ಬೇಸಿಗೆಯಲ್ಲಿ ಅರಿಶಿನ ಬಳಕೆಯಿಂದ ತ್ವಚೆಯಲ್ಲಾಗುವ ಬದಲಾವಣೆಗಳು : ಇಲ್ಲಿವೆ ತಿಳಿದುಕೊಳ್ಳಿ

Changes in the skin : ಬಿಸಿಲಿನ ಝಳ ಹೆಚ್ಚಿರುವದರಿಂದ ಮುಖದ ಮೇಲೆ ಹಲವು ಬದಲಾವಣೆಗಳನ್ನು ನಾವು ಕಾಣುತ್ತೇವೆ ಆಂತಹ ಸಂದರ್ಭಗಳಲ್ಲಿ ತಮ್ಮ ಸೌಂದರ್ಯವನ್ನು ಆ ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಅದಕ್ಕಾಗಿ ಇಲ್ಲಿದೆ ಒಂದು ಉಪಾಯ 

Written by - Zee Kannada News Desk | Last Updated : Feb 28, 2024, 12:09 AM IST
  • ಬಿಸಿಲಿನಿಂದ ತಮ್ಮ ಸೌಂದರ್ಯವನ್ನು ರಕ್ಷಿಸಿಕೊಳ್ಳಲು ಅರಿಶಿನ ತುಂಬಾ ಸಹಕಾರಿಯಾಗುತ್ತದೆ
  • ಬಹಳಷ್ಟು ಮನೆ ಮದ್ದುಗಳಲ್ಲಿ ಬಳಕೆಯಾಗುವುದರಿಂದ ಗಿಡದ ಬುಡದಿಂದ ಅಗೆದು ಅರಿಶಿನ ತಂದು ಉಪಯೋಗಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ.
  • ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಸೌಂದರ್ಯ ವರ್ಧಕಗಳು ಬಂದಿವೆ.
ಬೇಸಿಗೆಯಲ್ಲಿ ಅರಿಶಿನ ಬಳಕೆಯಿಂದ ತ್ವಚೆಯಲ್ಲಾಗುವ ಬದಲಾವಣೆಗಳು : ಇಲ್ಲಿವೆ ತಿಳಿದುಕೊಳ್ಳಿ title=

use of turmeric in summer : ಬಿಸಿಲಿನಿಂದ ತಮ್ಮ ಸೌಂದರ್ಯವನ್ನು ರಕ್ಷಿಸಿಕೊಳ್ಳಲು ಅರಿಶಿನ ತುಂಬಾ ಸಹಕಾರಿಯಾಗುತ್ತದೆ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಇದು ಬಹು ಉಪಯೋಗಕಾರಿಯಾಗಿದೆ. ಅದರ ಮಹತ್ವ ಅರಿತು ದಿನ ನಿತ್ಯ ಬಳಕೆ ಮಾಡಿದರೆ ಬೇಸಿಗೆಯಲ್ಲಿ ತ್ವಚೆಯ ಸುಂದರತೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಆರೋಗ್ಯವಾಗಿರಲು ಸಾಧ್ಯವಾಗಲಿದೆ.

 ಬಹಳಷ್ಟು ಮನೆ ಮದ್ದುಗಳಲ್ಲಿ ಬಳಕೆಯಾಗುವುದರಿಂದ ಗಿಡದ ಬುಡದಿಂದ ಅಗೆದು ಅರಿಶಿನ ತಂದು ಉಪಯೋಗಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಸಾಮಾನ್ಯವಾಗಿ ಮಲೆನಾಡಿನ ಹೆಚ್ಚಿನ ಮನೆಗಳ ಹಿತ್ತಲಿನಲ್ಲಿ ಅರಿಶಿನದ ಗಿಡ ಇದ್ದೇ ಇರುತ್ತದೆ. ಇದನ್ನು ಇಲ್ಲಿನವರು ವಾಣಿಜ್ಯ ಉದ್ದೇಶಕ್ಕೆ ಬೆಳೆಯದಿದ್ದರೂ ತಮ್ಮ ಉಪಯೋಗಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ದೇಹದ ಆರೋಗ್ಯ ಮತ್ತು ಚರ್ಮದ ರಕ್ಷಣೆ ಹಾಗೂ ಸೌಂದರ್ಯ ಕಾಪಾಡುವುದರಲ್ಲಿ ಇದರ ಮುಂದೆ ಎಲ್ಲ ಸೌಂದರ್ಯ ವರ್ಧಕಗಳು ಗೌಣವಾಗಿಬಿಡುತ್ತವೆ.

ಇದನ್ನು ಓದಿ : ಭಾರತೀಯ ನೌಕಾದಳದಲ್ಲಿ ಉದ್ಯೋಗವಕಾಶ; ಇಂದೇ ಅರ್ಜಿ ಸಲ್ಲಿಸಿರಿ

 ಮದುವೆ ಶುಭಸಮಾರಂಭದಲ್ಲಿ ಅರಿಶಿನಕ್ಕೆ ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲ ವಧು-ವರರನ್ನು ಇಂದಿಗೂ ಅರಿಶಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸುವ ಸಂಪ್ರದಾಯವಿದೆ ಕಾರಣ ವಿವಾಹದ ಸಂದರ್ಭ ಕಾಂತಿಯುತವಾಗಿ ಕಾಣಲಿ ಎಂಬ ಉದ್ದೇಶ ಇದಾಗಿದೆ.ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಸೌಂದರ್ಯ ವರ್ಧಕಗಳು ಬಂದಿವೆ. ಮೊದಲೆಲ್ಲ ಸೌಂದರ್ಯ ವರ್ಧಕವಾಗಿ ಮನೆಯ ಸುತ್ತ ಸಿಗುತ್ತಿದ್ದ ಗಿಡಮೂಲಿಕೆಗಳನ್ನೇ ಮಹಿಳೆಯರು ಬಳಸುತ್ತಿದ್ದರು. ಆಗ ಹೆಚ್ಚಾಗಿ ಬಳಕೆಯಾಗುತ್ತಿದ್ದದ್ದೇ ಅರಿಶಿನವಾಗಿದೆ.

ಅರಿಶಿನವನ್ನು ವಾರಕ್ಕೆ ನಾಲ್ಕು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಕಲೆಗಳನ್ನು ಮಾಯವಾಗುತ್ತವೆ. ಅರಿಶಿನದ ತುಂಡನ್ನು ಹಾಲಿನ ಕೆನೆಯಲ್ಲಿ ತೇಯ್ದು ಮುಖಕ್ಕೆ ಪ್ಯಾಕ್ ಹಾಕಿದ್ದರೆ ಮುಖದಲ್ಲಿನ ಮೊಡವೆ ಕಜ್ಜಿಗಳು ಗುಣವಾಗಿ ಮುಖ ಕಾಂತಿಯುವಾಗುತ್ತದೆ.ಅರಿಶಿನವನ್ನು ಉಪಯೋಗಿಸುವುದರ ಮೂಲಕ ಯಾವ ರೀತಿಯ ಉಪಯೋಗ ಪಡೆಯಬಹುದು ಮತ್ತು ಅದು ಸೌಂದರ್ಯ ವರ್ಧಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಆಯುರ್ವೇದದಲ್ಲಿ ಈ ಹಿಂದೆಯೇ ವಿವರಿಸಲಾಗಿದೆ. 

ಇದನ್ನು ಓದಿ : ದಾವಣಗೆರೆ : ಇತಿಹಾಸ ಪ್ರಸಿದ್ದ ಹರಿಹರೇಶ್ವರಸ್ವಾಮಿ ದೇವಸ್ಥಾನದ ಅರ್ಚಕರ ಹುದ್ದೆಗೆ ಅರ್ಜಿ ಆಹ್ವಾನ

ಅರಿಶಿವನ್ನು ಮನೆ ಬಳಿ ಒಂದಿಷ್ಟು ಜಾಗವಿದ್ದರೆ ಯಾರೂ ಬೇಕಾದರೂ ಬೆಳೆಸಿಕೊಂಡು ಉಪಯೋಗಿಸಿಕೊಳ್ಳಬಹುದಾಗಿದೆ. ಅಂಗಡಿಗಳಲ್ಲಿ ಒಣಗಿಸಿದ ಅರಿಶಿನದ ಕೊಂಬು ಅಥವಾ ಪುಡಿ ಸಿಗುತ್ತದೆಯಾದರೂ ತಾಜಾ ಅರಿಶಿನವನ್ನು ಬಳಸುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News