ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಆರಂಭ: ಎರಡು ವರ್ಷಗಳ ಬಳಿಕ ಕಳೆಗಟ್ಟಿದ ಸಂಭ್ರಮ

ಕೊರೊನಾ ಕರಿಛಾಯೆಯಿಂದಾಗಿ ಕಳೆದ ಎರಡು ವರ್ಷವೂ ಸರಳ, ಸಾಂಪ್ರದಾಯಿಕವಾಗಿ ನಡೆದಿದ್ದ ಜಾತ್ರೆ ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ.  

Written by - Zee Kannada News Desk | Last Updated : Mar 29, 2022, 10:40 AM IST
  • ಮಲೆಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಯುಗಾದಿ ಜಾತ್ರೆ
  • ಏ.2 ರವರೆಗೆ ನಡೆಯಲಿದೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು
  • ಮಲೆಮಹದೇಶ್ವರ ಬೆಟ್ಟ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಆರಂಭ: ಎರಡು ವರ್ಷಗಳ ಬಳಿಕ ಕಳೆಗಟ್ಟಿದ ಸಂಭ್ರಮ title=
ಮಲೆಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಯುಗಾದಿ ಜಾತ್ರೆ

ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ (Malemahadeshwara betta) ಇಂದಿನಿಂದ ಯುಗಾದಿ ಜಾತ್ರೆ ಆರಂಭಗೊಂಡಿದೆ (Ugadi Jatre). ಈ ಹಿನ್ನೆಲೆಯಲ್ಲಿ  ಏ.2 ರವರೆಗೆ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಕೊರೊನಾ (Coronavirus) ಕರಿಛಾಯೆಯಿಂದಾಗಿ ಕಳೆದ ಎರಡು ವರ್ಷವೂ ಸರಳ, ಸಾಂಪ್ರದಾಯಿಕವಾಗಿ ನಡೆದಿದ್ದ ಜಾತ್ರೆ ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ.  ಮೈಸೂರು ದಸರಾ (Mysuru Dasara) ಮಾದರಿಯಲ್ಲಿ ದೇವಾಲಯ ಆವರಣ, ರಸ್ತೆಗಳು, ಮರಗಳಿಗೆ ದೀಪಾಲಂಕಾರ ಮಾಡಿದ್ದು ಇಡೀ ಮಲೆಮಹದೇಶ್ವರ ಬೆಟ್ಟ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ. 

ಇದನ್ನೂ ಓದಿ : Roof Collapse: ಮನೆಯ ತಾರಸಿ ಕುಸಿದು ಇಬ್ಬರ ಸಾವು, 50 ಕ್ಕೂ ಹೆಚ್ಚಿನ ಜನರಿಗೆ ಗಾಯ

ಇಂದು ದೇವರಿಗೆ ನಸುಕಿನ ಜಾವವೇ ವಿಶೇಷ ಪೂಜೆ ನಡೆಸುವ ಮೂಲಕ ಜಾತ್ರೆ ಆರಂಭಗೊಂಡಿದೆ. 30 ರಂದು  ಎಣ್ಣೆ ಮಜ್ಜನ ಸೇವೆ, 31 ರಂದು ಮಲೆಮಹದೇಶ್ವರನಿಗೆ ವಿಶೇಷ ಅಲಾಂಕಾರ ಮತ್ತು ಸೇವೆಗಳು,  ಏಪ್ರಿಲ್ 01 ರಂದು ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಮತ್ತು ಏ 02 ರ ಶುಕ್ರವಾರ ಬೆಳಿಗ್ಗೆ 7.30 ರಿಂದ 9ರ ನಡುವೆ ಮಹಾ ರಥೋತ್ಸವ ಜರುಗಲಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಬೇಸಿಗೆ (Summer) ಕಾಲವಾದ್ದರಿಂದ ಭಕ್ತರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನಿರಂತರ ಅನ್ನ ದಾಸೋಹ (Anna Dasoha) ವ್ಯವಸ್ಥೆಯನ್ನು ಮಾಡಲಾಗಿದೆ.  ಧಾರ್ಮಿಕ ಹಬ್ಬವಾಗಿ ಆಚರಿಸಬೇಕು ಎಂದು ಮುಜರಾಯಿ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ರಥೋತ್ಸವ ದಿನದಂದು ದೊಡ್ಡ ಮಟ್ಟದಲ್ಲಿ  ಭಕ್ತರಿಗೆ ಬೇವು ಬೆಲ್ಲ ವಿತರಿಸಲು ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ‌.

ಇದನ್ನೂ ಓದಿ : ರೈತರಿಗೆ ಸಿಹಿಸುದ್ದಿ: 13 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ಮತ್ತೊಮ್ಮೆ ಅವಕಾಶ

ಇನ್ನು, ಯುಗಾದಿ ಜಾತ್ರೆಗೆ (Ugadi Jatre) ತಮಿಳುನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದು ತಾವು ಬೆಳೆದ ಬೆಳೆಯನ್ನು ದೇವರಿಗೆ ಅರ್ಪಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News