Face Mask For Skin Beauty : ಮಹಿಳೆಯರು ಮನೆ ಮಂದಿಯ ಆರೈಕೆ, ಕಾಳಜಿ ವಹಿಸುತ್ತಾರೆ. ಮನೆಯ ಸದಸ್ಯರ ಬೇಕು ಬೇಡಗಳ ಬಗ್ಗೆ ಗಮನ ವಹಿಸುತ್ತಾರೆ. ಈ ನಡುವೆ ತಮ್ಮನ್ನು ತಾವು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಡುತ್ತಾರೆ. ಅದರ ಪರಿಣಾಮ ಮಹಿಳೆಯರ ಮುಖದ ಮೇಲೂ ಕಾಣುತ್ತದೆ. ನೀವು ಕೂಡಾ ಇಂಥಹ ಸಮಸ್ಯೆ ಎದುರಿಸುತ್ತಿದ್ದರೆ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ರಾತ್ರಿ ಮಲಗುವ ಮುನ್ನ ಮನೆಯಲ್ಲಿಯೇ ಸುಲಭವಾಗಿ ತಯಾರಿಸುವ ಫೇಸ್ ಮಾಸ್ಕ್ ಅನ್ನು ಹಚ್ಚುವುದರಿಂದ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಾಗುತ್ತದೆ.
ರಾತ್ರಿ ವೇಳೆ ಈ 5 ರೀತಿಯ ಫೇಸ್ ಮಾಸ್ಕ್ ಗಳನ್ನು ಹಚ್ಚಿ :
1. ಕಲ್ಲಂಗಡಿ ರಸ :
ಕಲ್ಲಂಗಡಿ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಕಲ್ಲಂಗಡಿ ಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಬೇಕು. ಹೀಗೆ ಮುಖಕ್ಕೆ ಕಲ್ಲಂಗಡಿ ರಸವನ್ನು ಹಚ್ಚಿ ಬೆಳಗಿನವರೆಗೆ ಹಾಗೆಯೆ ಬಿಡಬೇಕು. ಮರುದಿನ ಬೆಳಿಗ್ಗೆ ಮುಖವನ್ನು ತೊಳೆಯಿರಿ. ಹೀಗೆ ಮಾಡಿದರೆ ಮುಖದ ಮೇಲಿನ ಸುಕ್ಕು ಮಾಯವಾಗುತ್ತದೆ.
ಇದನ್ನೂ ಓದಿ : ಫಿಶ್ ಪೆಡಿಕ್ಯೂರ್ ಮಾಡುವುದು ಸುರಕ್ಷಿತ ಮತ್ತು ಪ್ರಯೋಜನಕಾರಿಯೇ? ಇದರ ಬಗ್ಗೆ ತಿಳಿಯಿರಿ..
2. ರೋಸ್ ವಾಟರ್ :
ರೋಸ್ ವಾಟರ್ ಮುಖದ ಕಾಂತಿ ಹೆಚ್ಚಿಸಲು ಸಹಾಯವಾಗುತ್ತದೆ. ಇದು ತ್ವಚೆಯಲ್ಲಿ ಅಡಗಿರುವ ಕೊಳೆಯನ್ನು ಹೋಗಲಾಡಿಸುವುದಲ್ಲದೆ ತ್ವಚೆಯನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುತ್ತದೆ. ಮಲಗುವ ಮೊದಲು, ಹತ್ತಿಯ ಮೂಲಕ ಮುಖಕ್ಕೆ ರೋಸ್ ವಾಟರ್ ಹಚ್ಚಿದರೆ ಮುಖದ ಕಾಂತಿ ಹೆಚ್ಚುವುದು.
3. ಆಲೂಗಡ್ಡೆ ಜ್ಯೂಸ್-ಗ್ರೀನ್ ಟೀ :
ತಣ್ಣನೆಯ ಗ್ರೀನ್ ಟೀ ಮತ್ತು ಆಲೂಗಡ್ಡೆ ರಸವನ್ನು ಒಂದು ಬಟ್ಟಲಿನಲ್ಲಿ ಬೆರೆಸಿ ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಬೇಕು. ಈ ಮಿಶ್ರಣವನ್ನು ಮುಖದ ಮೇಲೆ ಹಾಗೆಯೇ ಬಿಟ್ಟು ಬೆಳಗ್ಗೆ ಮುಖವನ್ನು ಸ್ವಚ್ಚಗೊಳಿಸಿ. ಮುಖವನ್ನು ಸ್ಪರ್ಶಿಸಿದಾಗ ಅದರ ಪರಿಣಾಮವು ಸ್ಪಷ್ಟವಾಗಿ ಗೋಚರಿಸುತ್ತದೆ. ಗ್ರೀನ್ ಟೀ ನಮ್ಮ ಆರೋಗ್ಯ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : ಚಹಾ ಅಥವಾ ಕಾಫಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿಯೇ? 99% ಜನರಿಗೆ ಇದರ ಬಗ್ಗೆ ತಿಳಿದಿಲ್ಲ
4. ನಿಂಬೆ-ಕ್ರೀಮ್ ಫೇಸ್ ಮಾಸ್ಕ್ :
ನಿಂಬೆ ರಸವು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮವನ್ನು ಟೋನ್ ಮಾಡಲು ಆಯಿಲ್ ಫ್ರೀ ಮಾಡಲು ಸಹಾಯ ಮಾಡುತ್ತದೆ.ಇದರ ಹೊರತಾಗಿ ಕೆನೆಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ ಒಂದು ಚಮಚ ಕೆನೆ ತೆಗೆದುಕೊಂಡು ಅದರಲ್ಲಿ ನಿಂಬೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ.ಈಗ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಟ್ಟು ಬೆಳಗ್ಗೆ ಮುಖವನ್ನು ತೊಳೆಯಿರಿ.
5. ಹಾಲು ಮತ್ತು ಅರಿಶಿನ :
ಬಿಸಿಲಿನಿಂದ ಮುಖ ಟ್ಯಾನ್ ಆಗಿದ್ದರೆ ಹಾಲು ಮತ್ತು ಅರಶಿನವನ್ನು ಬಳಸಬಹುದು. ಹಾಲು ಆಂಟಿ ಟ್ಯಾನರ್ ಆಗಿ ಬಳಕೆಯಾಗುತ್ತದೆ.ಅಲ್ಲದೆ,ಅರಿಶಿನದಲ್ಲಿರುವ ಆಂಟಿಸೆಪ್ಟಿಕ್ ಗುಣ ಮುಖವನ್ನು ಕಾಂತಿಯುತವಾಗಿಸುತ್ತದೆ. ಹಾಲು ಮತ್ತು ಅರಿಶಿನದ ಮಿಶ್ರಣವನ್ನು ಬಳಸಿ ಫೇಸ್ ಮಾಸ್ಕ್ ತಯಾರಿಸಲು ಅರ್ಧ ಚಮಚ ಅರಿಶಿನ ಮತ್ತು ಹಸಿ ಹಾಲನ್ನು ಬೆರೆಸಬೇಕು. ಇದನ್ನು ಮುಖಕ್ಕೆ ಹಚ್ಚಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.
ಇದನ್ನೂ ಓದಿ : ಹೇರ್ ಡೈ, ಕಲರ್ ಗೆ ಹೇಳಿ ಗುಡ್ ಬೈ, ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಹಚ್ಚಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ
(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಲು ಮರೆಯದಿರಿ. Zee Media ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ