Hair Care Tips: ಪುರುಷರು ವಾರದಲ್ಲಿ ಎಷ್ಟು ಸಲ ಕೂದಲಿಗೆ ಎಣ್ಣೆ ಹಚ್ಚಬೇಕು?

ನಿಯಮಿತವಾಗಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿನ ಬೇರುಗಳು ಆಳವಾದ ಪೋಷಣೆಯನ್ನು ಪಡೆಯುತ್ತವೆ. ಮತ್ತೊಂದೆಡೆ ನೀವು ಉದುರಿದ ಕೂದಲನ್ನು ಸರಿಪಡಿಸಲು ಬಯಸಿದರೂ ನಿಯಮಿತವಾಗಿ ಎಣ್ಣೆಯನ್ನು ಹಚ್ಚಬೇಕು.

Written by - Puttaraj K Alur | Last Updated : Oct 22, 2021, 05:20 PM IST
  • ಬಹುತೇಕ ಪುರುಷರು ಕೂದಲು ಮತ್ತು ಕೂದಲಿನ ಆರೈಕೆ ಬಗ್ಗೆ ಅಸಡ್ಡೆ ಹೊಂದಿರುತ್ತಾರೆ
  • ಸರಿಯಾಗಿ ಆರೈಕೆ ಮಾಡದ ಕಾರಣ ಕೂದಲು ಒಣಗಿ ಉದುರಲು ಶುರು ಮಾಡುತ್ತವೆ
  • ರಾತ್ರಿ ವೇಳೆ ಕೂದಲಿಗೆ ಎಣ್ಣೆಹಚ್ಚಿ ಸರಿಯಾಗಿ ಮಸಾಜ್ ಮಾಡುವುದು ಉತ್ತಮ ಕ್ರಮವಾಗಿದೆ
Hair Care Tips: ಪುರುಷರು ವಾರದಲ್ಲಿ ಎಷ್ಟು ಸಲ ಕೂದಲಿಗೆ ಎಣ್ಣೆ ಹಚ್ಚಬೇಕು? title=
ಕೂದಲಿನ ಆರೈಕೆ ಬಗ್ಗೆ ತಿಳಿಯಿರಿ

ನವದೆಹಲಿ: ಹೆಚ್ಚಿನ ಪುರುಷರು ಚೆನ್ನಾಗಿ ಕಾಣಲು ಮುಖ ಮತ್ತು ಬಟ್ಟೆಗಳ ಮೇಲೆ ಮಾತ್ರ ಗಮನಹರಿಸುತ್ತಾರೆ. ಆದರೆ ಕೂದಲಿನ ಬಗ್ಗೆ ಅವರು ಅಸಡ್ಡೆ ಹೊಂದಿರುತ್ತಾರೆ. ಕೂದಲು ನಿಮ್ಮ ಒಟ್ಟಾರೆ ವ್ಯಕ್ತಿತ್ವದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ ಕೂದಲನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಪುರುಷರು ವಾರಕ್ಕೊಮ್ಮೆಯಾದರೂ ಕೂದಲಿಗೆ ಎಣ್ಣೆಯನ್ನು ಹಚ್ಚಬೇಕಂತೆ.

ಕೂದಲನ್ನು ನೋಡಿಕೊಳ್ಳದ ಕಾರಣ ಹಾನಿ

ಆಗಾಗ ಕೂದಲು ಒಣಗುತ್ತದೆ. ಬಳಿಕ ಅವುಗಳು ಒಂದೊಂದಾಗಿ ಉದುರಲು ಶುರು(Hair Care Tips) ಮಾಡುತ್ತವೆ. ಕೂದಲಿನ ಸರಿಯಾದ ಆರೈಕೆ ಮಾಡದಿರುವುದೇ ಇದರ ಹಿಂದಿನ ಕಾರಣ. ಕೂದಲಿನ ಗುಣಮಟ್ಟವನ್ನು ಸುಧಾರಿಸಲು ಅದಕ್ಕೆ ಎಣ್ಣೆ ಹಚ್ಚುವುದು ಬಹಳ ಮುಖ್ಯ.

ಕಂಡೀಷನಿಂಗ್‌(Hair Conditioning)ಗೆ ಅಗತ್ಯವಿದೆ

ಕೂದಲಿನ ಎಣ್ಣೆಯು ಕೂದಲಿಗೆ ನೈಸರ್ಗಿಕ ಕಂಡೀಶನರ್ ಆಗಿ ಕಾರ್ಯನಿರ್ವಹಿಸುತ್ತದೆ. ಆಳವಾದ ಕಂಡೀಷನಿಂಗ್ ಗಾಗಿ, ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚಬೇಕು. ರಾತ್ರಿ ವೇಳೆ ಕೂದಲಿಗೆ ಸರಿಯಾಗಿ ತೆಂಗಿನ ಎಣ್ಣೆಯನ್ನು ಹಚ್ಚಬೇಕು. ಮರುದಿನ ಕೂದಲನ್ನು ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ. ಹೀಗೆ ಮಾಡಿದರೆ ನಿಮ್ಮ ಕೂದಲು ಪಳ ಪಳ ಹೊಳೆಯುತ್ತವೆ.

ಇದನ್ನೂ ಓದಿ: Chanakya Niti: ಈ ರೀತಿಯ ಸ್ನೇಹಿತರ ಸಹವಾಸದಿಂದ ದೂರವಿರುವುದು ನಿಮಗೆ ಒಳ್ಳೆಯದು

ಈ ರೀತಿ ಮಸಾಜ್ ಮಾಡಿ

ಹರ್ಬಲ್ ಹೇರ್ ಆಯಿಲ್‌ನೊಂದಿಗೆ ನಿಧಾನವಾಗಿ ಮಸಾಜ್ ಮಾಡುವುದು ನೆತ್ತಿಯಲ್ಲಿನ ಎಣ್ಣೆ(Hair Oiling)ಯನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದು ಕೂದಲಿನ ಬೇರುಗಳನ್ನು ಬಲಪಡಿಸಲು ಕೂಡ ಸಹಾಯ ಮಾಡುತ್ತದೆ.

ಸೋಂಕಿನ ವಿರುದ್ಧ ರಕ್ಷಣೆ

ನಿಮ್ಮ ಕೂದಲನ್ನು ನೀವು ಸರಿಯಾಗಿ ನೋಡಿಕೊಳ್ಳದಿದ್ದರೆ ಇದು ನೆತ್ತಿಯ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಕೂದಲಿಗೆ ನಿಯಮಿತವಾಗಿ ಎಣ್ಣೆಯನ್ನು ಹಚ್ಚುವುದರಿಂದ ನೆತ್ತಿಗೆ ಪೋಷಣೆ(Hair Oil Benefits) ದೊರೆಯುತ್ತದೆ ಮತ್ತು ನೆತ್ತಿಯಲ್ಲಿ ಸೋಂಕು ಉಂಟಾಗುವುದಿಲ್ಲ.

ತಲೆಹೊಟ್ಟು ತೊಡೆದುಹಾಕಲು

ನೆತ್ತಿಯ ಶುಷ್ಕತೆ ತಲೆಹೊಟ್ಟು(Hair Problems)ಗೆ ಪ್ರಮುಖ ಕಾರಣವಾಗಿದೆ. ತಲೆಹೊಟ್ಟು ತಲೆಬುರುಡೆ ಮತ್ತು ಕೂದಲಿನ ಬೇರುಗಳಲ್ಲಿ ತುರಿಕೆಗೆ ಕಾರಣವಾಗುತ್ತದೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಕೂದಲನ್ನು ಉತ್ತಮ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನೆತ್ತಿಗೆ ಪೋಷಣೆ ಸಿಗುತ್ತದೆ ಮತ್ತು ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ. ಇದರೊಂದಿಗೆ ಕೂದಲು ಉದುರುವಿಕೆಯ ಪ್ರಕ್ರಿಯೆಯೂ ನಿಧಾನವಾಗುತ್ತದೆ.

ಇದನ್ನೂ ಓದಿ: ಗ್ರೀನ್ ಟೀ ಕುಡಿಯುವ ಅಭ್ಯಾಸ ನಿಮಗೂ ಇದೆಯೇ ? ಹಾಗಿದ್ದರೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು

ಕೂದಲಿಗೆ ಪೋಷಣೆ ಸಿಗುತ್ತದೆ

ನಿಯಮಿತವಾಗಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿನ ಬೇರುಗಳು ಆಳವಾದ ಪೋಷಣೆಯನ್ನು ಪಡೆಯುತ್ತವೆ. ಮತ್ತೊಂದೆಡೆ ನೀವು ಉದುರಿದ ಕೂದಲನ್ನು ಸರಿಪಡಿಸಲು ಬಯಸಿದರೂ ನಿಯಮಿತವಾಗಿ ಎಣ್ಣೆಯನ್ನು ಹಚ್ಚಬೇಕು.

(Disclaimer: ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸುವ ಮೊದಲು ದಯವಿಟ್ಟು ವೈದ್ಯಕೀಯ ಸಲಹೆ ಪಡೆಯಿರಿ. ZEE NEWS ಇದನ್ನು ದೃಢೀಕರಿಸುವುದಿಲ್ಲ.)   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News