ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ನಿಧನ

ಯಶ್‌ರನ್ನು ನೋಡಲು ಬೆಂಗಳೂರಿನ ಅವರ ಮನೆ ಮುಂದೆ ಹೋಗಿದ್ದ ರವಿ ನೆಚ್ಚಿನ ನಟನನ್ನು ಕಾಣಲು ಸಾಧ್ಯವಾಗದ ಹತಾಶೆಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

Last Updated : Jan 9, 2019, 10:32 AM IST
ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ನಿಧನ title=

ಬೆಂಗಳೂರು: ನೆಚ್ಚಿನ ನಟನನ್ನು ಕಾಣಲು ಸಾಧ್ಯವಾಗದ ಹತಾಶೆಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ರವಿ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಾಕಿಂಗ್​ ಸ್ಟಾರ್ ಯಶ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಯಶ್‌ ನೋಡಲು ನೆಲಮಂಗಲ ತಾಲೂಕಿನ ಶಾಂತಿನಗರದ ನಿವಾಸಿ ರವಿ ಹೊಸಕೆರೆಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ ನೆಚ್ಚಿನ ನಟನನ್ನು ಕಾಣಲು ಸಾಧ್ಯವಾಗದ ಹತಾಶೆಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.  ತೀವ್ರವಾಗಿ ಗಾಯಗೊಂಡ ಅಭಿಮಾನಿ ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು.

ಮಂಗಳವಾರ ಸಂಜೆ ಯಶ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ರವಿ ಅವರ ಆರೋಗ್ಯ ವಿಚಾರಿಸಿದ್ದರು. ಆದರೆ ಅಧಿಕ ಸುಟ್ಟ ನೋವುಗಳಿಂದ ಬಳಲುತ್ತಿದ್ದ ರವಿ ಚಿಕಿತ್ಸೆ ಫಲಕಾರಿಯಾಗದೆ ರವಿ ಮೃತಪಟ್ಟಿದ್ದಾರೆ.
 

Trending News