ಈ ಸಮಸ್ಯೆಗಳಿದ್ದರೆ ರಾತ್ರಿ ಮಲಗುವ ಮುನ್ನ ದೇಹದ ಈ ಭಾಗಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಸಾಕು

ಪಾದಗಳ ಅಡಿಭಾಗವನ್ನು ನಿಯಮಿತವಾಗಿ ಮಸಾಜ್ ಮಾಡಿದರೆ, ನಿದ್ರಾಹೀನತೆಯ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು. ಇದಲ್ಲದೆ, ಈ ಮಸಾಜಿನಿಂದ ನಿದ್ರೆ ಸುಧಾರಿಸುತ್ತದೆ.

Written by - Ranjitha R K | Last Updated : Apr 28, 2022, 05:23 PM IST
  • ಪಾದದ ಅಡಿ ಭಾಗವನ್ನು ಮಸಾಜ್ ಮಾಡಿದರೆ ಸಿಗಲಿದೆ ಈ ಪ್ರಯೋಜನ
  • ನಿದ್ರಾ ಹೀನತೆಯ ಸಮಸ್ಯೆಗೆ ಸಿಗಲಿದೆ ಮುಕ್ತಿ
  • ಒತ್ತಡ ಮತ್ತು ಆತಂಕವನ್ನು ನಿವಾರಣೆಗೆ ಸಹಕಾರಿ ಈ ಮಸಾಜ್
ಈ ಸಮಸ್ಯೆಗಳಿದ್ದರೆ ರಾತ್ರಿ ಮಲಗುವ ಮುನ್ನ ದೇಹದ ಈ ಭಾಗಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ  ಸಾಕು  title=
oil massage benefits (file photo)

ಬೆಂಗಳೂರು : ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಾಗಲು ಮತ್ತು ರಕ್ತ ಪರಿಚಲನೆ ಉತ್ತಮವಾಗಿಡಲು ಪಾದದ ಅಡಿಭಾಗವನ್ನು ಮಸಾಜ್ ಮಾಡುತ್ತಾರೆ. ಆದರೆ ಬೇಸಿಗೆಯಲ್ಲಿ ಈ ಅಭ್ಯಾಸವನ್ನು ಮುಂದುವರಿಸುವುದಿಲ್ಲ. ಬೇಸಿಗೆಯಲ್ಲಿ ಪಾದದ ಪಾದಗಳನ್ನು ಮಸಾಜ್ ಮಾಡಿದರೆ ಅದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.  ದಿನದ ಆಯಾಸವನ್ನು ಹೋಗಲಾಡಿಸಲು, ಆಯಾಸದಿಂದ ಮುಕ್ತಿ ಪಡೆಯಲು ಅಥವಾ ಒತ್ತಡದ ಸಮಸ್ಯೆಯನ್ನು ಹೋಗಲಾಡಿಸಲು ಪಾದದ ಅಡಿಭಾಗದ ಮಸಾಜ್ ತುಂಬಾ ಉಪಯುಕ್ತವಾಗಿದೆ. 

ಪಾದದ ಅಡಿಭಾಗಕ್ಕೆ ಮಸಾಜ್ ಮಾಡುವುದರಿಂದ ಆಗುವ ಪ್ರಯೋಜನಗಳು :
1.ಪಾದಗಳ ಅಡಿಭಾಗವನ್ನು ನಿಯಮಿತವಾಗಿ ಮಸಾಜ್ ಮಾಡಿದರೆ, ನಿದ್ರಾಹೀನತೆಯ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು. ಇದಲ್ಲದೆ, ಈ ಮಸಾಜಿನಿಂದ ನಿದ್ರೆ ಸುಧಾರಿಸುತ್ತದೆ.

ಇದನ್ನೂ ಓದಿ : Diabetes Symptoms: ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಡಯಾಬಿಟಿಸ್‌ ಪರೀಕ್ಷೆ ಮಾಡಿಸಿಕೊಳ್ಳಿ!

2. ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಪಾದದ ಅಡಿಭಾಗವನ್ನು ಮಸಾಜ್ ಮಾಡುವುದು ತುಂಬಾ ಉಪಯುಕ್ತವಾಗಿದೆ. ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಖಿನ್ನತೆ ಅಥವಾ ಒತ್ತಡದ ಸಮಸ್ಯೆ ಎದುರಿಸುತ್ತಿದ್ದರೆ, ಅವನು ಮಾನಸಿಕ ಅಸ್ವಸ್ಥತೆಯನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪಾದಗಳನ್ನು ನಿಯಮಿತವಾಗಿ ಮಸಾಜ್ ಮಾಡಿದರೆ, ಒತ್ತಡ ಮತ್ತು ಆತಂಕ ಎರಡನ್ನೂ ನಿವಾರಿಸಬಹುದು.

3. ಪಾದಗಳ ಮಸಾಜ್ ಮಾಡುವುದರಿಂದ ಕೀಲು ನೋವಿನ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ.  ಪ್ರಯೋಜನ ಪಡೆಯಬಹುದು. ಪಾದಗಳ ಮಸಾಜ್ ಮಾಡುವುದರಿಂದ ನರಗಳು ಸಡಿಲಗೊಂಡು ದೇಹದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಕೀಲು ನೋವಿನಿಂದ ತೊಂದರೆಗೀಡಾಗಿದ್ದರೆ, ಪಾದದ ಅಡಿಭಾಗದ ಮಸಾಜ್ ಮಾಡುವುದನ್ನು ತಪ್ಪಿಸಬೇಡಿ. 

ಇದನ್ನೂ ಓದಿ : ಆರೋಗ್ಯಕರವಾಗಿ ತೂಕ ತಿಳಿಸಲು ನಿಮ್ಮ ಬೆಳಗಿನ ಉಪಹಾರದಲ್ಲಿ ಇವುಗಳನ್ನು ತಪ್ಪದೇ ಸೇವಿಸಿ

4. ನೀವು ಮುಟ್ಟಿನ ನೋವು ಅಥವಾ ಸೆಳೆತದಿಂದ ತೊಂದರೆಗೊಳಗಾಗಿದ್ದರೆ,  ಆ ನೋವಿನ ಪರಿಹಾರಕ್ಕಾಗಿ ನಿಮ್ಮ ಪಾದಗಳ ಅಡಿಭಾಗವನ್ನು ಮಸಾಜ್ ಮಾಡುವುದು ಸೂಕ್ತ.  ಹೀಗೆ ಮಾಡುವುದರಿಂದ ಈ ಸಮಸ್ಯೆಯಿಂದ ಅತಿ ಶೀಘ್ರ ಪರಿಹಾರ ಪಡೆಯಬಹುದು.

 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News