Fenugeek Benefits For Hair : ಮೆಂತ್ಯೆ ಬೀಜ ನಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿ. ಮೆಂತ್ಯೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಮಾತ್ರವಲ್ಲ ಬಿಳಿ ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಮೆಂತ್ಯೆಯಲ್ಲಿ ಫೈಟೊಈಸ್ಟ್ರೊಜೆನ್‌ಗಳು ಕಂಡುಬರುತ್ತವೆ. ಇದರೊಂದಿಗೆ, ಇದು ಕೂದಲಿನ ಬೆಳವಣಿಗೆ, ಮತ್ತು ಬಣ್ಣದ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಅಂದಹಾಗೆ, ಮೆಂತ್ಯೆ ಬೀಜಗಳನ್ನು ಕೂದಲಿಗೆ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಆದರೆ ಕೂದಲಿಗೆ ಮೆಂತ್ಯೆಯನ್ನು ಯಾವ ರೀತಿ ಬಳಸಬೇಕು ಎನ್ನುವುದು ತಿಳಿದಿರಬೇಕು.
ಮೆಂತ್ಯವನ್ನು ಕೂದಲಿಗೆ ಹೀಗೆ ಬಳಸಿ :
ಮೆಂತ್ಯೆ ಮತ್ತು ತೆಂಗಿನ ಎಣ್ಣೆ :
ತೆಂಗಿನ ಎಣ್ಣೆಯೊಂದಿಗೆ ಮೆಂತ್ಯೆ ಬೀಜಗಳನ್ನು ಬಳಸಬಹುದು. ಇದನ್ನು ಬಳಸಲು, ಮೊದಲು ತೆಂಗಿನೆಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸ್ವಲ್ಪ ಮೆಂತ್ಯೆ ಬೀಜಗಳನ್ನು ಸೇರಿಸಿ. ಮೆಂತ್ಯೆ ಬೀಜಗಳ ಬಣ್ಣವು ಕೆಂಪು ಬಣ್ಣಕ್ಕೆ ತಿರುಗಿದಾಗ, ಗ್ಯಾಸ್ ಆಫ್ ಮಾಡಿ. ನಂತರ ಎಣ್ಣೆಯನ್ನು ತಣ್ಣಗಾಗಲು ಬಿಡಿ. ಹೀಗೆ ತಣ್ಣಗಾದ ಎಣ್ಣೆಯನ್ನು ಕೂದಲಿಗೆ ಹಾಕಿ ಮಸಾಜ್ ಮಾಡಿ. ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಜೊತೆಗೆ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.
ಇದನ್ನೂ ಓದಿ : ತಲೆನೋವನ್ನು ಕ್ಷಣಾರ್ಧದಲ್ಲೇ ಶಮನ ಮಾಡುತ್ತೆ ಈ ಮನೆಮದ್ದು
ಮೆಂತ್ಯೆ ಮತ್ತು ಜೇನುತುಪ್ಪ :
ಕೂದಲಿನ ಬೆಳವಣಿಗೆಯ ಬಗ್ಗೆ ಚಿಂತೆ ಕಾಡುತ್ತಿದ್ದರೆ, ಮೆಂತ್ಯೆ ಮತ್ತು ಜೇನುತುಪ್ಪವನ್ನು ಬಳಸಬಹುದು. ಮೆಂತ್ಯೆ ಮತ್ತು ಜೇನುತುಪ್ಪದ ಬಳಕೆಯಿಂದ ಕೂದಲಿನ ಬೆಳವಣಿಗೆಯನ್ನು ಸುಧಾರಿಸಬಹುದು. ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ಹಾಕಿ ಮತ್ತು ರಾತ್ರಿಯಿಡೀ ನೆನೆಸಿ. ಬೆಳಿಗ್ಗೆ ನೆನೆಸಿಟ್ಟ ಮೆಂತ್ಯೆಯ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್‌ಗೆ ಜೇನುತುಪ್ಪವನ್ನು ಸೇರಿಸಿ ಮತ್ತು ಅದನ್ನು ಕೂದಲಿಗೆ ಹಚ್ಚಿ. ನಂತರ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಅನ್ನು ಬಳಸುವುದರಿಂದ ಕೂದಲು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ : Monkeypox: ಮಂಕಿಪಾಕ್ಸ್ ಪತ್ತೆಗೆ ಬಿಡುಗಡೆಯಾದ RT-PCR ಕಿಟ್, ಕೇವಲ 50 ನಿಮಿಷಗಳಲ್ಲಿಯೇ ರಿಸಲ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.