Chandra Grahan 2022: ಹೊಸ ವರ್ಷದಲ್ಲಿ ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ? ದಿನಾಂಕ & ಸಮಯ ತಿಳಿಯಿರಿ

2022ರ ಮೊದಲ ಚಂದ್ರಗ್ರಹಣವು ಮೇ 16 ರಂದು ನಡೆಯಲಿದೆ. ಈ ದಿನ ಸೋಮವಾರ ಇರುತ್ತದೆ. ಈ ಚಂದ್ರಗ್ರಹಣ ಸಂಪೂರ್ಣ ಚಂದ್ರಗ್ರಹಣವಾಗಿರಲಿದೆ.

Written by - Puttaraj K Alur | Last Updated : Dec 21, 2021, 07:34 PM IST
  • ಗ್ರಹಣವು ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿದೆ
  • 2022ರ ಮೊದಲ ಚಂದ್ರಗ್ರಹಣವು ಮೇ 16ರ ಸೋಮವಾರ ಇರುತ್ತದೆ.
  • 2022ರ 2ನೇ ಚಂದ್ರಗ್ರಹಣವು ನವೆಂಬರ್ 8ರ ಮಂಗಳವಾರ ನಡೆಯಲಿದೆ
Chandra Grahan 2022: ಹೊಸ ವರ್ಷದಲ್ಲಿ ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ? ದಿನಾಂಕ & ಸಮಯ ತಿಳಿಯಿರಿ title=
ಚಂದ್ರಗ್ರಹಣದ ದಿನಾಂಕ & ಸಮಯ ತಿಳಿಯಿರಿ

ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಜನರು 2021ಕ್ಕೆ ವಿದಾಯ ಹೇಳಲಿದ್ದಾರೆ. 2022ರ ಹೊಸ ವರ್ಷವನ್ನು ಹೊಸ ಹುಮ್ಮಸ್ಸಿನೊಂದಿಗೆ ಸ್ವಾಗತಿಸಲು ಪ್ರಪಂಚವೇ ಸಜ್ಜಾಗಿದೆ. ಹೀಗಿರುವಾಗ ಹೊಸ ವರ್ಷದ ಪ್ರಮುಖ ಘಟನಾವಳಿಗಳನ್ನು ತಿಳಿದುಕೊಳ್ಳಲು ಜನ ಕೂಡ ಕಾತರರಾಗಿದ್ದಾರೆ. ಪ್ರತಿಯೊಬ್ಬರೂ ಗ್ರಹಣ(Grahan 2022)ದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಏಕೆಂದರೆ ಗ್ರಹಣವು ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿದೆ. 2022ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ 2 ಚಂದ್ರ ಗ್ರಹಣಗಳು (Chandra Grahan 2022) ಮತ್ತು 2 ಸೌರ ಗ್ರಹಣಗಳು (Surya Grahan 2022) ಸೇರಿವೆ. 2022ರಲ್ಲಿ ಚಂದ್ರಗ್ರಹಣ (Chandra Grahan in 2022) ಯಾವಾಗ ಸಂಭವಿಸುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

2022ರ ಮೊದಲ ಚಂದ್ರಗ್ರಹಣ  (First Lunar Eclipse of 2022)

2022ರ ಮೊದಲ ಚಂದ್ರಗ್ರಹಣ(Chandra Grahan)ವು ಮೇ 16 ರಂದು ನಡೆಯಲಿದೆ. ಈ ದಿನ ಸೋಮವಾರ ಇರುತ್ತದೆ. ಈ ಚಂದ್ರಗ್ರಹಣ ಸಂಪೂರ್ಣ ಚಂದ್ರಗ್ರಹಣವಾಗಿರಲಿದೆ. ಇದು ಬೆಳಿಗ್ಗೆ 7:02 ರಿಂದ ಮಧ್ಯಾಹ್ನ 12:20ರವರೆಗೆ ಇರುತ್ತದೆ. ದಕ್ಷಿಣ/ಪಶ್ಚಿಮ ಯುರೋಪ್, ದಕ್ಷಿಣ/ಪಶ್ಚಿಮ ಏಷ್ಯಾ, ದಕ್ಷಿಣ ಅಮೆರಿಕ, ಪೆಸಿಫಿಕ್, ಆಫ್ರಿಕಾ, ಉತ್ತರ ಅಮೆರಿಕ, ಅಂಟಾರ್ಟಿಕಾ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ ಈ ಚಂದ್ರಗ್ರಹಣವನ್ನು ಕಾಣಬಹುದು. ಇದಲ್ಲದೆ ಈ ಚಂದ್ರಗ್ರಹಣದ ಸೂತಕ ಅವಧಿಯು ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ.

ಇದನ್ನೂ ಓದಿ: Money Horoscope 2022: ಹಣದ ವಿಷಯದಲ್ಲಿ 2022ರ ವರ್ಷ ನಿಮಗೆ ಹೇಗಿರಲಿದೆ?

2022ರ 2ನೇ ಚಂದ್ರಗ್ರಹಣ (Second Lunar Eclipse 2022) 

2022ರ 2ನೇ ಚಂದ್ರಗ್ರಹಣವು ನವೆಂಬರ್ 8ರ ಮಂಗಳವಾರ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ದಿನ ಮಧ್ಯಾಹ್ನ 1.32 ರಿಂದ ರಾತ್ರಿ 7.27ರವರೆಗೆ ಈ ಚಂದ್ರಗ್ರಹಣ ಸಂಭವಿಸಲಿದೆ. ಅಲ್ಲದೆ ಈ ಚಂದ್ರಗ್ರಹಣವನ್ನು ಭಾರತ, ಆಸ್ಟ್ರೇಲಿಯಾ, ಉತ್ತರ / ಪೂರ್ವ ಯುರೋಪ್, ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ನೋಡಬಹುದಾಗಿದೆ. ಈ ಚಂದ್ರಗ್ರಹಣದ ಸೂತಕವು 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಗ್ರಹಣದ ಕೊನೆಯವರೆಗೂ ಇರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಎರಡೂ ಚಂದ್ರ ಗ್ರಹಣಗಳ ಸೂತಕವು ಮಾನ್ಯವಾಗಿರುತ್ತದೆ. ಸೂತಕ ಅವಧಿಯಲ್ಲಿ ಗರ್ಭಿಣಿಯರು ಸೇರಿದಂತೆ ಎಲ್ಲಾ ಜನರು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Telling Lie: ಒಳ್ಳೆಯ ಕೆಲಸ ಅಥವಾ ಕಾರಣಕ್ಕೆ ಹೇಳಲಾದ ಸುಳ್ಳು ಪುಣ್ಯವೇ? ಅಥವಾ ಪಾಪವೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News