಆರ್‌ (WPR) ಏರುತ್ತಿದೆ, ಆದರೆ ಸೂಕ್ತ ಕಾರಣಗಳಿಗಾಗಿ ಅಲ್ಲ:  2004 ರ ವರೆಗೆ ಕುಸಿತ ಅಥವಾಸ್ಥಿರತೆ ಕಂಡ ಮಹಿಳಾ ಉದ್ಯೋಗವು, ಈ ನಡುವಿನ ಕೆಲವು ಜಾಗತಿಕ ಸಮಸ್ಯೆಗಳ ಪರಿಣಾಮವಾಗಿ ಸ್ವಯಂ-ಉದ್ಯೋಗಗಳಲ್ಲಿ ಮಹಿಳಾ ಉದ್ಯೋಗ ದರ 2019 ರಿಂದ ಏರಿಕೆ ಕಂಡಿದೆ. ಕೋವಿಡ್ಗೆಮೊದಲು, ಶೇಕ 50 ರಷ್ಟು ಮಹಿಳೆಯರು ಸ್ವಯಂಉದ್ಯೋಗಿಗಳಾಗಿದ್ದರು. ಕೋವಿಡ್ನಂತರ ಇದು ಶೇಕಡ 60 ಕ್ಕೆ ಏರಿತು. ಪರಿಣಾಮವಾಗಿ, ಈ ಅವಧಿಯಲ್ಲಿ ಸ್ವಯಂ-ಉದ್ಯೋಗದಿಂದ ಗಳಿಕೆಯು ನಿಜವಾಗಿಯೂ ಕುಸಿಯಿತು. 2020 ರ ಲಾಕ್‌ಡೌನ್‌ ನ ಎರಡು ವರ್ಷಗಳ ನಂತರವೂ, ಸ್ವ-ಉದ್ಯೋಗದ ಗಳಿಕೆಗಳು ಏಪ್ರಿಲ್-ಜೂನ್ 2019 ತ್ರೈಮಾಸಿಕದ ಅವಧಿಯಲ್ಲಿ ಇದ್ದಪ್ರಮಾಣದಶೇಕಡ 85 ರಷ್ಟು ಮಾತ್ರ ಇವೆ.

ಮಹಿಳಾ ಉದ್ಯೋಗ ಕ್ಷೇತ್ರದಲ್ಲಿ ಲಿಂಗ- ಆಧಾರಿತ ಕಟ್ಟು ಪಾಡುಗಳು ಇನ್ನೂ ಮಹತ್ತರ ಪಾತ್ರವಹಿಸುತ್ತಿವೆ: ಗಂಡನ ಆದಾಯವು ಹೆಚ್ಚಾದಂತೆಲ್ಲ, ಮಹಿಳೆಯರು ಕೆಲಸ ಮಾಡುವ ಸಾಧ್ಯತೆ ಕಡಿಮೆ ಯಾಗುತ್ತದೆ. ನಗರ ಪ್ರದೇಶಗಳಲ್ಲಿ,  ಗಂಡನ ಆದಾಯವು ತಿಂಗಳಿಗೆ ರೂ 40,000 ದಾಟಿದನಂತರ, ಪತ್ನಿಯರು ಕೆಲಸ ಮಾಡುವ ಅವಕಾಶ ಮತ್ತೆ ಹೆಚ್ಚಾಗುತ್ತದೆ ( ಅಂದರೆ ಇವೆರಡರ ನಡುವೆ  U- ಆಕಾರದ ಸಂಬಂಧವಿದೆ).ಇದರೊಂದಿಗೆ ತಲೆತಲಾಂತರದಿಂದ ಬಂದಿರುವ ಲಿಂಗಾಧಾರಿತ ಕಟ್ಟುಪಾಡುಗಳ ಪ್ರಭಾವವೂ ಇದೆ. ಅತ್ತೆ ಇಲ್ಲದ ಮನೆಗಳಿಗೆ ಹೋಲಿ ಸಿದರೆ, ಅತ್ತೆ ಇದ್ದು, ಅತ್ತೆ ಕೆಲಸಕ್ಕೆ ಹೋಗದಿದ್ದರೆ,  ಸೊಸೆಯಂದಿರು ಉದ್ಯೋಗಕ್ಕೆ ಸೇರುವ ಸಾಧ್ಯತೆ ಶೇಕಡ 20 (ಗ್ರಾಮೀಣ) ರಿಂದ 30 (ನಗರ) ರಷ್ಟು ಕಡಿಮೆ. ಅದೇ,  ಅತ್ತೆಯೇ ಸ್ವತಃ ಉದ್ಯೋಗದಲ್ಲಿದ್ದರೆ, ಶೇಕ 50 (ಗ್ರಾಮೀಣ) ರಿಂದ 70 (ನಗರ) ರಷ್ಟು ಸೊಸೆಯಂದಿರು ಉದ್ಯೋಗದಲ್ಲಿರುವ ಸಾಧ್ಯತೆಯಿದೆ.

ಕೆಳ ಜಾತಿಗಳಲ್ಲಿ ಉದ್ಯಮಿಗಳು ಇನ್ನೂ ಅಪರೂಪ:  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ಉದ್ಯೋಗಿಗಳ ಪಾಲನ್ನು ಹೋಲಿಸಿದರೆ,ಈ ವರ್ಗಕ್ಕೆ ಸೇರಿದ ಕಾರ್ಮಿಕರು ಚಿಕ್ಕದಾದ ಸಂಸ್ಥೆಗಳಲ್ಲಿಯೂ ಸಹ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಇನ್ನೂ ಗಮನಿಸಬೇಕಾದ ಅಂಶ ವೆಂದರೆ 20 ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳನ್ನು ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಾಲೀಕರ ಸಂಖ್ಯೆಯು ಗಣನೀಯವಾಗಿ ಕಡಿಮೆ ಇದೆ. ಇದಕ್ಕೆ ಅನುಗುಣವಾಗಿ, ಸಂಸ್ಥೆಯ ಗಾತ್ರದೊಂದಿಗೆ ಮೇಲ್ಜಾತಿಯ ಪ್ರಾತಿನಿಧ್ಯವೂ ಹೆಚ್ಚಾಗಿದೆ.

ಎಸ್‌ ಡಬ್ಲ್ಯು ಐ ನ 2023 ವರದಿಯು ಹಿಂದಿನ ವರ್ಷದ ವರದಿಗಳ ಜೊತೆಗೆ ನಮ್ಮ ವೆಬ್‌ ಸೈಟ್‌ನಲ್ಲಿ ಲಭ್ಯವಿದೆ.ವರದಿಯಲ್ಲಿ ಪ್ರಸ್ತುತ ಪಡಿಸಲಾದ ವಿಶ್ಲೇಷಣೆಯು ನೀತಿ ನಿರೂಪಕರು, ಸಂಶೋಧಕರು,  ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗಬಲ್ಲುದು ಎಂದು ನಾವು ಆಶಿಸುತ್ತೇವೆ

ಮಾಧ್ಯಮ ಸಂಬಂಧಿತ ಮಾಹಿತಿಗೆ ಸಂಪರ್ಕಿಸಿ:
ಅಮಿತ್ಬಸೋಲೆ| ಇ-ಮೇಲ್‌: amit.basole@apu.edu.in | +91-9619649958
ರೋಸಾ ಅಬ್ರಹಾಂ| ಇ-ಮೇಲ್‌: rosa.abraham@apu.edu.in | +91-9901957009
ಸುಮಿತ್ಜೈನ್ | ಇ-ಮೇಲ್‌: sumit.jain@k2communications.in| +91 9886021715

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಕುರಿತು
ಅಜೀಂ ಪ್ರೇಮ್‍ಜಿ ವಿಶ್ವ ವಿದ್ಯಾಲಯವನ್ನು ಕರ್ನಾಟಕ ಸರಕಾರದ 2010 ರ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ ಕಾಯಿದೆಯಡಿಯಲ್ಲಿ ಸ್ಥಾಪಿಸಲಾಗಿದೆ. ಅಜೀಂ ಪ್ರೇಮ್‍ಜಿ ಫೌಂಡೇಷನ್ಸ್ಥಾಪಿಸಿರುವ ಈ  ವಿಶ್ವ ವಿದ್ಯಾಲಯವು ಸಂಪೂರ್ಣವಾಗಿ ಸಮಾಜೋಪಕಾರಿ ಉದ್ದೇಶವನ್ನು ಹೊಂದಿದ್ದು, ಲಾಭದ ಉದ್ದೇಶವಿಲ್ಲದ ಸಂಸ್ಥೆಯಾಗಿದೆ. ವಿಶ್ವ ವಿದ್ಯಾಲಯವು ಸ್ಪಷ್ಟವಾದ ಸಾಮಾಜಿಕ ಗುರಿಯನ್ನು ಹೊಂದಿದ್ದು ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News