Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು & ಬಡ್ತಿ ಭಾಗ್ಯ ದೊರೆಯಲಿದೆ

ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ನಷ್ಟವಾಗುವ ಸಂಭವವಿದೆ. ಸಿಂಹ ರಾಶಿಯವರ ಭವಿಷ್ಯದ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿವೆ. ನಿಮ್ಮ ಶನಿವಾರದ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Oct 29, 2022, 05:57 AM IST
  • ವೃಶ್ಚಿಕ ರಾಶಿಯ ಜನರು ನಿಮ್ಮ ಕೋಪವನ್ನು ನಿಯಂತ್ರಿಸಬೇಕು
  • ಕುಂಭ ರಾಶಿಯ ಜನರು ಇಂದು ಯಾರಿಗೂ ಸಾಲವನ್ನು ಕೊಡಬೇಡಿ
  • ಮಿಥುನ ರಾಶಿಯ ಜನರ ಕುಟುಂಬದಲ್ಲಿ ಸುಖ- ಸಂತೋಷ ಇರುತ್ತದೆ
Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು & ಬಡ್ತಿ ಭಾಗ್ಯ ದೊರೆಯಲಿದೆ title=
Horoscope Today, October 29

Horoscope Today (29-10-2022): ಹೊಸ ಉದ್ಯೋಗವನ್ನು ಪಡೆಯಲು ಪ್ರಯತ್ನಿಸುವುದು, ಹೊಸ ಮನೆ ಕಟ್ಟಿಸಲು ಯೋಚಿಸುವುದು ಅಥವಾ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಯೋಚಿಸುವುದು. ಇವೆಲ್ಲವೂ ನಿಮ್ಮ ಜೀವನದ ದೊಡ್ಡ ನಿರ್ಧಾರಗಳಾಗಿವೆ. ಜೀವನದಲ್ಲಿ ಮುಂದೆ ನಡೆಯುವ ಮೊದಲು ನಿಮ್ಮ ನಕ್ಷತ್ರಗಳ ಸಹಾಯ ಪಡೆದುಕೊಳ್ಳುವುದು ಮತ್ತು ನಿಮ್ಮ ಹಣೆಬರಹದಲ್ಲಿನ ಗ್ರಹಗಳ ಸ್ಥಾನಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.

ಮೇಷ ರಾಶಿ: ಯಾರಿಗೂ ಸಾಲವನ್ನು ಕೊಡಬೇಡಿ. ವ್ಯಾಪಾರ ಯಶಸ್ಸನ್ನು ಊಹಿಸಲಾಗಿದೆ. ತೆಂಗಿನಕಾಯಿ ದಾನ ಮಾಡಿ.

ಅದೃಷ್ಟದ ಬಣ್ಣ- ಚಿನ್ನ

ವೃಷಭ ರಾಶಿ: ವ್ಯಾಪಾರದಲ್ಲಿ ನಷ್ಟವಾಗುವ ಸಂಭವವಿದೆ. ಹಳೆಯ ಸ್ನೇಹಿತನನ್ನು ಭೇಟಿಯಾಗುವಿರಿ. ಯಾರೊಂದಿಗೂ ವಾದ ಮಾಡಬೇಡಿ.

ಅದೃಷ್ಟ ಬಣ್ಣ- ನೀಲಿ

ಮಿಥುನ ರಾಶಿ: ಪೋಷಕರ ಆಶೀರ್ವಾದ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಸ್ನೇಹಿತರಿಂದಲೂ ನಿಮಗೆ ಸಹಾಯ ಸಿಗಲಿದೆ.

ಅದೃಷ್ಟದ ಬಣ್ಣ - ಹಸಿರು

ಕರ್ಕಾಟಕ ರಾಶಿ: ವ್ಯಾಪಾರದಲ್ಲಿ ಲಾಭ ಇರುತ್ತದೆ. ವಾಹನ ಖರೀದಿ ನಿರೀಕ್ಷೆ ಇದೆ. ಸಮಾಜದಲ್ಲಿ ನಿಮಗೆ ಹೆಚ್ಚಿನ ಗೌರವ ಸಿಗಲಿದೆ.

ಅದೃಷ್ಟದ ಬಣ್ಣ- ಮರೂನ್

ಇದನ್ನೂ ಓದಿ: Lucky Finger: ಪತ್ನಿಯ ಬೆರಳುಗಳು ಹೀಗಿದ್ದರೆ ಪತಿಗೆ ಅದೃಷ್ಟ!

ಸಿಂಹ ರಾಶಿ: ಮಧ್ಯಾಹ್ನದ ವೇಳೆಗೆ ಶುಭ ಸುದ್ದಿ ಸಿಗಲಿದೆ. ಸಾಲವಾಗಿ ಕೊಟ್ಟ ಹಣ ವಾಪಸ್ ಬರುತ್ತದೆ. ಭವಿಷ್ಯದ ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿವೆ

ಅದೃಷ್ಟದ ಬಣ್ಣ - ಹಸಿರು

ಕನ್ಯಾ ರಾಶಿ: ನಿಮ್ಮ ಕೆಲಸವನ್ನು ಸಂತೋಷದಿಂದ ಮಾಡಿ. ಅಜಾಗರೂಕತೆಯು ನಿಮಗೆ ನಷ್ಟವನ್ನುಂಟು ಮಾಡಬಹುದು. ನಿಮ್ಮ ಸಂಗಾತಿಯು ನಿಮ್ಮನ್ನು ಬೆಂಬಲಿಸುತ್ತಾರೆ.

ಅದೃಷ್ಟದ ಬಣ್ಣ - ಹಸಿರು

ತುಲಾ ರಾಶಿ: ಹೊಸದಾಗಿ ಹೂಡಿಕೆ ಮಾಡಬಹುದು. ಸಂತತಿಗೆ ಸಂಬಂಧಿಸಿದ ಕಾಳಜಿ ಕೊನೆಗೊಳ್ಳುತ್ತದೆ. ಕುಟುಂಬದಲ್ಲಿ ಯಾವುದೇ ವಿವಾದಗಳಿಗೆ ಅವಕಾಶ ನೀಡಬೇಡಿ.

ಅದೃಷ್ಟದ ಬಣ್ಣ- ನೀಲಿ

ವೃಶ್ಚಿಕ ರಾಶಿ: ವಿದೇಶ ಪ್ರಯಾಣ ಯಶಸ್ವಿಯಾಗಲಿದೆ. ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ.

ಅದೃಷ್ಟದ ಬಣ್ಣ- ಹಳದಿ

ಇದನ್ನೂ ಓದಿ: Chanakya Niti: ಈ ವಿಷಯಗಳಲ್ಲಿ ಪುರುಷರು ಮಹಿಳೆಯರ ಮುಂದೆ ಸೋಲೋಪ್ಪಿಕೊಳ್ಳಲೇಬೇಕು!

ಧನು ರಾಶಿ: ನಿಮ್ಮ ದಿನದ ಧಾವಂತ ಕೊನೆಗೊಳ್ಳಲಿದೆ. ಅಂದುಕೊಂಡಿದ್ದನ್ನು ಪಡೆಯುವಲ್ಲಿ ಕೊಂಚ ಅಡೆತಡೆಗಳನ್ನು ಎದುರಿಸಬಹುದು. ಹಣದ ಖರ್ಚು ಹೆಚ್ಚಾಗಲಿದೆ.

ಅದೃಷ್ಟದ ಬಣ್ಣ- ಮರೂನ್

ಮಕರ ರಾಶಿ:  ಮನೆಯಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಮ್ಮ ಸ್ನೇಹಿತರಿಂದ ಸಲಹೆ ಪಡೆಯಿರಿ. ಸಂಬಂಧಗಳಲ್ಲಿ ಮಧುರತೆ ಇರುತ್ತದೆ.

ಅದೃಷ್ಟದ ಬಣ್ಣ – ಕ್ಯಾರೆಟ್

ಕುಂಭ ರಾಶಿ:-ಇಂದು ಯಾರಿಗೂ ಸಾಲ ಕೊಡಬೇಡಿ. ವ್ಯಾಪಾರ ಸಮಸ್ಯೆಗಳು ಮೊದಲಿಗಿಂತ ಕಡಿಮೆಯಾಗಲಿವೆ. ಸ್ನೇಹಿತರು ನಿಮ್ಮ ಜೊತೆಯಾಗುತ್ತಾರೆ.

ಅದೃಷ್ಟದ ಬಣ್ಣ - ಗುಲಾಬಿ

ಮೀನ ರಾಶಿ: ಮನೆಯ ಹಿರಿಯರೊಂದಿಗೆ ಸಮಯ ಕಳೆಯಿರಿ. ನಿಮ್ಮ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ. ಸಂಬಂಧಗಳಲ್ಲಿ ಮಧುರತೆ ಇರುತ್ತದೆ.

ಅದೃಷ್ಟದ ಬಣ್ಣ - ಬೂದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News