ಶುಕ್ರನ ಅನುಗ್ರಹದಿಂದ 16 ದಿನಗಳವರೆಗೆ, ಈ ರಾಶಿಚಕ್ರದ ಜನರು ಗಳಿಸುತ್ತಾರೆ ಅಪಾರ ಸಂಪತ್ತು

ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ. ಯಾರ ಮೇಲೆ  ಶುಕ್ರದೇವನ ಅನುಗ್ರಹವಿರುತ್ತದೆಯೋ, ಅವರು ಲಕ್ಷ್ಮೀಯ ಆಶೀರ್ವಾದವನ್ನೂ ಪಡೆಯುತ್ತಾರೆ.   

Written by - Zee Kannada News Desk | Last Updated : Feb 11, 2022, 04:21 PM IST
  • ದಾಂಪತ್ಯ ಜೀವನ ಸುಖಮಯವಾಗಿರುತ್ತದೆ
  • ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ
  • ಹಠಾತ್ ಧನಲಾಭವಾಗಲಿದೆ
ಶುಕ್ರನ ಅನುಗ್ರಹದಿಂದ 16 ದಿನಗಳವರೆಗೆ, ಈ ರಾಶಿಚಕ್ರದ ಜನರು ಗಳಿಸುತ್ತಾರೆ ಅಪಾರ ಸಂಪತ್ತು  title=
ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ (file photo)

ನವದೆಹಲಿ : ಜ್ಯೋತಿಷ್ಯದಲ್ಲಿ (Astrology) ಶುಕ್ರನಿಗೆ ವಿಶೇಷ ಸ್ಥಾನವಿದೆ. ಯಾರ ಮೇಲೆ  ಶುಕ್ರದೇವನ (Venus) ಅನುಗ್ರಹವಿರುತ್ತದೆಯೋ, ಅವರು ಲಕ್ಷ್ಮೀಯ ಆಶೀರ್ವಾದವನ್ನೂ ಪಡೆಯುತ್ತಾರೆ.  ಲಕ್ಷ್ಮೀಯ ಕೃಪೆ ಇದ್ದರೆ, ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ (Blessings of godess Lakshmi). ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಫೆಬ್ರವರಿ 27 ರ ಹೊತ್ತಿಗೆ, ಶುಕ್ರನೊಂದಿಗೆ, ತಾಯಿ ಲಕ್ಷ್ಮೀಯ ಆಶೀರ್ವಾದ ಕೂಡಾ ಕೆಲವು ರಾಶಿಯವರ ಮೇಲೆ ಬೀಳಲಿದೆ. 

ಮೇಷ ರಾಶಿ (Aries):
ಮುಂದಿನ 16 ದಿನಗಳ ಕಾಲ ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಕಾಣಲಿದೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡುಬರಲಿದೆ. ಸಂತೋಷ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭವಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. 

ಇದನ್ನೂ ಓದಿ : ಸ್ನೇಹಿತರ ರೂಪದಲ್ಲಿರುವ ಶತ್ರುಗಳಾಗಿರುತ್ತಾರೆ ಈ ರಾಶಿಯವರು, ನಿಮ್ಮ ಸುತ್ತಲೂ ಇದ್ದಾರಾ ನೋಡಿಕೊಳ್ಳಿ

ವೃಷಭ ರಾಶಿ (Taurus):
ಫೆಬ್ರವರಿ 27 ರ ವೇಳೆಗೆ, ಹಣವನ್ನು ಪಡೆಯುವ ಹೆಚ್ಚಿನ ಅವಕಾಶಗಳಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿನಿಂದಾಗಿ ಪ್ರಗತಿ ಸಿಗಲಿದೆ. ಇದ್ದಕ್ಕಿದ್ದಂತೆ  ಯಾವುದಾದರೂ ಮೂಲದಿಂದ ಹಣಕಾಸಿನ  ಲಾಭವಾಗುತ್ತದೆ. ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ವೈವಾಹಿಕ ಜೀವನದಲ್ಲಿ (Married life) ಪರಸ್ಪರ ಸಂಬಂಧವು ಬಲವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. 

ಕಟಕ (Cancer):
ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರು ಸಿಹಿ ಸುದ್ದಿ ಪಡೆಯುವಿರಿ. ಹಣಕಾಸಿನ ತೊಂದರೆಗಳಿಂದ ಮುಕ್ತರಾಗಬಹುದು. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ. ಶುಕ್ರದೇವನ (Venus) ಮಂಗಳಕರ ಪ್ರಭಾವದಿಂದ ಜೀವನದಲ್ಲಿ ಸಂತೋಷ ಇರಲಿದೆ.  

ಇದನ್ನೂ ಓದಿ : ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದರೆ ಆರ್ಥಿಕ ಮತ್ತು ವೈವಾಹಿಕ ಜೀವನದಲ್ಲಿ ಎದುರಾಗುತ್ತದೆ ತೊಂದರೆ, ಸುಲಭವಾಗಿ ಪರಿಹಾರ ಕಂಡುಕೊಳ್ಳುವುದು ಹೇಗೆ ?

ಸಿಂಹ (Leo) :
ಫೆಬ್ರವರಿ 27 ರ ಹೊತ್ತಿಗೆ ಸಿಂಹ ರಾಶಿಯವರಿಗೆ (Leo)ಲಾಭವಾಗಲಿದೆ.  ಈ ಸಂದರ್ಭದಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭ ಪಡೆಯುವ ಅನೇಕ ಅವಕಾಶಗಳಿವೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ಆನಂದವನ್ನು ಅನುಭವಿಸುವಿರಿ. ಹಠಾತ್ ವಿತ್ತೀಯ ಲಾಭಗಳ ಜೊತೆಗೆ, ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. 

ಧನು ರಾಶಿ (Sagittarius) :
ಧನು ರಾಶಿಯವರಿಗೆ (Sagittarius) ಫೆಬ್ರವರಿ 27 ರವರೆಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಸ್ಥಿರವಾದ ಏರಿಕೆ ಕಂಡುಬರುವುದು. ಇದರೊಂದಿಗೆ ಉದ್ಯೋಗ-ವ್ಯವಹಾರದಲ್ಲಿ ಆರ್ಥಿಕ ಪ್ರಗತಿಯಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯ ವರದಾನವಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News