Astr Tips For Money: ಈ ರೀತಿ ಮಾಡಿದರೆ ಶ್ರೀಮಂತರಾಗುವ ನಿಮ್ಮ ಕನಸು ನನಸಾಗುತ್ತದೆ..!

ಯಾರ ಮನೆಯಲ್ಲಿ ನಿತ್ಯವೂ ಶ್ರೀ ಯಂತ್ರದ ಪೂಜೆ ನಡೆಯುತ್ತದೆಯೋ ಅಲ್ಲಿ ಸಾಕ್ಷಾತ್ ಪರಮೇಶ್ವರಿ ದೇವಿ ವಾಸವಿರುತ್ತಾಳೆ. ಅವರಿಗೆ ದಾರಿದ್ರ್ಯ ಬರುವದಿಲ್ಲವೆಂದು ನಂಬಲಾಗಿದೆ.

Written by - Puttaraj K Alur | Last Updated : Nov 28, 2021, 07:48 AM IST
  • ಯಾರ ಮನೆಯಲ್ಲಿ ಶ್ರೀಯಂತ್ರದ ಪೂಜೆ ನಡೆಯುತ್ತದೆಯೋ ಅಲ್ಲಿ ಸಂಪತ್ತಿಗೆ ಕೊರತೆ ಇರುವದಿಲ್ಲ
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರೀ ಯಂತ್ರದ ಆರಾಧನೆ ಹಣಕಾಸಿನ ಅಡೆತಡೆ ನಿವಾರಿಸಲು ಬಹಳ ಮುಖ್ಯ
  • ಶ್ರೀ ಯಂತ್ರವನ್ನು ಸ್ಥಾಪಿಸಿದ ನಂತರ ಮನೆಯಲ್ಲಿ ಮದ್ಯ ಮತ್ತು ಮಾಂಸದಿಂದ ದೂರವಿರಬೇಕು
Astr Tips For Money: ಈ ರೀತಿ ಮಾಡಿದರೆ ಶ್ರೀಮಂತರಾಗುವ ನಿಮ್ಮ ಕನಸು ನನಸಾಗುತ್ತದೆ..! title=
ಶ್ರೀ ಯಂತ್ರ ಪೂಜಿಸಿದರೆ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ

ನವದೆಹಲಿ: ಪ್ರತಿಯೊಬ್ಬರಿಗೂ ಶ್ರೀಮಂತನಾಗುವ ಕನಸು ಇರುತ್ತದೆ. ಏಕೆಂದರೆ ಇಂದಿನ ಆರ್ಥಿಕ ಯುಗದಲ್ಲಿ ಹಣವು ಮನುಷ್ಯನ ಅತಿ ದೊಡ್ಡ ಅಗತ್ಯಗಳಲ್ಲಿ ಒಂದಾಗಿದೆ. ಹುಟ್ಟಿನಿಂದಲೇ ಕೆಲವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇದೇ ರೀತಿ ಬಹುತೇಕರು ಹಣ ಸಂಪಾದಿಸಲು ಹಗಲು ರಾತ್ರಿ ದುಡಿಯಬೇಕು. ನೀವೂ ಶ್ರೀಮಂತರಾಗುವ ಕನಸು ಕಾಣುತ್ತಿದ್ದರೆ ಜ್ಯೋತಿಷ್ಯದ ಕೆಲವು ವಿಶೇಷ ಪರಿಹಾರಗಳು ನಿಮಗೆ ಸಹಕಾರಿಯಾಗಬಹುದು.

ಶ್ರೀ ಯಂತ್ರವನ್ನು ಹೇಗೆ ಪೂಜಿಸಬೇಕು? (How to worship of Shri Yantra)

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರೀ ಯಂತ್ರದ ಆರಾಧನೆಯು ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ಬಹಳ ವಿಶೇಷವಾಗಿದೆ. ಇದರ ಪೂಜೆಗಾಗಿ ಪೂಜಾ ಸ್ಥಳ(Shri Yantra Puja Vidhi)ದಲ್ಲಿ ಕೆಂಪು ಬಣ್ಣದ ಬಟ್ಟೆಯ ಮೇಲೆ ಶ್ರೀ ಯಂತ್ರವನ್ನು ಇರಿಸಬೇಕು. ನಂತರ ಅದರ ಮೇಲೆ ಗಂಗಾಜಲ ಮತ್ತು ಹಾಲನ್ನು ಸಿಂಪಡಿಸಬೇಕು. ಪೂಜೆಯ ನಂತರ ಅದನ್ನು ಕಮಾನು, ಬೀರು ಅಥವಾ ಅಂಗಡಿಯಲ್ಲಿ ಇರಿಸಿ. ಇದು ಬಡತನವನ್ನು ಹೊಡೆದೊಡಿಸುತ್ತದೆ. ಶ್ರೀ ಯಂತ್ರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿದ ನಂತರವೇ ಮಂತ್ರಗಳನ್ನು ಪಠಿಸಬೇಕು. 

ಇದನ್ನೂ ಓದಿ: ಈ ರಾಶಿಯವರಿಗೆ ಅತ್ಯಂತ ಕಠಿಣ ಸಮಯ ಆರಂಭ, ಸಂಕಷ್ಟ ಹೆಚ್ಚಿಸಲಿದೆ ಶನಿಯ ವಕ್ರ ದೃಷ್ಟಿ

ಶ್ರೀ ಯಂತ್ರದ ಪ್ರಾಮುಖ್ಯತೆ (Importance of Shri Yantra)

ದಕ್ಷಿಣ ಭಾರತದ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಶ್ರೀ ಯಂತ್ರ(Shri Yantra)ವನ್ನು ಸ್ಥಾಪಿಸಲಾಗಿದೆ. ಪ್ರತಿನಿತ್ಯವೂ ಇದರ ಆರಾಧನೆ ನಡೆಯುತ್ತದೆ. ಇದರ ಮಹತ್ವವು ಪ್ರತಿಯೊಬ್ಬರಿಗೂ ತಿಳಿದಿದೆ.  ಸಿದ್ಧ ಶ್ರೀ ಯಂತ್ರವನ್ನು ಪೂಜಾ ಮಂದಿರದಲ್ಲಿ ಇಟ್ಟು ಪೂಜಿಸಿದರೆ ಅನಂತ ಸಂಪತ್ತು ಪಡೆಯಬಹುದು.

ಶ್ರೀ ಯಂತ್ರ ಪೂಜಾ ಮಂತ್ರ (Shri Yantra Mantra)

ಓಂ ಶ್ರೀಂ ಹ್ರೀಂ ಶ್ರೀಂ ನಮಃ

‘ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್‌ ಪ್ರಸೀದ್‌ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮಿ ನಮಃ’ ಇದು ಲಕ್ಷ್ಮಿ ದೇವಿಯ ಬೀಜ ಮಂತ್ರ(Shri Yantra Mantra). ಇದನ್ನು ಜಪಿಸುವುದರಿಂದ ನಮಗೆ ಅದೃಷ್ಟ ಬರುತ್ತದೆ.

ಈ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ

  • ಸರಿಯಾಗಿರುವ ಶ್ರೀ ಯಂತ್ರವನ್ನು ಮಾತ್ರ ಪೂಜಿಸಬೇಕು, ಇಲ್ಲದಿದ್ದರೆ ನಿಮ್ಮ ಪೂಜೆ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ.
  • ಶ್ರೀ ಯಂತ್ರವನ್ನು ಸ್ಥಾಪಿಸಿದ ನಂತರ ಅದರ ಮುಂದೆ ಮಂತ್ರದ ಪಠಣವನ್ನು ನಿಯಮಿತವಾಗಿ ಮಾಡಬೇಕು.
  • ಶ್ರೀ ಯಂತ್ರವನ್ನು ಸ್ಥಾಪಿಸಿದ ನಂತರ ಮನೆಯಲ್ಲಿ ಮದ್ಯ ಮತ್ತು ಮಾಂಸದಿಂದ ದೂರವಿರಬೇಕು.
  • ಯಾವುದೇ ಸಂದರ್ಭದಲ್ಲಿ ಮಂಗಳಕರ ಸಮಯದಲ್ಲಿ ಶ್ರೀ ಯಂತ್ರವನ್ನು ಸ್ಥಾಪಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಈ 4 ರಾಶಿಚಕ್ರದ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ, ಬಹಳ ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತಾರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News