Hair Care Tips - ತಲೆಹೊಟ್ಟು ಸಮಸ್ಯೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ? ಈ ಉಪಾಯ ಅನುಸರಿಸಿ ನೋಡಿ

Coconut Oil And Lemnon: ಇತ್ತೀಚೆಗೆ ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ತೆಂಗಿನ ಎಣ್ಣೆ ಮತ್ತು ನಿಂಬೆ ಬಳಸಬಹುದು.  

Written by - Nitin Tabib | Last Updated : Aug 26, 2022, 04:03 PM IST
  • ಇತ್ತೀಚಿನ ದಿನಗಳಲ್ಲಿ ಕೂದಲಿನಲ್ಲಿ ತಲೆಹೊಟ್ಟಿನ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.
  • ಹೀಗಾಗಿ ಹಲವು ಜನರು ತಲೆಹೊಟ್ಟು ಮತ್ತು ಕೂದಲಿನ ಶುಷ್ಕತೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ.
  • ಈ ಸಮಸ್ಯೆಯಿಂದಾಗಿ ನೆತ್ತಿಯಲ್ಲಿ ತುರಿಕೆ ಮತ್ತು ಉರಿತದಂತಹ ಸಮಸ್ಯೆಯೂ ಕೂಡ ಎದುರಾಗುತ್ತದೆ.
Hair Care Tips - ತಲೆಹೊಟ್ಟು ಸಮಸ್ಯೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ?  ಈ ಉಪಾಯ ಅನುಸರಿಸಿ ನೋಡಿ title=
Hair Care Tips

Coconut Oil And Lemnon For Dandruff: ಇತ್ತೀಚಿನ ದಿನಗಳಲ್ಲಿ ಕೂದಲಿನಲ್ಲಿ ತಲೆಹೊಟ್ಟಿನ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಹಲವು ಜನರು ತಲೆಹೊಟ್ಟು ಮತ್ತು ಕೂದಲಿನ ಶುಷ್ಕತೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ. ಈ ಸಮಸ್ಯೆಯಿಂದಾಗಿ ನೆತ್ತಿಯಲ್ಲಿ ತುರಿಕೆ ಮತ್ತು ಉರಿತದಂತಹ ಸಮಸ್ಯೆಯೂ ಕೂಡ ಎದುರಾಗುತ್ತದೆ. ಇದರಿಂದ ಮುಕ್ತಿ ಹೊಂದಲು ನೀವು ತೆಂಗಿನ ಎಣ್ಣೆ ಮತ್ತು ನಿಂಬೆ ರಸ ಬಳಸಬಹುದು. ತೆಂಗಿನ ಎಣ್ಣೆಯು ಕೂದಲನ್ನು ಬೇರುಗಳಿಂದ ತೇವಗೊಳಿಸುತ್ತದೆ ಮತ್ತು ಒಣಗದಂತೆ ತಡೆಯುತ್ತದೆ. ಹಾಗಾದರೆ, ತಲೆಹೊಟ್ಟು ಹೋಗಲಾಡಿಸಲು ತೆಂಗಿನೆಣ್ಣೆ ಮತ್ತು ನಿಂಬೆಯನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ತೆಂಗಿನ ಎಣ್ಣೆ ಮತ್ತು ನಿಂಬೆಯ ಪ್ರಯೋಜನಗಳು
ತಲೆಯನ್ನು ಸ್ವಚ್ಛಗೊಳಿಸಿ

ತಲೆಯಲ್ಲಿರುವ ಕೊಳೆಯಿಂದಾಗಿ ನಿಮ್ಮ ಕೂದಲು ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯ ಸಮಸ್ಯೆಗಳನ್ನು ಎದುರಿಸುತ್ತದೆ. ಅದನ್ನು ತೆಗೆದುಹಾಕಲು ನೀವು ತೆಂಗಿನ ಎಣ್ಣೆ ಮತ್ತು ನಿಂಬೆ ಬಳಸಬಹುದು. ತೆಂಗಿನ ಎಣ್ಣೆ ಮತ್ತು ನಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ನಿಮ್ಮ ಕೂದಲನ್ನು ಚೆನ್ನಾಗಿ ಸ್ವಚ್ಚಗೊಳಿಸುತ್ತವೆ ಮತ್ತು ನೆತ್ತಿಯ ಕೊಳೆಯನ್ನು ತೆಗೆದುಹಾಗಿತ್ತವೆ, ನೀವು ಇದನ್ನು ವಾರಕ್ಕೊಮ್ಮೆ ಅನ್ವಯಿಸಬಹುದು. ಇದನ್ನು ಅನ್ವಯಿಸಲು, ನೀವು ಎಣ್ಣೆಯಲ್ಲಿ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಚನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಅದನ್ನು ತಲೆಗೆ ಅನ್ವಯಿಸಿ ನೆತ್ತಿಯ ಮೇಲೆ ಮಸಾಜ್ ಮಾಡಿ. 1 ಗಂಟೆಯ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ತಲೆಹೊಟ್ಟು ನಿವಾರಣೆಗೆ ಈ ಉಪಾಯ ಅನುಸರಿಸಿ 
ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆಯಿಂದ ತುರಿಕೆ, ಉರಿ, ಇನ್ಫೆಕ್ಷನ್ ಸಮಸ್ಯೆಗಳು ಎದುರಾಗುತ್ತವೆ. ಆದರೆ ಅದನ್ನು ಹೋಗಲಾಡಿಸಲು ತೆಂಗಿನೆಣ್ಣೆ, ನಿಂಬೆರಸ, ಮೊಸರು ಬೆರೆಸಿ ಹಚ್ಚಿಕೊಳ್ಳಬಹುದು,ಇದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗಿ, ಕೂದಲು ಸ್ವಚ್ಛವಾಗುತ್ತವೆ ಮತ್ತು ಪರಿಮಳಯುಕ್ತವಾಗಿ ಉಳಿಯುತ್ತದೆ.

ಇದನ್ನೂ ಓದಿ-Cholesterol: ನಿತ್ಯ ಬೆಳಗ್ಗೆ ಹಳಸಿದ ಬಾಯಿ ನೆನೆಹಾಕಿದ ಈ 5 ಪದಾರ್ಥಗಳನ್ನು ಸೇವಿಸಿ ಕೊಬ್ಬು ಕರಗಿಸಿ

ಕೂದಲನ್ನು ಬೇರುಗಳಿಂದ ಬಲಗೊಳಿಸಲು ಈ ಉಪಾಯ ಅನುಸರಿಸಿ
ತೆಂಗಿನ ಎಣ್ಣೆ ಮತ್ತು ನಿಂಬೆ ರಸ ಬೇರುಗಳಿಂದ ಕೂದಲನ್ನು ಬಲಿಷ್ಠಗೊಳಿಸಲು ತುಂಬಾ ಉಪಯುಕ್ತ ಎಂದು ಹೇಳಲಾಗಿದೆ. ತೆಂಗಿನ ಎಣ್ಣೆಯಲ್ಲಿ ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಗುಣಲಕ್ಷಣಗಳು ಕಂಡುಬರುತ್ತವೆ. ಇವು  ಕೂದಲನ್ನು ಬೇರುಗಳಿಂದ ಬಲಿಷ್ಠಗೊಳಿಸುತ್ತವೆ.

ಇದನ್ನೂ ಓದಿ-ದೇಹದಲ್ಲಿನ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸಲು ಸೂಪರ್ ಫುಡ್ ಗಳಿವು ..!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News