Health Tips: ಕೇವಲ ಒಂದು ವಾರದ ಕಠಿಣ ಪರಿಶ್ರಮದಿಂದ ನೀವು ಸಂಪೂರ್ಣ ಫಿಟ್ ಆಗುತ್ತೀರಿ!

ಕೆಲವು ಸರಳ ವ್ಯಾಯಾಮಗಳ ನಿಯಮಿತ ಅಭ್ಯಾಸದಿಂದ ದೇಹವನ್ನು ಪರಿಪೂರ್ಣ ಆಕಾರಕ್ಕೆ ತರಬಹುದು. ಹಾಗಾದರೆ ಆ ವ್ಯಾಯಾಮದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿರಿ.

Written by - Puttaraj K Alur | Last Updated : Jan 15, 2022, 06:55 AM IST
  • ದೇಹದ ಪರಿಪೂರ್ಣ ಆಕಾರಕ್ಕೆ ತರಲು ಇದು ಅತ್ಯುತ್ತಮ ವ್ಯಾಯಾಮ
  • ಯಾವುದೇ ಸಲಕರಣೆಗಳಿಲ್ಲದೆ ನೀವು ಈ ವ್ಯಾಯಾಮ ಮಾಡಬಹುದು
  • ಈ ವ್ಯಾಯಾಮದ ನಿಯಿಮಿತ ಅಭ್ಯಾಸದಿಂದ ನಿಮ್ಮ ದೇಹ ಫಿಟ್ ಆಗುತ್ತದೆ
Health Tips: ಕೇವಲ ಒಂದು ವಾರದ ಕಠಿಣ ಪರಿಶ್ರಮದಿಂದ ನೀವು ಸಂಪೂರ್ಣ ಫಿಟ್ ಆಗುತ್ತೀರಿ! title=
ಈ ಸರಳ ವ್ಯಾಯಾಮದ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ

ನವದೆಹಲಿ: ಪ್ರತಿಯೊಬ್ಬರೂ ಫಿಟ್ ದೇಹ(Fit Body)ವನ್ನು ಬಯಸುತ್ತಾರೆ. ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಇಬ್ಬರೂ ತಮ್ಮ ಸೌಂದರ್ಯ ಮತ್ತು ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಇದಕ್ಕಾಗಿ ಜನರು ಎಲ್ಲಾ ರೀತಿಯ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಆಹಾರ ಪಥ್ಯ, ಜಿಮ್, ವ್ಯಾಯಾಮ, ಹೀಗೆ ಯಾವುದೇ ರೀತಿಯಲ್ಲಿ ದೇಹವನ್ನು ಪರಿಪೂರ್ಣ ಆಕಾರಕ್ಕೆ ತರಬಹುದು. ಹೀಗಾಗಿ ಪ್ರತಿಯೊಬ್ಬರೂ ಫಿಟ್ ಆಗಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರುತ್ತಾರೆ. ಈ ಕಾರ್ಯದಲ್ಲಿ ಸುಲಭವಾಗಿ ಸಹಾಯ ಮಾಡುವ ಕೆಲವು ಕ್ರಮಗಳಿವೆ. ಕೆಲ ಸುಲಭವಾದ ವ್ಯಾಯಾಮಗಳನ್ನು ತಿಳಿದುಕೊಂಡರೆ ನೀವು ಹಚ್ಚು ಶ್ರಮಪಡುವ ಅಗತ್ಯವಿಲ್ಲ. ನಿಯಮಿತ ಈ ಅಭ್ಯಾಸದಿಂದ ದೇಹವನ್ನು ಪರಿಪೂರ್ಣ ಆಕಾರ(Perfect Body Shape)ಕ್ಕೆ ತರಬಹುದು. ಹಾಗಾದರೆ ಆ ವ್ಯಾಯಾಮ ಯಾವುದು ಎಂದು ತಿಳಿದುಕೊಳ್ಳಿರಿ.

ಈ ವ್ಯಾಯಾಮ(Body Stretch Excercise)ಕ್ಕಾಗಿ ನೀವು ದಿನಕ್ಕೆ 15-20 ನಿಮಿಷಗಳ ಸಮಯವನ್ನು ಮೀಸಲಿಡಬೇಕು. ಇದರ ದೈನಂದಿನ ಅಭ್ಯಾಸದಿಂದ ಮೇಲಿನಿಂದ ಕೆಳಕ್ಕೆ ದೇಹವು ಟೋನ್ ಮತ್ತು ಪರಿಪೂರ್ಣ ಆಕಾರಕ್ಕೆ ಬರುತ್ತದೆ.

ದೇಹದ ಆಕಾರ ಪಡೆಯಲು ಅದ್ಭುತ ವ್ಯಾಯಾಮ

ದೇಹದ ಸರಿಯಾದ ಆಕಾರ ಪಡೆಯಲು ನೀವು ಈ ಅತ್ಯುತ್ತಮ ವ್ಯಾಯಾಮ(Workout)ವನ್ನು ಸುಲಭವಾಗಿ ಮಾಡಬಹುದು. ಈ ವ್ಯಾಯಾಮ ಮಾಡಲು ಚಾಪೆಯ ಮೇಲೆ ವ್ರಜಾಸನದ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಅಂದರೆ ನಿಮ್ಮ ಮೊಣಕಾಲುಗಳನ್ನು ಬಾಗಿಸಿ ಕುಳಿತುಕೊಳ್ಳುವುದು ಎಂದರ್ಥ. ನಂತರ ಕೈಗಳನ್ನು ಸೊಂಟದ ಬಳಿ ಇರಿಸಿ. ಈಗ ನೀವು ಉಸಿರಾಡುವಾಗ ನಿಮ್ಮ ಮೊಣಕಾಲುಗಳ ಮೇಲೆ ನಿಲ್ಲಬೇಕು. ಈ ಸ್ಥಿತಿಯಲ್ಲಿ ಕೈಗಳು ಮೇಲಕ್ಕೆ ಚಲಿಸುತ್ತವೆ. ನಂತರ ಉಸಿರನ್ನು ಬಿಡುತ್ತಾ ಕುಳಿತುಕೊಳ್ಳಿ. ಈ ಸ್ಥಿತಿಯಲ್ಲಿ ಕೈಗಳು ಸ್ವಲ್ಪ ಹಿಂದಕ್ಕೆ ಚಲಿಸುತ್ತವೆ. ಇದನ್ನು ಮಾಡುವಾಗ ಆಯಾಸದ ಭಾವನೆ ಇದ್ದರೆ ಇದನ್ನು ಪೂರ್ಣಗೊಳಿಸಿದ ನಂತರ ಸ್ವಲ್ಪ ವಿಶ್ರಾಂತಿ ಪಡೆಯಬಹುದು ಅಥವಾ ಕೆಲ ನಿಮಿಷ ನಿರಂತರವಾಗಿ ಮಾಡಿದ ನಂತರ ವಿಶ್ರಾಂತಿ ಪಡೆಯಬಹುದು.

ಇದನ್ನೂ ಓದಿ: Money Tree: ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ ಮನೆಯಲ್ಲಿರುವ ಈ 2 ಮರ, ಗಿಡಗಳು

ಆರಂಭದಲ್ಲಿ ಆಯಾಸ ಆಗಬಹುದು

ಈ ವ್ಯಾಯಾಮದ ಕನಿಷ್ಠ 3 ಸೆಟ್‌ಗಳನ್ನು ಮಾಡಿ. ಆರಂಭದಲ್ಲಿ ನೀವು 10 ಕ್ಕಿಂತ ಹೆಚ್ಚು ಬಾರಿ ಮಾಡಲು ಸಾಧ್ಯವಾಗದಿರಬಹುದು. ನಂತರ ನಿಮ್ಮ ದೇಹಕ್ಕೆ ಈ ವ್ಯಾಯಾಮ ಮಾಡಲು ಆಯಾಸ ಎನಿಸಬಹುದು. ಆದರೆ ಇದು 2 ರಿಂದ 3 ದಿನಗಳವರೆಗೆ ಮಾತ್ರ ಈ ರೀತಿ ಆಗುತ್ತದೆ. ಇದರ ನಂತರ ನೀವು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪುನರಾವರ್ತನೆ ಮತ್ತು ಸೆಟ್‌ಗಳನ್ನು ಹೆಚ್ಚಿಸಬಹುದು. ಈ ವ್ಯಾಯಾಮ(Workout) ಪುರುಷರು ಮತ್ತು ಮಹಿಳೆಯರಿಗೆ ಸಂಪೂರ್ಣವಾಗಿ ಉತ್ತಮವಾಗಿದೆ.

ಈ ವ್ಯಾಯಾಮದ ಅದ್ಭುತ ಪ್ರಯೋಜನಗಳು

  • ಈ ವ್ಯಾಯಾಮದ ಉತ್ತಮ ವಿಷಯವೆಂದರೆ ಇದಕ್ಕೆ ಯಾವುದೇ ರೀತಿಯ ಸಲಕರಣೆಗಳ ಅಗತ್ಯವಿಲ್ಲ.
  • ಈ ವ್ಯಾಯಾಮ ಮಾಡುವಾಗ ನಿಮ್ಮ ಮೇಲಿನ ಮತ್ತು ಕೆಳಗಿನ ದೇಹವು ತೊಡಗಿಸಿಕೊಂಡಿರುತ್ತದೆ. ಅಂದರೆ ಇಡೀ ದೇಹವು ಟೋನ್ ಆಗುತ್ತಿರುತ್ತದೆ.
  • ಕೈಗಳು, ಬೆನ್ನು, ಹೊಟ್ಟೆ, ತೊಡೆಗಳು ಮತ್ತು ಪಾದಗಳು ಆಕಾರದಲ್ಲಿ ಒಟ್ಟಿಗೆ ಬರುತ್ತವೆ.

ಇವರು ಈ ವ್ಯಾಯಾಮ ಮಾಡಬಾರದು

  • ಯಾರಿಗೆ ಮೊಣಕಾಲು ನೋವು ಇರುತ್ತದೋ ಅವರಿಗೆ ಈ ವ್ಯಾಯಾಮ ಸೂಕ್ತವಲ್ಲ.
  • ಗರ್ಭಿಣಿಯರು ಈ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: Gayatri Mantra: ಈ ಮಂತ್ರವ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲು ಇದೇ ಮುಖ್ಯ ಕಾರಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News