Tulsi Care Tips: ತುಳಸಿ ಸಸ್ಯಗಳು, ಸಾಮಾನ್ಯವಾಗಿ ಗಿಡಮೂಲಿಕೆಗಳಲ್ಲಿ ಅಗತ್ಯವಾಗಿ ಬಳಸುವ ವಸ್ತವಾಗಿದೆ. ಯಾವುದೇ ಹಿಂದೂಗಳ ಮನೆಯಲ್ಲಿ ತುಳಸಿ ಗಿಡ ಸಾಮಾನ್ಯವಾಗಿರುತ್ತದೆ. ಬಹುತೇಕ ಎಲ್ಲಾ ಹಿಂದೂಗಳು ತುಳಸಿ ಗಿಡವನ್ನು ಪೂಜಿಸುತ್ತಾರೆ ಮತ್ತು ಅದು ನಾಶವಾಗದಂತೆ ನೋಡಿಕೊಳ್ಳುತ್ತಾರೆ. ಆದಾಗ್ಯೂ, ಅನೇಕ ಜನರು ತಮ್ಮ ಮನೆಯಲ್ಲಿನ ಸಸ್ಯ ಪದೇ ಪದೇ ಒಣಗುವ ಬಗ್ಗೆ ದೂರುತ್ತಿರುತ್ತಾರೆ. ಆದ್ದರಿಂದ, ತುಳಸಿ ಗಿಡ ಒಣಗುವುದನ್ನು ತಪ್ಪಿಸಲು ಈ ವಿಧಾನಗಳನ್ನು ಬಳಸಿ.
ಬೇಸಿಗೆಯಲ್ಲಿ ತುಳಸಿ ಗಿಡಗಳನ್ನು ರಕ್ಷಿಸಲು 5 ಮಾರ್ಗಗಳು:
ಹಗಲಿನ ಸಮಯದಲ್ಲಿ ತುಳಸಿ ಸಸ್ಯಕ್ಕೆ ಕನಿಷ್ಟ ಆರರಿಂದ ಎಂಟು ಗಂಟೆಗಳ ಸೂರ್ಯನ ಬೆಳಕು ಮತ್ತು ತಾಪಮಾನದ ಅಗತ್ಯವಿರುತ್ತದೆ. ಉತ್ತಮ ಬೆಳವಣಿಗೆಗಾಗಿ, ಹೆಚ್ಚು ಸೂರ್ಯನ ಬೆಳಕನ್ನು ಪಡೆಯುವ ಸ್ಥಳವನ್ನು ಆಯ್ಕೆಮಾಡಿ, ಅಲ್ಲಿ ತುಳಸಿ ಗಿಡವನ್ನು ಇಡಿ. ಒಂದು ವೇಳೆ ಅತಿಯಾದ ಬಿಸಿಲಿದ್ದರೆ ಹೆಚ್ಚಿನ ತಾಪಮಾನದಿಂದ ರಕ್ಷಿಸಲು ನೆರಳಿನಲ್ಲಿಡಿ.
ಇದನ್ನೂ ಓದಿ: Astro Tips: ಭಾಗ್ಯದ ಸಾಥ್ ಪಡೆಯಲು ಇಂದಿನಿಂದಲೇ ಈ ಕೆಲಸ ಆರಂಭಿಸಿ
ಈ ಸಸ್ಯಕ್ಕೆ ಯಾವುದೇ ನಿರ್ದಿಷ್ಟ ಮಣ್ಣಿನ ಅವಶ್ಯಕತೆಗಳಿಲ್ಲ. ಇದು ಯಾವುದೇ ಮಣ್ಣಿನಲ್ಲಿ ಬೆಳೆಯಬಹುದು, ಅತಿಯಾದ ಲವಣಯುಕ್ತ, ಕ್ಷಾರೀಯ ಅಥವಾ ನೀರಿನಿಂದ ತುಂಬಿರುವಂತಹವುಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಜಾಗದಲ್ಲಿ ತುಳಸಿ ಉತ್ತಮವಾಗಿ ಬೆಳೆಯುತ್ತದೆ. ತುಳಸಿ ಸಸ್ಯಗಳು ಸಾಕಷ್ಟು ಸಾವಯವ ಪದಾರ್ಥಗಳೊಂದಿಗೆ ಮರಳು ಮಿಶ್ರಿತ ಲೋಮ್ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ.
ಬೇಸಿಗೆಯಲ್ಲಿ ಹೆಚ್ಚು ನೀರನ್ನು ಹಾಕಬಾರದು. ತುಳಸಿ ಗಿಡದಲ್ಲಿ ಹೆಚ್ಚು ನೀರು ನಿಂತರೆ ಹೆಚ್ಚು ಕೀಟಗಳನ್ನು ಆಕರ್ಷಿಸುತ್ತದೆ. ಬೇಸಿಗೆಯಲ್ಲಿ ಬಿಸಿಯಾಗಿರುವ ನೀರನ್ನು ಸುರಿಯುವುದನ್ನು ತಪ್ಪಿಸಿ. ಇದು ಗಿಡಕ್ಕೆ ಹಾನಿಯನ್ನುಂಟು ಮಾಡುತ್ತದೆ.
ಎಲೆಗಳನ್ನು ಸ್ವಲ್ಪ ಕತ್ತರಿಸುವುದು ಬದುಕಲು ಸಹಾಯ ಮಾಡುತ್ತದೆ. ಸಸ್ಯದ ಮೇಲಿನ ಭಾಗಕ್ಕೆ ಪೋಷಣೆಯನ್ನು ರವಾನಿಸಲು ಸಹಾಯ ಮಾಡಲು ಚೂಪಾದ ಚಾಕುವಿನಿಂದ ಬೇರುಗಳನ್ನು ಕೊರೆಯಿರಿ.
ಇದನ್ನೂ ಓದಿ: White Hair Problem: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸರಳ ಮನೆಮದ್ದು
ಸಸ್ಯಗಳನ್ನು ಬೆಚ್ಚಗಿನ ತಾಪಮಾನದಲ್ಲಿ ಇರಿಸಲು ಪ್ರಯತ್ನಿಸಿ. ಆದರೆ ತುಂಬಾ ಬಿಸಿಯಾದ ತಾಪಮಾನದಲ್ಲಿ ಅಲ್ಲ. ಇದು ಸಸ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಈ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಕೆಲವೊಮ್ಮೆ ತುಳಸಿ ಸಸ್ಯಗಳನ್ನು ಬಿಸಿ ತಾಪಮಾನದಲ್ಲಿ ಇರಿಸಿದಾಗ ಒಣಗುತ್ತವೆ. ತಾಪಮಾನವನ್ನು ಕಡಿಮೆ ಮಾಡಲು, ನೀವು ಸಸ್ಯಗಳನ್ನು ಮನೆಯ ಒಳಗೆ ಸರಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.